ಬಣ್ಣದಲೋಕದಲ್ಲಿ ಮಿಂಚುವ ಆಸೆಯಿಂದ ಸಾಕಷ್ಟು ಮಂದಿ ಪ್ರಯತ್ನ ಪಡುತ್ತಲೇ ಇರುತ್ತಾರೆ. ಅದರಲ್ಲಿ ಕೆಲವರು ಯಾವುದೇ ಪೂರ್ವ ತಯಾರಿಯಿಲ್ಲದೆ ಕೇವಲ ಬಣ್ಣದ ಕನಸುಗಳನ್ನು ಹೊತ್ತು ಸಿನಿಮಾ ಪ್ರಪಂಚದ ಬಾಗಿಲು ತಟ್ಟಿ ಧೀಡರನೆ `ಸ್ಟಾರ್’ ಅನ್ನಿಸಿಕೊಳ್ಳುವ ಭರದಲ್ಲಿ ಎಡವುತ್ತಾರೆ. ಆದರೆ ಇಲ್ಲೊಬ್ಬರು ಪ್ರತಿಭಾವಂತ ನಟಿ ಸಂಪೂರ್ಣ ಪೂರ್ವ ತಯಾರಿಯೊಂದಿಗೆ ಸಿನಿ ಲೋಕಕ್ಕೆ ಕಾಲಿಟ್ಟು ಹಲವು ವರ್ಷಗಳ ಕಾಲ ತನ್ನ ಸಮಯಕ್ಕಾಗಿ ಕಾದು ಬ್ಯೂಸಿ ನಟಿ ಅನ್ನಿಸಿಕೊಂಡು, ಈಗ ಮರಿಟೈಗರ್ ವಿನೋದ್ ಪ್ರಭಾಕರ್ ಅವರ `ಲಂಕಾಸುರ’ ಚಿತ್ರದಲ್ಲಿ ಉತ್ತಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ನಟಿ ಬೇರೆ ಯಾರೂ ಅಲ್ಲ ಸಹನಾ ಗೌಡ.ಇವರು ಸಿನಿಮಾ ರಂಗಕ್ಕೆ ಕಾಲಿಡುವ ಮೊದಲು ಬಾಂಬೆಯಲ್ಲಿ ಶೂಟಿಂಗ್ ಕಲ್ಚರ್‌ನ ಅನುಭವಕ್ಕಾಗಿ ಒಂದಷ್ಟು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವುದರ ಜೊತೆಗೆ ಅನುಪ್‌ಖೇರ್ ಅವರ ನಟನಾ ತರಬೇತಿ ಕಾರ್ಯಗಾರದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ಅನಿರೀಕ್ಷಿತ ತಿರುವುಗಳನ್ನು ಹೊತ್ತ ಕಾಡುವ ಪ್ರೇಮ ಕಥೆ!
ಬಿ.ಕಾO ಮುಗಿಸಿರುವ ಸಹನಾ, ಮೂಲತಃ ಬೆಂಗಳೂರಿನವರು. ಇವರ ಸಿನಿಮಾ ಆಸಕ್ತಿಗೆ ಇವರ ತಾತನೇ ಪ್ರೇರಣೆ. ಇವರ ತಾತ ಹಿರಿಯ ನಟರಾದ ಶ್ರೀ ಭಟ್ಟಿ ಮಹದೇವಪ್ಪನವರು, ಡಾ||ರಾಜ್‌ಕುಮಾರ್ ಅವರ ಸಾಕಷ್ಟು ಚಿತ್ರಗಳಲ್ಲಿ ಉತ್ತಮ ಪಾತ್ರಗಳ ಮೂಲಕ ದಶಕಗಳ ಕಾಲ ಗುರುತಿಸಿಕೊಂಡವರು. ಅವರ ದಾರಿಯಲ್ಲೇ ಮುಂದುವರಿದಿರುವ ಸಹನಾ, ಈಗಾಗಲೇ ಪ್ರೇಕ್ಷಕ ಗುರುತಿಸಿವಂತಹ ಪಾತ್ರಗಳಿಗಿರುವ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವುಗಳಲ್ಲಿ ರಿಲೀಸ್‌ಗೆ ಹಂತದಲ್ಲಿರುವ ಪ್ರಮುಖ ಚಿತ್ರಗಳೆಂದರೆ, ನಟ ವಿಜಯ್ ರಾಘವೇಂದ್ರ ಅವರೊಡನೆ `2ಬಿಹೆಚ್‌ಕೆ’, ಕೋಮಲ್ ಕುಮಾರ್ ಅವರ `2020’, ಪ್ರಥ್ವಿ ಅಂಬರ್ ನಟನೆಯ `ಹ್ಯಾಪೀ ಮ್ಯಾರೀಡ್ ಲೈಫ್’ ಮತ್ತು ಬಹನಿರೀಕ್ಷಿತ ವಿನೋದ್ ಪ್ರಭಾಕರ್ ನಟನೆಯ `ಲಂಕಾಸುರ’. ಇವರು `ಲಂಕಾಸುರ’ ಚಿತ್ರದಲ್ಲಿ ಲೀಸಾ ಎಂಬ ಪಾತ್ರದ ಬಗ್ಗೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಉದ್ಯಾನನಗರಿಯಲ್ಲಿ ಶುರುವಾಯ್ತು `ಲೈಗರ್’ ಫಿವರ್!
