‘ಸಪ್ತ ಸಾಗರದಾಚೆ ಎಲ್ಲೋ’-ಸೈಡ್ ಬಿ ಸಿನಿಮಾದ ಬಿಡುಗಡೆ ಸಿದ್ಧವಾಗಿದೆ. ಹೀಗಾಗಿ ಈಗಿನಿಂದಲೇ ಪ್ರಚಾರ ಆರಂಭ ಆಗಿದೆ. ಈ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗುತ್ತಿರುವುದರಿಂದ ಈ ಬಾರಿ ಬಿಡುಗಡೆಗೆ ಒಂದು ವಾರಕ್ಕೂ ಮುನ್ನವೇ ಚಿತ್ರತಂಡ ಪ್ರಚಾರಕ್ಕೆ ಮುಂದಾಗಿದೆ. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಜೆ ಆಚಾರ್, ನಿರ್ದೇಶಕ ಹೇಮಂತ್ ಎಂ ರಾವ್ ಸೇರಿದಂತೆ ಹಲವು ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತೆಲುಗು ಮಾಧ್ಯಮ ರುಕ್ಮಿಣಿ ಹಾಗೂ ಚೈತ್ರಾಗೆ ಇತ್ತೀಚೆಗಿನ ಡೀಪ್‌ಫೇಕ್ ವಿಡಿಯೋ ವಿವಾದದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು.
ಇದನ್ನೂ ಓದಿ ‘ಅನಾವರಣ’ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ… ಅರ್ಜುನ್ ಯೋಗಿ ಹಾಗೂ ಸಾರಿಕಾ ರಾವ್ ಜೋಡಿಯ ಗಾನಬಜಾನ..
ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವಿವಾದ ದೇಶಾದ್ಯಂತ ಚರ್ಚೆಯಲ್ಲಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಿಸಿ ಸೃಷ್ಟಿಸಿದ ಈ ಕೃತಕ ವಿಡಿಯೋ ಬಗ್ಗೆ ದೇಶದ ಉದ್ದಗಲಕ್ಕೂ ವಿರೋಧ ವ್ಯಕ್ತವಾಗುತ್ತಿದೆ. ಸ್ವತ: ರಶ್ಮಿಕಾ ಮಂದಣ್ಣ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಂತ ದಿಗ್ಗಜರೂ ಕೂಡ ಖಂಡಿಸಿದ್ದರು. ಈಗ ಇದೇ ವಿಚಾರವಾಗಿ ಸಿನಿಮಾ ಪ್ರಚಾರಕ್ಕೆ ತೆರಳಿದ್ದ ರುಕ್ಷಿಣಿ ಹಾಗೂ ಚೈತ್ರಾ ಬಿ ಆಚಾರ್‌ಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಕನ್ನಡದ ನಟಿಯರು ದಿಟ್ಟವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು ಸ್ನೇಹದ ಮಹತ್ವ ಸಾರುವ “ಕುಚುಕು” ಚಿತ್ರದ ಟ್ರೇಲರ್ ಹಾಗೂ ಹಾಡುಗಳು
ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ವಿವಾದ ಬಗ್ಗೆ ರುಕ್ಮಿಣಿ ವಸಂತ್‌ಗೆ ಪ್ರಶ್ನೆ ಮಾಡಿದಾಗ “ಇಂತಹ ವಿಡಿಯೋಗಳನ್ನು ಮಾಡುವುದೇ ದೊಡ್ಡ ಅಪರಾಧ. ಎಲ್ಲಾ ರೀತಿಯಲ್ಲೂ ಇದನ್ನು ಖಂಡಿಸಬೇಕು. ಇಂತಹವರಿಗೆ ಮೊದಲು ಬಲಿಯಾಗುವುದು ನಟ-ನಟಿಯರೇ. ಇಂತಹ ಆಪ್‌ಗಳನ್ನು ಮೊದಲು ಬ್ಯಾನ್ ಮಾಡಬೇಕು. ನಟಿಯರಲ್ಲದೆ ಸಾಮಾನ್ಯ ಯುವತಿಯರಿಗೆ ಹೀಗಾದರೆ ಅದರ ಪರಿಣಾಮವೇ ಬೇರೆಯಾಗಿರುತ್ತೆ. ಅಂತಹವರಿಗೆ ಕಠಿಣ ಶಿಕ್ಷೆಯಾಗಬೇಕು.” ಎಂದು ರುಕ್ಮಿಣಿ ವಸಂತ್ ತೆಲುಗು ಮಾಧ್ಯಮಗಳಿಗೆ ಹೇಳಿದ್ದಾರ
ಇದನ್ನೂ ಓದಿ ನವರಸನ್ ಸಾರಥ್ಯದ MMB legacy ಗೆ ಮೊದಲ ವರ್ಷದ ಸಡಗರ .
