ಕಳೆದ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಹಾಗೂ ಸೈಡ್ ಬಿ ಸಿನಿಮಾ. ಈ ಸಿನಿಮಾದಲ್ಲಿ ಅತಿಯಾಗಿ ಕಾಡಿದ್ದು ಮಾತ್ರ, ಪುಟ್ಟಿ ಪಾತ್ರಧಾರಿ ರುಕ್ಮಿಣಿ ವಸಂತ್. ಅವರ ಸ್ಮೈಲ್, ಅವರ ಫಿಟ್ನೆಸ್‌ಗೇನೆ ಅಭಿಮಾನಿಗಳು ಕಳೆದೋಗಿದ್ದರು. ಬರೀ ಬಾಯ್ಸ್ ಮಾತ್ರವಲ್ಲ ಅವರ ಸೌಂದರ್ಯಕ್ಕೆ ಹುಡುಗಿಯರು ಮರುಳಾಗಿದ್ದಾರೆ. ಪುಟ್ಟಿಯಂತೆ ಆಗಬೇಕು ಅಂತ ಗರ್ಲ್ಸ್ ಅಂದುಕೊಂಡರೆ, ಪುಟ್ಟಿಯಂತ ಹುಡುಗಿ ಸಿಕ್ಕರೆ ಖುಷಿ ಎಂದು ಹುಡುಗರು ಬಯಸಿದ್ದಾರೆ. ಈಗಲೂ ಆ ಪುಟ್ಟಿ ಎಲ್ಲರಿಗೂ ಇಷ್ಟ. ಅದ್ಯ ಕನ್ನಡದ ನಟಿ ಬೇರೆ ಬೇರೆ ಭಾಷೆಯಲ್ಲೂ ಅವಕಾಶ ಪಡೆದುಕೊಂಡು, ನಟಿಸಿ, ಅಲ್ಲಿಯೂ ಸೈ ಎನಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಮನ ತುಂಬಿ ಸಂತೋಷ ಬಂದಿದೆ. ಕನ್ನಡ, ತಮಿಳು, ತೆಲುಗು ಅಂತ ಓಡಾಡುವ ರುಕ್ಮಿಣಿ ವಸಂತ್ ತನ್ನ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ ಎಂಬುದು ಗೊತ್ತಾ..? ಅವರು ಶೂಟ್ ನಡೆಯುವಾಗ ಆಗಲೀ..? ಮನೆಯಲ್ಲಿ ಇದ್ದಾಗ ಆಗಲಿ ತುಂಬಾ ಇಷ್ಟಪಟ್ಟು ತಿನ್ನುವ ಫುಡ್ ಯಾವುದು ಅಂತ ಗೊತ್ತ..? ಅ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹಲವರಲ್ಲಿ ಇರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ನಟಿ ರುಕ್ಮಿಣಿ ವಸಂತ್ ಅವರು ಚಿತ್ತಾರದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲೂ ಅನ್ನ ಸಾಂಬಾರ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ ರುಕ್ಮಿಣಿ ವಸಂತ್. ಹಾಗಾದರೆ ಫುಡ್ ಬಗ್ಗೆ ಏನೆಲ್ಲಾ ಹೇಳಿದರು ಎಂಬುದನ್ನು ನೀವೇ ಓದಿ, `ನಂಗೆ ಅನ್ನ, ಸಾಂಬಾರ್ ಇಷ್ಟ. ಅದರಲ್ಲೂ ಸೆಟ್ ಫುಡ್ ತುಂಬಾ ಇಷ್ಟಪಟ್ಟು ತಿಂತೀನಿ. ಅಲ್ಲಿ ರಾಗಿ ಮುದ್ದೆ, ಅನ್ನಸಾಂಬಾರ್, ಮಜ್ಜಿಗೆ ಉಳಿ, ಹಪ್ಪಳ ಎಲ್ಲಾ ಇರುತ್ತಲ್ವಾ ಹಾಗಾಗಿ ತುಂಬಾ ಇಷ್ಟ. ಸೆಟ್‌ನಲ್ಲಿ ಇಷ್ಟಪಟ್ಟು ತಿನ್ನುತ್ತೀನಿ. ನನಗೂ ಅಡುಗೆ ಮಾಡುವುದಕ್ಕೆ ತುಂಬಾ ಇಷ್ಟ. ಆದರೆ ಹೆಚ್ಚಾಗಿ ಏನು ಬರುವುದಿಲ್ಲ. ಲಂಡನ್‌ನಲ್ಲಿದ್ದಾಗ ಸ್ವಲ್ಪ ಕಲಿತುಕೊಂಡಿದ್ದೆ.
ಅಮ್ಮ ಒಂದು ರೈಸ್ ಕುಕ್ಕರ್ ಕೊಟ್ಟ್ಟಿದ್ದರು. ಅಲ್ಲಿಯೂ ಅನ್ನ ಸಾಂಬಾರ್, ಪಲ್ಯ ಈ ರೀತಿಯಾದ ಅಡುಗೆ ಮಾಡಿಕೊಳ್ಳುತ್ತಿದ್ದೆ. ಅದನ್ನು ಬಿಟ್ಟರೆ, ಪಾಸ್ತಾ ಮಾಡ್ತೀನಿ. ಯಾವುದು ಸುಲಭವಾಗಿರುತ್ತದೋ ಅದನ್ನು ಮಾಡಿಕೊಳ್ಳುತ್ತೀನಿ. ಕುಕ್ಕಿಂಗ್‌ಗಿಂತ, ಬೇಕಿಂಗ್ ಫುಡ್ ಇಷ್ಟ. ನಮ್ಮ ಮನೆಯಲ್ಲಿ ಅಮ್ಮ ನಾರ್ತ್ ಡಿಷಸ್ ಮಾಡಿದ್ರೆ, ಅಜ್ಜಿ ಸೌತ್ ಡಿಷಸ್ ಮಾಡ್ತಾರೆ. ಇಬ್ಬರ ಫುಡ್ ಅಂದ್ರ‍್ರೆ ತುಂಬಾ ಇಷ್ಟ ಪಟ್ಟು ತಿಂತೀನಿ. ಶೂಟಿಂಗ್ ಗ್ಯಾಪ್ ಸಿಕ್ಕಿದ್ರೆ ವರ್ಕೌಟ್ ಮಾಡ್ತೀನಿ, ಸಿನಿಮಾ ನೋಡುವುದಕ್ಕೆ ಹೋಗ್ತೀನಿ, ನಿದ್ದೆ ಮಾಡ್ತೀನಿ, ನನಗೆ ಒಂದೇ ಥರದ ವರ್ಕೌಟ್ ಮಾಡುವುದಕ್ಕೆ ಇಷ್ಟವಿಲ್ಲ. ಸೈಕ್ಲಿಂಗ್ ಮಾಡ್ತೀನಿ, ಡ್ಯಾನ್ಸ್ ಮಾಡ್ತೀನಿ, ಕಾರ್ಡಿಯೋ ಟೈಪ್ ವರ್ಕೌಟ್ ಮಾಡ್ತೀನಿ. ಈ ಯಾವುದಕ್ಕೂ ಸಮಯ ಸಿಗಲಿಲ್ಲ ಎಂದಾಗ ವಾಕ್ ಹೋಗ್ತೀನಿ’ ಎಂದಿದ್ದಾರೆ.