Left Ad
'ಸು ಫ್ರಮ್ ಸೋ' ಯಶಸ್ಸು `ರುಧಿರಂ'ಗೆ ಪ್ಲಸ್ ಆಗುತ್ತಾ?! - Chittara news
# Tags

‘ಸು ಫ್ರಮ್ ಸೋ’ ಯಶಸ್ಸು `ರುಧಿರಂ’ಗೆ ಪ್ಲಸ್ ಆಗುತ್ತಾ?!

 

ಬೆಳ್ಳಿ ಪರದೆಗೆ ಬಂದು ರಂಜಿಸಿದ ಸಿನಿಮಾಗಳು ಈಗ ಓಟಿಟಿಗೆ ಬರ್ತಿವೆ. ಮತ್ತಷ್ಟು ಹೊಸ ಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿವೆ. ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಈ ಶುಕ್ರವಾರ ಕೆಲ ಇಂಟ್ರೆಸ್ಟಿಂಗ್ ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿವೆ.

 

1. ಏಳುಮಲೆ

ತರುಣ್ ಕಿಶೋರ್ ನಿರ್ಮಾಣದ ‘ಏಳುಮಲೆ’ ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೈಲರ್ ಗಮನ ಸೆಳೆದಿದ್ದು ಸಿನಿಮಾ ನೋಡಬೇಕು ಎನ್ನುವ ಕಾತುರ ಹುಟ್ಟಾಕ್ಕಿದೆ. ಪುನೀತ್ ರಂಗಸ್ವಾಮಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ಪ್ರಿಯಾಂಕಾ ಆಚಾರ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಲವ್, ಆಕ್ಷನ್, ಎಮೋಷನಲ್ ಅಂಶಗಳನ್ನು ಸೇರಿಸಿ ‘ಏಳುಮಲೆ’ ಚಿತ್ರ ಕಟ್ಟಿಕೊಡಲಾಗಿದೆ. ಜಗಪತಿ ಬಾಬು, ಕಿಶೋರ್ ಕುಮಾರ್, ಟಿ. ಎಸ್ ನಾಗಾಭರಣ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮಲೆ ಮಹದೇಶ್ವರ ಬೆಟ್ಟದ ಹಿನ್ನೆಲೆಯಲ್ಲಿ ಈ ಪ್ರೇಮಕಾವ್ಯವನ್ನು ಚಿತ್ರಿಸಲಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಹೊರಬಂದು ಹಿಟ್ ಲಿಸ್ಟ್ ಸೇರಿದೆ.

 

2. ರುಧಿರಂ

‘ಸು ಫ್ರಮ್ ಸೋ’ ಸಿನಿಮಾ ನಿರ್ಮಿಸಿ, ನಟಿಸಿ ರಾಜ್. ಬಿ ಶೆಟ್ಟಿ ಗೆದ್ದಿದ್ದಾರೆ. ಈ ವಾರ ಅವರು ನಟಿಸಿರುವ ‘ರುಧಿರಂ’ ಸಿನಿಮಾ ತೆರೆಗೆ ಬರಲಿದೆ. ಜಿಶೋ ಲಾನ್‌ ಆಂಟೋನಿ ನಿರ್ದೇಶನದ ಚಿತ್ರಕ್ಕೆ ವಿ.ಎಸ್‌.ಲಾಲ್‌ ಬಂಡವಾಳ ಹೂಡಿದ್ದಾರೆ. ಈ ಮಲಯಾಳಂ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರ್ತಿದೆ. ಕಳೆದ ವರ್ಷ ಮಲಯಾಳಂನಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಈ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ರಾಜ್ ಜೊತೆ ಅಪರ್ಣಾ ಬಾಲಮುರಳಿ ಮಿಂಚಿದ್ದಾರೆ.

 

3. ನಾನು ಮತ್ತು ಗುಂಡ-2

ಪೊಯೆಮ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ಸಿನಿಮಾ ‘ನಾನು ಮತ್ತು ಗುಂಡ-2’. ಈ ಹಿಂದೆ ಶಿವರಾಜ್ ಕೆಆರ್ ಪೇಟೆ ನಟನೆಯ ‘ನಾನು ಮತ್ತು ಗುಂಡ’ ಚಿತ್ರ ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಅದೇ ಟೈಟಲ್‌ನಲ್ಲಿ ಹೊಸ ಸಿನಿಮಾ ಸಿದ್ಧವಾಗಿದೆ. ಈ ಬಾರಿ ರಾಕೇಶ್ ಅಡಿಗ ನಾಯಕನಾಗಿ, ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲೂ ಮನುಷ್ಯ ಹಾಗೂ ಶ್ವಾನದ ನಡುವಿನ ಕಥೆಯಿದ್ದು ರಘು ಹಾಸನ್ ಆಕ್ಷನ್ ಕಟ್ ಹೇಳಿದ್ದಾರೆ.

 

4. ಮದರಾಸಿ

ತಮಿಳಿನ ‘ಮದರಾಸಿ’ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಶಿವಕಾರ್ತಿಕೇಯನ್ ಜೊತೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗಪ್ಪಳಿಸುತ್ತಿದೆ. ಎ. ಆರ್ ಮುರುಗದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ಧಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ವಿದ್ಯುತ್ ಜಮ್ವಾಲ್, ಬಿಜು ಮೆನನ್, ವಿಕ್ರಾಂತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇದು ರುಕ್ಮಿಣಿ ನಟಿಸಿರುವ ಮೊದಲ ತಮಿಳು ಸಿನಿಮಾ. ಚಿತ್ರತಂಡ ಭರ್ಜರಿ ಪ್ರಚಾರ ಮಾಡುತ್ತಿದ್ದು ಅದ್ಧೂರಿಯಾಗಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಈ ನಾಲ್ಕು ಸಿನಿಮಾಗಳ ಜೊತೆಗೆ ‘ಓಂ ಶಿವಂ’, 31 ಡೇಸ್, ಆಸ್ಟಿನ್‌ನ ಮಹಾನ್ ಮೌನ ಎಂಬ ಹೊಸಬರ ಕನ್ನಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ.

 

ಇನ್ನು. ‘ಸು ಫ್ರಮ್ ಸೋ’ ಸಿನಿಮಾ ನಿರ್ಮಿಸಿ, ನಟಿಸಿ ರಾಜ್. ಬಿ ಶೆಟ್ಟಿ ಗೆದ್ದಿದ್ದಾರೆ. ಈ ವಾರ ಅವರು ನಟಿಸಿರುವ ‘ರುಧಿರಂ’ ಸಿನಿಮಾ ತೆರೆಗೆ ಬರಲಿದೆ. ‘ಸು ಫ್ರಮ್ ಸೋ’ ಯಶಸ್ಸಿನ ಅಲೆ ‘ರುಧಿರಂ’ಗೆ ಪ್ಲಸ್ ಆಗುತ್ತಾ ಕಾದುನೋಡಬೇಕಿದೆ

 

 

 

Spread the love
Translate »
Right Ad