ಕ್ರೀಡಾಪಟುವಾಗಿ ಸಚಿನ್ ಧನ್ ಪಾಲ್ : ಅದ್ಧೂರಿ ಯಾಗಿ ತೆರೆಗೆ ಬರಲು ಸಿದ್ಧವಾದ ಚಾಂಪಿಯನ್
ಟೈಟಲ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಚಾಂಪಿಯನ್. ಯುವ ಪ್ರತಿಭೆ ಸಚಿನ್ ಧನಪಾಲ್ ಅಭಿನಯದ ಹಾಗೂ ಶಾಹುರಾಜ ಶಿಂಧೆ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ‘ಡಿಂಗ್ರಿ ಬಿಲ್ಲಿ’ ಎಂಬ ಸ್ಪೆಷಲ್ ಹಾಡಿನಲ್ಲಿ ಸೊಂಟ ಬಳುಕಿಸಿದ್ದಾರೆ.
ಚಿತ್ರವನ್ನು “ಸ್ನೇಹಾನಾ.. ಪ್ರೀತಿನಾ” ಖ್ಯಾತಿಯ ಶಾಹುರಾಜ ಸಿಂಧೆ ನಿರ್ದೇಶಿಸಿದ್ದಾರೆ. ಶಿವಂ ಪ್ರೊಡಕ್ಷನ್ ನಿರ್ಮಾಣ, ಸರವಣನ್ ನಟರಾಜನ್ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಅಜನೀಶ್ ಲೋಕ್‌ನಾಥ್ ಸಂಗೀತ ಸಂಯೋಜನೆ, ಇಮ್ರಾನ್ ಸರ್ದಾರಿಯ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಚಿತ್ರದ ಆಡಿಯೋ ಹಕ್ಕನ್ನು “ಲಹರಿ ಆಡಿಯೋಸ್’ ಪಡೆದಿದೆ.
ಅಥ್ಲೆಟಿಕ್ಸ್ ಆಧರಿಸಿ, ಚಿತ್ರವು ಸಣ್ಣ-ಪಟ್ಟಣದ ವ್ಯಕ್ತಿ ಮತ್ತುಅವರ ಸಾಧನೆಗಳ ಬಗ್ಗೆ ಸಿನಿಮಾ ತಯಾರಿಸಲಾಗಿದೆ. ಚಿತ್ರದ ಟೀಸರ್ ಮತ್ತು ಹಾಡುಗಳು ಭರ್ಜರಿ ರೆಸ್ಪಾನ್ಸ್ ಪಡೆದುಕೊಂದಿದ್ದು ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಸಿಕ್ಕಿದೆ.ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಚಿತ್ರವನ್ನು ಅಕ್ಟೋಬರ್ 14 ರಂದು ರಾಜ್ಯಾಂದ್ಯಂತ 200ಕ್ಕೂ ಹೆಚ್ಚಿನ ಚಿತ್ರಂದಿರಗಳಲ್ಲಿ ತೆರೆಗೆ ತರಲು ಸಿದ್ಧವಾಗಿದೆ.
ಶಿವಾನಂದ್ ಎಸ್ ನೀಲಣ್ಣನವರ್ ಅವರ ಬೆಂಬಲದೊಂದಿಗೆ, ಈ ಚಿತ್ರವನ್ನು ಶಾಹುರಾಜ ಶಿಂಧೆ ನಿರ್ದೇಶನ ಮಾಡಿದ್ದಾರೆ. ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ಚಾಂಪಿಯನ್‌ನಲ್ಲಿ ಹಿರಿಯ ನಟರಾದ ದೇವರಾಜ್, ರಂಗಾಯಣ ರಘು, ಸುಮನ್ ತಲ್ವಾರ್, ಶೋಭರಾಜ್, ಚಿಕ್ಕಣ್ಣ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ಧಿ ಮತ್ತು ಗೋವಿಂದೇಗೌಡ ಇದ್ದಾರೆ. ಸರ್ವಣನ್ ನಟರಾಜನ್ ಛಾಯಾಗ್ರಹಣವಿದೆ.