ಪುಟ್ಟಕ್ಕನ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮಗಳು ಸತ್ತಿದ್ದಾಳೆಂದು ಭಾವಿಸಿ, ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಆದರೆ ಸತ್ತಿದ್ದು ಸಹನಾ ಅಲ್ಲ, ಕಳ್ಳಿ ಎಂಬುದು ಗೊತ್ತಾಗಿದೆ.
ಮನೆ ಬಿಟ್ಟ ಸಹನಾ ಬಸ್ನಲ್ಲಿ ಹೋಗುವಾಗ ಪಕ್ಕದಲ್ಲಿಯೇ ಇದ್ದಳು ಈ ಕಳ್ಳಿ. ಸಹನಾ ನಿದ್ದೆಗೆ ಜಾರಿದಾಗ ಅವಳ ಎಲ್ಲಾ ಬ್ಯಾಗ್ ಸೇರಿದಂತೆ ಎಲ್ಲಾ ಸಾಮಾನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಆ ಸಮಯದಲ್ಲಿ ಅಪಘಾತವಾಗಿ ಅವಳು ಸತ್ತುಹೋಗಿದ್ದಾಳೆ.
ಇದನ್ನೂ ಓದಿ:ಬಂಪರ್ ಆಫರ್.. ಕೇವಲ ರೂ.99ಕ್ಕೆ `ರಾಮನ ಅವತಾರ’!
ಮುಖ ಚಚ್ಚಿದ್ದರಿಂದ ಅವಳ ಗುರುತು ಹಿಡಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಅವಳ ಬಳಿ ಸಹನಾಗೆ ಸೇರಿದ ಎಲ್ಲಾ ವಸ್ತುಗಳು ಇದ್ದುದರಿಂದ ಪೊಲೀಸರು ಇದು ಸಹನಾ ಇರಬಹುದು ಎಂದಾಗ, ಖುದ್ದು ಪುಟ್ಟಕ್ಕನೇ ಸಹನಾ ಎಂದು ಗುರುತಿಸಿ, ಅಂತ್ಯಕ್ರಿಯೆ ಮಾಡಲಾಗಿದೆ.
ಮನೆಯಲ್ಲಿ ಸಹನಾ ಸತ್ತಿರುವ ಬಗ್ಗೆ ಪುಟ್ಟಕ್ಕನ ರೋಧನೆ ಮುಗಿಲು ಮುಟ್ಟಿದೆ. ಮನೆಗೆ ಬಂದ ಮಗಳನ್ನು ತಾನೇ ಸಾವಿನ ಬಾಯಿಗೆ ನೂಕಿದೆ ಎಂಬ ಕೊರಗು. ಇನ್ನೊಂದೆಡೆ ಎಚ್ಚರಗೊಂಡ ಸಹನಾಗೆ ತನ್ನ ಬ್ಯಾಗ್ ಕಾಣೆಯಾಗಿರುವುದು ತಿಳಿದಿದೆ. ಕಂಡಕ್ಟರ್ ಬಳಿ ಗೋಳೋ ಎಂದುಕೊಂಡಿದ್ದಾಳೆ.ಕೈಯಲ್ಲಿ ಕಾಸಿಲ್ಲ. ಎಲ್ಲವನ್ನೂ ಕಳೆದುಕೊಂಡಿದ್ದಾಳೆ. ಏನು ಮಾಡುವುದು ಎಂದು ಅವಳಿಗೆ ತಿಳಿಯದೇ ಅಳುತ್ತಿದ್ದಾಳೆ.
ಮನೆಗೆ ಬಂದಿರುವ ಮಗಳನ್ನು ಪುಟ್ಟಕ್ಕ ಹೊರೆ ಎಂದೇನೂ ಭಾವಿಸಲಿಲ್ಲ. ಅವಳ ಆಸೆ ಇದ್ದುದು ಪತಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಮಗಳು ಹೋಗಲಿ ಎನ್ನುವುದು. ಅದಕ್ಕಾಗಿಯೇ ಒಂದಿಷ್ಟು ಬುದ್ಧಿ ಮಾತು ಹೇಳಿದ್ದಳು. ಆದರೆ ಸಹನಾ ಗಂಡನ ಮನೆ ಬಿಟ್ಟು ಬಂದಿದ್ದರ ಹಿಂದೆ ಬಹುದೊಡ್ಡ ಕಾರಣವೇ ಇತ್ತು. ಅತ್ತೆ ವಿಷ ಹಾಕಿ ಕೊಲ್ಲಲು ನೋಡಿದ್ದಳು. ಅದನ್ನಾದರೂ ಸಹನಾ ಸಹಿಸಿಕೊಂಡು ಬಿಡುತ್ತಿದ್ದಳೋ ಏನೋ.
ಇದನ್ನೂ ಓದಿ :ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ನೋಡುಗರಿಗೂ ಕಣ್ಣೀರು ತರಿಸುವ ಎಪಿಸೋಡ್..!
ಆದರೆ ಪ್ರೀತಿಸಿದ ಪತಿಯೇ ತನ್ನನ್ನು ನಂಬದೇ, ಅಮ್ಮನ ಪರ ವಹಿಸಿಕೊಂಡಿದ್ದು ಆಕೆಗೆ ಸಹಿಸಲು ಆಗಲಿಲ್ಲ. ಅದಕ್ಕಾಗಿಯೇ ಮನೆಗೆ ವಾಪಸಾಗಿದ್ದಳು. ಆದರೆ ಅಮ್ಮನ ಬುದ್ಧಿಮಾತು ಸಹಿಸದೇ ಅವಳು ಮನೆಬಿಟ್ಟು ಹೋಗಿದ್ದಾಳೆ.
ಅರ್ಜುನ್ ಸರ್ಜಾ ಪುತ್ರಿ ಮದುವೆಗೆ ಮುಹೂರ್ತ ಫಿಕ್ಸ್ : ಎಲ್ಲಿ, ಯಾವಾಗ ಎಂಬ ಮಾಹಿತಿ ಇಲ್ಲಿದೆ
ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ತಮಿಳಿನ ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಜೊತೆ ನಟಿ ಮದುವೆಯಾಗಲಿದ್ದಾರೆ. ಸದ್ಯ ಮದುವೆಯ ದಿನಾಂಕ ನಿಗದಿಯಾಗಿದೆ. ನಟ ಅರ್ಜುನ್ ಸರ್ಜಾ ಸದ್ಯ ತಮ್ಮ ಮೊದಲನೇ ಮಗಳು ಐಶ್ವರ್ಯಾ ಮದುವೆ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.