Sandalwood Leading OnlineMedia

ರಿಷಿ ಅಭಿನಯದ “ರುದ್ರ ಗರುಡ ಪುರಾಣ” ಚಿತ್ರದ ಚಿತ್ರೀಕರಣ ಪೂರ್ಣ .

ಅಶ್ವಿನಿ ಆರ್ಟ್ಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ, ಕನ್ನಡದ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ರಿಷಿ ನಾಯಕರಾಗಿ ಅಭಿನಯಿಸಿರುವ “ರುದ್ರ ಗರುಡ ಪುರಾಣ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.ಕ್ಲೈಮ್ಯಾಕ್ಸ್ ಫೈಟ್ ಅನ್ನು ಹೆಚ್ ಎಂ ಟಿ ಫ್ಯಾಕ್ಟರಿಯಲ್ಲಿ ಆರು ದಿನಗಳ ಕಾಲ ಚಿತ್ರಿಸಿಕೊಳ್ಳುವುದರೊಂದಿಗೆ ಈ ಚಿತ್ರದ ಚಿತ್ರೀಕರಣವನ್ನು ಇತ್ತೀಚಿಗೆ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಯಿತು. ಚಿತ್ರಕ್ಕೆ ಒಟ್ಟು 70 ದಿನಗಳ ಚಿತ್ರೀಕರಣ ನಡೆದಿದೆ.

 

ಇದನ್ನೂ ಓದಿ ಡಿ.ಸತ್ಯಪ್ರಕಾಶ್ ನಿರ್ದೇಶನದ “X&Y” ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ .

“ಕವಲು ದಾರಿ” ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಕೆಲಸದಿಂದ ಕ್ರೈಂ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಲು ಆಸೆ ಪಡುವ ಪಾತ್ರದಲ್ಲಿ ನಟಿಸಿದ್ದ ರಿಷಿ “ರುದ್ರ ಗರುಡ ಪುರಾಣ” ಚಿತ್ರದಲ್ಲಿ ಕ್ರೈಂ ಇನ್ಸ್ ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. “ರುದ್ರ ಗರುಡ ಪುರಾಣ” ಆಕ್ಷನ್ ಡ್ರಾಮಾ ಜಾನರ್ ನ ಚಿತ್ರವಾಗಿರುತ್ತದೆ . ಟೆಕ್ನಿಕಲ್ ವಿಚಾರದಲ್ಲಿ ಹಲವಾರು ಹೊಸತನಗಳನ್ನು ಅಳವಡಿಸಿಕೊಂಡು ಫೈಟ್ ಮತ್ತು ಸಾಂಗ್ ಗಳನ್ನು ಚಿತ್ರೀಕರಣ ಮಾಡಿರುವುದು ಈ ಚಿತ್ರದ ವಿಶೇಷ.

ಇದನ್ನೂ ಓದಿ ಫೋಟೋ ಜೊತೆಗೆ ಪ್ರಕಾಶ್ ರಾಜ್…ಲಾಕ್ ಡೌನ್ ಸಂಕಷ್ಟದ ಕಥೆಯನ್ನು ಪ್ರೆಸೆಂಟ್ ಮಾಡ್ತಿದ್ದಾರೆ ಪ್ರಕಾಶ್ ರಾಜ್

“ಡಿಯರ್ ವಿಕ್ರಂ” ಚಿತ್ರದ ನಿರ್ದೇಶಕ ಕೆ ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. “ಕಾಟೇರ” ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿ ಖ್ಯಾತರಾದ ವಿನೋದ್ ಆಳ್ವ. ಅವಿನಾಶ್. ಕೆ ಎಸ್ ಶ್ರೀಧರ್. ಗಿರಿ. ಕೆ ಆರ್ ಪೇಟೆ ಶಿವು. ಮಜಾ ಭಾರತ ಜಗಪ್ಪ . ಅಶ್ವಿನಿ ಗೌಡ. ಗೌತಮ್ ಮೈಸೂರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಹಾಟ್ ಸ್ಟಾರ್ ನಲ್ಲಿ ಬಿಡುಗಡೆಗೊಂಡು ಯಶಸ್ವಿಗೊಂಡ ತೆಲುಗಿನ “ಸೈತಾನ್” ವೆಬ್ ಸೀರೀಸ್ ರಿಷಿ ಅವರು ನಟಿಸಿದ್ದರು. ಅದಕ್ಕೆ ಅವರಿಗೆ ಅತ್ಯುತ್ತಮ ಖಳನಟ ಪ್ರಶಸ್ತಿ ದೊರಕಿತ್ತು. ತೆಲುಗಿನ ಬಾಲಯ್ಯ ಅವರ ಚಿತ್ರದಲ್ಲಿ ನಟಿಸುವುದರೊಂದಿಗೆ ಹಲವಾರು ತೆಲುಗು ಚಿತ್ರಗಳಲ್ಲಿ ರಿಷಿ ಬಿಜಿಯಾಗಿದ್ದಾರೆ.

 

“ರುದ್ರ ಗರುಡ ಪುರಾಣ” ಚಿತ್ರವನ್ನು ಮೊದಲಿಗೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಿ ನಂತರ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು
ರೂಪಿಸಿಕೊಳ್ಳಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಇದೇ ತಿಂಗಳಲ್ಲಿ “ರುದ್ರ ಗರುಡ ಪುರಾಣ” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

Share this post:

Related Posts

To Subscribe to our News Letter.

Translate »