ಸ್ಪಂದನಾ ಸೋಮಣ್ಣ ಮೂಲತಃ ಮೈಸೂರಿನವರು. ಮೈಸೂರಿನಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ. ಎಂಜಿನಿಯರಿAಗ್ ಮುಗಿಸಿರುವ ಸ್ಪಂದನಾ ನೇರವಾಗಿ ಬಂದಿದ್ದು ನಟನಾ ಕ್ಷೇತ್ರಕ್ಕೆ. ಇಂಜಿನಿಯರಿAಗ್ ಕ್ಷೇತ್ರದಲ್ಲಿಯೇ ಕೆಲಸವೂ ಸಿಕ್ಕಿತ್ತು. ಪುಣೆಗೆ ಹೋಗಬೇಕಾದವರು ಚಂದನವನಕ್ಕೆ ಎಂಟ್ರಿ ಕೊಟ್ಟರು. ನಟನೆಯನ್ನೇ ಆಯ್ಕೆ ಮಾಡಿಕೊಂಡರು. ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಂದನಾ ಹೆಚ್ಚು ಆಕ್ಟೀವ್ ಆಗಿದ್ದ ಕಾರಣ ಆ ಮೂಲಕವೇ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದವು. ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ಸ್ಪಂದನಾ ತಮ್ಮದೇ ಆದ ಹೆಸರು ಮಾಡಿದ್ದಾರೆ. ಗೃಹಪ್ರವೇಶ ಧಾರಾವಾಹಿಯಲ್ಲಿ ಪಲ್ಲವಿಯಾಗಿ ಕಾಣಿಸಿಕೊಂಡು ಮನೆಯವರ ಮನಸ್ಸನ್ನು ಗೆದ್ದ ಸ್ಪಂದನಾ ಸದ್ಯ ಕರಿಮಣಿಯಲ್ಲಿ ಮಾಲೀಕನ ಹುಡುಕಾಟದಲ್ಲಿದ್ದಾರೆ.
ಸೀರಿಯಲ್ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಈಗಾಗಲೇ ದಿಲ್‌ಖುಷ್ ಹಾಗೂ ಮರೀಚಿ ಸಿನಿಮಾಗಳಲ್ಲಿ ನಟಿಸಿದ್ದು, ಅಭಿಮನ್ಯು ಸನ್ ಆಫ್ ಕಾಶೀನಾಥ್ ಸಿನಿಮಾಗೂ ಆಯ್ಕೆಯಾಗಿದ್ದಾರೆ. ಇಷ್ಟು ಬ್ಯುಸಿ ಶೆಡ್ಯೂಲ್‌ನಲ್ಲೂ ತಮ್ಮ ಲೈಫ್ ಸ್ಟೆöÊಲ್ ಅನ್ನು ಚೆಂದವಾಗಿ ನೋಡಿಕೊಂಡಿದ್ದಾರೆ. ನಟಿಯರು ಅಂದ್ರೆ ಅದು ಬಹಳ ಮುಖ್ಯವಲ್ಲ.
ಸ್ಪಂದನಾ ಸೋಮಣ್ಣ ಅತ್ತ ಧಾರಾವಾಹಿ.. ಇತ್ತ ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ಅವರ ಆಸೆ ಕೂಡ ಅದೆ. ಒಬ್ಬ ಕಲಾವಿದೆಯಾಗಿ ಸಿನಿಮಾ, ಸೀರಿಯಲ್ ಅಂತ ನೋಡೋದಲ್ಲ. ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಬೇಕು ಎನ್ನುತ್ತಾರೆ. ಇನ್ನು ತಮ್ಮಿಷ್ಟದ ಫುಡ್ ಬಗ್ಗೆಯೂ ಮಾತನಾಡಿದ್ದು, `ನಾನು ನಾನ್‌ವೆಜ್ ಪ್ರಿಯೆ. ಡೈಲಿ ಕೊಟ್ಟರು ತಿಂದುಬಿಡುತ್ತೇನೆ. ಮನೆಯಲ್ಲಿ ಮಾಡುವ ಅಡುಗೆ ತುಂಬಾ ಇಷ್ಟ. ಸ್ಪೆöÊಸಿಯಾಗಿ ಮಾಡಿಕೊಳ್ಳುವುದು ತುಂಬಾ ಇಷ್ಟ ಆಗುತ್ತೆ. ಜೊತೆಗೆ ನನಗೂ ಅಡುಗೆ ಮಾಡುವುದಕ್ಕೆ ಬರುತ್ತೆ.
ಹೀಗಾಗಿ ನಾನೇ ಅಡುಗೆ ಮಾಡಿಕೊಳ್ಳುತ್ತೇನೆ. ಪೆಪ್ಪರ್ ಚಿಕನ್, ಪೆಪ್ಪರ ಡ್ರೆöÊ, ಚಪಾತಿ ಈ ಥರದ ಫುಡ್ ತುಂಬಾ ಇಷ್ಟ ಆಗುತ್ತೆ. ಮೊದಲೆಲ್ಲಾ ಹೊರಗೆ ಹೆಚ್ಚು ತಿಂತಾ ಇದ್ದೆ. ಅದರಲ್ಲೂ ಜಂಕ್ ಫುಡ್ ಅನ್ನೇ ಹೆಚ್ಚಾಗಿ ತಿಂತಾ ಇದ್ದೆ. ಆದರೆ ಈಗ ಸೆಟ್‌ಗೆ ಹೋದಾಗಲೂ ಮನೆಯಿಂದಾನೇ ಊಟ ತೆಗೆದುಕೊಳ್ಳುತ್ತೇನೆ. ಒಮ್ಮೊಮ್ಮೆ ಸಲಾಡ್ ತಿಂದು ಸುಮ್ನೆ ಆಗ್ತೀನಿ. ಮೋಸ್ಟ್ ಆಫ್ ದಿ ಟೈಮ್ ರೈಸ್ ಅವೈಡ್ ಮಾಡ್ತೀನಿ. ಯಾವುದಾದರೂ ಒಂದು ಪಲ್ಯ ಕಂಪಲ್ಸರಿ ಇರುತ್ತೆ. ಜೊತೆಗೆ ರೆಗ್ಯುಲರ್ ಆಗಿ ಒಂದು ಲೋಟ ರಾಗಿ ಹಂಬಲಿ ಇರುತ್ತೆ. ಎಳನೀರನ್ನು ಕುಡಿಯುತ್ತೀನಿ. ಸ್ಕಿನ್ ಡಿಹೈಡ್ರೇಟ್ ಆಗಬಾರದು ಅಲ್ವಾ. ಹೀಗಾಗಿ ಪ್ರತಿದಿನ ಎಳನೀರು ಕುಡಿತೀನಿ’.