ಹಾಗೇ ಚೈತ್ರಾ ಜೆ ಆಚಾರ್ ಕೂಡ ಪ್ರತಿಕ್ರಿಯಿಸಿದ್ದು, “ಇದು ತುಂಬಾನೇ ತಪ್ಪು. ಹೀಗೆಲ್ಲ ಪೋಸ್ಟ್ ಮಾಡುವುದು ತಪ್ಪು ಎಂದು ಹೇಳುವುದು ತುಂಬಾನೇ ಸುಲಭ. ಕಿಡಿಗೇಡಿಗಳು ನಮ್ಮನ್ನು ಟ್ರೋಲ್ ಮಾಡುತ್ತಾರೆ. ಇಂತಹ ಘಟನೆಗಳ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಆದರೆ, ಚಿಕ್ಕ ಹುಡುಗನಿಗೆ ಹೀಗಾದರೆ.. ಹುಡುಗಿಗೇ ಇಂತಹ ಕಹಿ ಅನುಭವವಾದರೆ.. ಏನಾಗಬಹುದು ಎಂದು ಯೋಚಿಸಿ. ಇಂತಹ ವಿಷಯಗಳ ಬಗ್ಗೆ ಜನರು ಸೂಕ್ತ ಕ್ರಮ ಕೈಗೊಳ್ಳಬೇಕು. ಅಂತಹವರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಹೇಳಿದ್ದಾರೆ. ಅಂದ್ಹಾಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ತೆಲುಗಿನಲ್ಲಿ ‘ಸಪ್ತ ಸಾಗರಾಲು ದಾಟಿ’ ಸೈಡ್ ಬಿ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಮೊದಲ ಪಾರ್ಟ್ ಓಟಿಟಿಯಲ್ಲಿ ತೆರೆಕಂಡ ಬಳಿಕ ತೆಲುಗು ಮಂದಿ ಅದ್ಭುತ ಪ್ರತಿಕ್ರಿಯೆ ನೀಡಿದ್ದರು. ಇದೇ ಖುಷಿಯಲ್ಲಿ ಚಿತ್ರತಂಡ ತೆಲುಗಿನಲ್ಲಿ ರಿಲೀಸ್ ಮಾಡಲು ಮುಂದಾಗಿದೆ. ಅದಕ್ಕೆ ತೆಲುಗಿನಲ್ಲಿ ಪ್ರಚಾರವನ್ನು ಆರಂಭಿಸಿದೆ. ತೆಲುಗಿನಲ್ಲಿ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನ ವಿಶ್ವ ಪ್ರಸಾದ್ ಮತ್ತು ವಿವೇಕ್ ಕೂಚಿಭೋಟ್ಲ ಈ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ. ಈ ಬಾರಿ ಥಿಯೇಟರ್‌ನಲಲೂ ಅದ್ಭುತ ಪ್ರತಿಕ್ರಿಯೆ ಸಿಗುತ್ತೆ ಅನ್ನೋ ನಂಬಿಕೆಯಲ್ಲಿ ವಿತಕರಿದ್ದಾರೆ. ಹೀಗಾಗಿ ಮುಂದಿನ ವಾರ ರೆಸ್ಪಾನ್ಸ್ ಹೇಗಿರುತ್ತೆ? ಅನ್ನೋ ಕುತೂಹಲವಂತೂ ಇದ್ದೇ ಇದೆ.
Kannada Heroines #Rukminivasamth and #chaitra reactions on @iamRashmika #Deepfake video controversy#RashmikaMandanna pic.twitter.com/Ptvezl25kb
— Rajababu Anumula (@Rajababu_a) November 9, 2023