ಇನ್ನು `ಬಹುಕೃತವೇಶಂ’ ಎಂಬ ಚಿತ್ರ ಈಗಾಗಲೇ ರಿಲೀಸ್ ಆಗಿದ್ದು ಸಹನಾ ಗೌಡ ಅವರ ಪಾತ್ರಕ್ಕೆ ಉತ್ತಮ ಪ್ರಶಂಸೆ ಬಂದಿತ್ತು.ಸಹನ ಗೌಡ ಅವರು ಕೆವಲ ಕನ್ನಡಕಷ್ಟೇ ಸಿಮೀತವಾಗದೆ ಬೇರೆ ಭಾಷೆಗಳಲ್ಲೂ ತಮ್ಮ ಪ್ರತಿಭೆಯ ಅನಾವರಣ ಮಾಡುತ್ತಿದ್ದಾರೆ.
ಮಲಯಾಳಂನ ಪ್ರಮುಖ ನಟರಾದ, ರಾಹುಲ್ ಮಹದೇವ್, ಕೈಲಾಶ್, ಸಂತೋಷ್ ಮತ್ತು ಲೀನಾ ಅಭಿನಯದ `ನೋಬಡೀ’ ಚಿತ್ರದಲ್ಲಿ ಲೀಡ್‌ರೋಲ್‌ನಲ್ಲಿ ಕಾಣಿಸಿಕೋಂಡಿದ್ದು, ತಮಿಳಿನ ಯೋಗಿಬಾಬು ನಟನೆಯ ಸಿನಿಮಾದಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ನಟಿ ಅನ್ನಿಸಕೊಳ್ಳುವು ದು ಸುಲಭದ ಮಾತಲ್ಲ ಅನ್ನುವ ಸಹನಾ ಗೌಡ, ಹೊಸದಾಗಿ ಬಣ್ಣದ ಕನಸನ್ನು ಕಟ್ಟಿಕೊಂಡು ಬರುವವರು ಬಹಳ ಎಚ್ಚರಿಕೆಯಂದ ಹೆಜ್ಜೆ ಇಡಬೇಕು, ಇಲ್ಲಿ ಮಿಸ್‌ಗೈಡ್ ಆಗುವ ಸಾಧ್ಯತೆ ಹೆಚ್ಚು, ನಟನೆಯ ಬಗ್ಗೆಯ ಷ್ಟೇ ಧ್ಯಾನ ವಹಸಿ ತಾಳ್ಮೆಯಿಂದ ಕಾಯಬೇಕು… ಎಂಬ ಅನುಭವದ ಮಾತನ್ನು ಹೇಳುತ್ತಾರೆ. ಏಕೆಂದರೆ ಇವರು ಕೂಡ ದಿನ ಬೆಳಗಾಗುವುದರಲ್ಲಿ ನಟಿಯಾಗಲಿಲ್ಲ.
`ನವಂಬರ್‌ನ ಮಳೆ’ಯಲ್ಲಿ ತೋಯ್ದ ನಾಗ್‌ಶೇಖರ್&ಅನು ಸಿತಾರ!
ಸಾಕಷ್ಟು ವರ್ಷಗಳ ಪ್ರಾಮಾಣಿಕ ಪ್ರಯತ್ನ, ಸಿದ್ಧತೆ ಮತ್ತು ತಾಳ್ಮೆಯಿಂದ ಈಗ ಉತ್ತಮ ಪಾತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸಹನಾ ಗೌಡ, ಕೇವಲ ಮಾಡರ್ನ್ ಪಾತ್ರಗಳಿಗಷ್ಟೇ ಸಿಮೀತವಾಗಿರದೆ ಅಭಿನಯಕ್ಕೆ ಸಾಕಷ್ಟು ಅವಕಾಶವಿರುವ, ಫಿಮೇಲ್ ಲೀಡ್ ಚಿತ್ರಗಳಲ್ಲಿ ನಟಿಸುವ ಆಸಕ್ತಿ ಹೊಂದಿದ್ದು, ಅಂತಹ ಪಾತ್ರಗಳ ನಿರೀಕ್ಷೆಯಲ್ಲಿದ್ದ. ಸ್ವತಃ ಉತ್ತಮ ಡ್ಯಾನ್ಸರ್ ಆಗಿರುವ ಸಹನಾ, ಅಪ್ಪು ಅವರೊಡನೆ ಡ್ಯಾನ್ಸ್ ಮಾಡಬೇಕು… ಅವರೊಡನೆ ತೆರೆಹಂಚಿಕೊಳ್ಳಬೇಕು ಎಂಬ ಮದಹದಾಸೆ ಇಟ್ಟುಕೊಂಡವರು. ಆದರೆ ಅದು ಕೈಗೂಡದೇ ಇರುವುದರ ಬಗ್ಗೆ ಇವರಿಗೆ ವಿಷಾದವಿದೆ.
ಪ್ರಸ್ತುತ ಶಿವಣ್ಣನ ಚಿತ್ರದಲ್ಲಿ ತಂಗಿಯ ಪಾತ್ರದ ನಿರೀಕ್ಷೆಯಲ್ಲಿದ್ದು ಶೀಘ್ರದಲ್ಲೇ ಈ ಕನಸು ನನಸಾಗಲಿದೆ ಎಂಬುದು ಇವರ ಆಶಯ. ತಮ್ಮ ತಾತನ ನಟನಾ ಕೌಶಲ್ಯವನ್ನು ರಕ್ತಗತವಾಗಿ ಪಡೆದುಕೊಂಡು ಬಂದಿರುವ ಸಹನ ಗೌಡ ಅವರನ್ನು ಮುಂದಿನ ದಿನಗಳಲ್ಲಿ ಉತ್ತಮ ಪಾತ್ರಗಳಲ್ಲಿ ಕನ್ನಡ ಪ್ರೇಕ್ಷಕರು ನೋಡಲಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.