ʼಮೋನಾಲಿಸಾʼ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯವಾದ ಚೆಲುವೆ ಸದಾ ಇಂದಿಗೂ ಸಹ ಸಿನಿ ರಸಿಕರ ಹಾಟ್ ಫೆವರಿಟ್. 39 ವರ್ಷ ವಯಸ್ಸಾದರೂ ಸುಂದರಿ ಇನ್ನೂ ಸಿಂಗಲ್ ಆಗಿದ್ದಾರೆ. ಸದ್ಯ ವೈವಾಹಿಕ ಜೀವನ ಕುರಿತು ನಟಿ ಮಾತನಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಹೌದು.. ಸದಾ ಹೆಚ್ಚು ಕನ್ನಡ ಸಿನಿಮಾ ಮಾಡಿಲ್ಲ ಅಂದ್ರೂ ಸಹ ‘ಜಯಂ’ ಸಿನಿಮಾದ ಮೂಲಕ ಸೌತ್ ಸಿನಿ ರಸಿಕರಿಗೆ ಬಲು ಹತ್ತಿರವಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮೋನಾಲಿಸಾ, ಮೋಹಿನಿ, ಆರಕ್ಷಕ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಸದಾ ನಟಿಸಿದ್ದಾರೆ. ಸದ್ಯ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.
ಕನ್ನಡ, ತಮಿಳು, ತೆಲುಗು, ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ ಚೆಲುವೆ ಇತ್ತೀಚಿಗೆ ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸಿ ʼಟಾರ್ಚ್ ಲೈಟ್ʼ ಎಂಬ ಚಿತ್ರ ನಿರ್ಮೀಸಿದ್ದರು. ಸ್ವತಃ ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಸದಾ ನಟಿಸಿದ್ದರು. ಅದ್ರೆ ಈ ಸಿನಿಮಾ ಅಷ್ಟಾಗಿ ಹಿಟ್ ಆಗಲಿಲ್ಲ.ಈ ಸಂದರ್ಭದಲ್ಲಿ ಅವರು ಕೊನೆಯ ಬಾರಿಗೆ ನಟ ವಡಿವೇಲ್ ಎದುರು ತಮಿಳು ಸಿನಿಮಾ ‘ಎಲಿ’ಎಂಬ ಸಿನಿಮಾದಲ್ಲಿ ನಟಿಸಿದ್ದರು. ಅವರು ಪ್ರಸ್ತುತ ಕೆಲವು ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಮತ್ತು ವೆಬ್ ಸರಣಿಗಳು ಹಾಗೂ ತೆಲುಗು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಷ್ಟೇಲ್ಲಾ ಹೆಸರು ಮಾಡಿರುವ ನಟಿ ಸದಾ ತಮ್ಮ 39ರ ಹರೆಯದಲ್ಲೂ ಅವಿವಾಹಿತರಾಗಿದ್ದಾರೆ. ಈ ಕುರಿತು ಪ್ರಶ್ನೆ ಮಾಡಿದ್ರೆ, ಮದುವೆಯಾದರೆ ಸ್ವಾತಂತ್ರ್ಯ ಹೋಗುತ್ತದೆ. ಮದುವೆಯಾಗುವ ವ್ಯಕ್ತಿಯು ಅರ್ಥಮಾಡಿಕೊಳ್ಳಬಹುದು ಅಥವಾ ಅರ್ಥಮಾಡಿಕೊಳ್ಳದಿರಬಹುದು. ನಾನು ಕಾಡು ಜೀವನವನ್ನು ಪ್ರೀತಿಸುತ್ತೇನೆ. ನಾನು ಮದುವೆಯಾದರೆ ನನ್ನ ಆಸೆಗಳನ್ನು ಮುಂದುವರಿಸಲು ಸಾಧ್ಯವಾಗದಿರಬಹುದು. ಅಲ್ಲದೆ ಹಲವರು ಮದುವೆಯಾಗಿ ಬೇರ್ಪಟ್ಟಿದ್ದಾರೆ. ಹಾಗಾಗಿ ಮದುವೆಯಾಗುವ ಐಡಿಯಾ ಇಲ್ಲ ಅಂತ ಹೇಳಿದ್ದಾರೆ. ಸದ್ಯ ನಟಿಯ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.