ರುದ್ರಪ್ರತಾಪ್ ಒಬ್ಬ ಕೆಟ್ಟ ಮನುಷ್ಯ. ಸದಾ ಹುಡುಗಿಯರ ಜೊತೆಗೆ ಫ್ಲರ್ಟ್ ಮಾಡುವಾತ. ಸೀತೆಯನ್ನು ಮದುವೆಯಾಗಬೇಕು ಎಂದುಕೊಂಡಿದ್ದ. ಮದುವೆಯ ಹಂತಕ್ಕೂ ಬಂದಿತ್ತು. ಆದರೆ ರಾಮ್ ಅದರಿಂದ ಬಚಾವ್ ಮಾಡಿದ.
ಆದರೆ ಈಗ ರಾಮ್ ಆತ್ಮೀಯ ಗೆಳೆಯ ಅಶೋಕ್ ತಂಗಿ ಅಂಜಲಿಯನ್ನು ರುದ್ರಪ್ರತಾಪ್ ಯಾಮಾರಿಸುತ್ತಿದ್ದಾನೆ. ಅಂಜಲಿ, ರುದ್ರಪ್ರತಾಪನ ಬಲೆಯಲ್ಲಿ ಸಿಲುಕಿದ್ದು, ಪ್ರೀತಿ ಮಾಡುತ್ತಿದ್ದಾಳೆ.
ಇತ್ತಿಚೆಗೆ ರುದ್ರಪ್ರತಾಪ್ ಕಾಣದೇ ಇರುವುದಕ್ಕೆ ಅಂಜಲಿ ಎಲ್ಲಾ ಕಡೆಯಲ್ಲೂ ಹುಡುಕಾಡುತ್ತಿರುತ್ತಾಳೆ. ದಾರಿಯಲ್ಲಿ ಎಲ್ಲಿಗೆ ಹೋದರೋ ಗಾಬರಿಯಲ್ಲಿ ಹೋಗುವಾಗ ರುದ್ರಪ್ರತಾಪ್ ಕಾಣಿಸಿಕೊಳ್ಳುತ್ತಾನೆ. ತಕ್ಷಣ ಅಂಜಲಿ ಅವನನ್ನು ತಬ್ಬಿಕೊಂಡು ನೂರೆಂಟು ಪ್ರಶ್ನೆ ಮಾಡುತ್ತಾಳೆ.
ಇದು ರುದ್ರಪ್ರತಾಪ್ ಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ಸುಮ್ಮನಿರದೇ ತಾನೂ ಕೂಡ ಅಂಜಲಿಗೆ ಪ್ರಪೋಸ್ ಮಾಡಿಯೇ ಬಿಡುತ್ತಾನೆ. ಅಂಜಲಿಯೂ ಕೂಡ ರುದ್ರಪ್ರತಾಪ್ ನಿಜ ಮುಖ ಅರಿಯದೇ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ.
ರುದ್ರಪ್ರತಾಪ್ ಎಂಬ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಆದರೆ, ಆ ವ್ಯಕ್ತಿ ನೋಡಲು ತನ್ನಂತೆಯೇ ಇದ್ದು ಸಮಸ್ಯೆ ಆಗಿದೆ, ನನ್ನನ್ನು ಪೊಲೀಸರು ಹುಡುಕುತ್ತಿದ್ದಾರೆ. ಅದಕ್ಕೆ ಬೇರೆ ದಾರಿ ಕಾಣದೇ ತಪ್ಪಿಸಿಕೊಂಡು ಓಡಾಡುತ್ತಿದ್ದೀನಿ ಎಂದು ಅಂಜಲಿ ಬಳಿ ಸುಳ್ಳು ಹೇಳುತ್ತಾಳೆ. ದಡ್ಡಿಯಂತೆ ಅಂಜಲಿ ಆತ ಹೇಳುವ ಮಾತುಗಳನ್ನು ನಂಬುತ್ತಿದ್ದಾಳೆ.