ದೊಡ್ಮನೆಯಲ್ಲಿ ಈಗ ಒಂದಿಷ್ಟು ಟೀಂಗಳಾಗಿವೆ. ಇಡೀ ದಿನ ಮನೆಯಲ್ಲಿಯೇ ಇರಬೇಕಾದ ಕಾರಣ. ಸ್ಪರ್ಧಿಗಳು ತಮ್ಮ ಯೋಚನೆಗೆ ಸರಿಹೋಗುವವರ ಜತೆ ಫ್ರೆಂಡ್ಸ್ ಮಾಡಿಕೊಂಡು, ಕೊಟ್ಟ ಟಾಸ್ಕ್ ಅನ್ನು ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗಿರುವ ಗೆಳೆತನವೆಂದರೆ ಸಾನ್ಯ ಮತ್ತು ರೂಪೇಶ್ ಜೋಡಿ. ಇವರ ಫ್ರೆಂಡ್ಶಿಪ್ ಹೈಲೈಟ್ ಆಗುತ್ತಿದೆ. ಮನೆಯವರು ಇದನ್ನು ಬೇರೆಯ ರೀತಿಯಲ್ಲಿ ಅರ್ಥೈಸಿಕೊಂಡಿದ್ದೂ ಇದೆ. ಈಗ ಇವರ ಫ್ರೆಂಡ್ಶಿಪ್ ಮಧ್ಯೆ ಬಿರುಕು ಮೂಡುವ ಸೂಚನೆ ಸಿಕ್ಕಿದೆ. ರೂಪೇಶ್ ಹಾಗೂ ಸಾನ್ಯಾ ಇಬ್ಬರೂ ಪರಸ್ಪರ ಬೇಸರ ಹೊರಹಾಕಿದ್ದಾರೆ. ಮನೆಯಲ್ಲಿ ಕ್ಲೋಸ್ ಫ್ರೆಂಡ್ಸ್ ಮಧ್ಯೆ ಅಸಮಾಧಾನ ಮೂಡಿದೆ.
ಬಿಗ್ ಬಾಸ್ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದು, ರೂಪೇಶ್, ಸಾನ್ಯಾ ಹಾಗೂ ರಾಕೇಶ್ ಫಿನಾಲೇ ವೀಕ್ ತಲುಪಿದ್ದಾರೆ. ಉಳಿದ ಆರು ಮಂದಿ ನಾಮಿನೇಷನ್ ಲಿಸ್ಟ್ನಲ್ಲಿ ಇದ್ದಾರೆ. ಈ ವಾರ ಕೆಲವರು ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಪಕ್ಕಾ ಆಗಿದೆ.
ಬಿಗ್ ಬಾಸ್’ನಲ್ಲಿ ಸಾನ್ಯಾ ಹಾಗೂ ಜಶ್ವಂತ್ ಇಬ್ಬರೂ ಕ್ಲೋಸ್ ಆಗುತ್ತಿದ್ದಾರೆ. ಕೆಲ ದಿನಗಳಿಂದ ಸಾನ್ಯಾ ಅವರು ರೂಪೇಶ್ ಜತೆ ಸರಿಯಾಗಿ ಮಾತನಾಡಿಲ್ಲ. ಈ ವಿಚಾರದಿಂದ ರೂಪೇಶ್ಗೆ ಬೇಸರ ಆಗಿದೆ.ನೀನು ನನ್ನ ಬೆಸ್ಟ್ ಫ್ರೆಂಡ್ ಅಲ್ಲ. ನಾನು ನಿನ್ನ ಕ್ಲೋಸ್ ಫ್ರೆಂಡ್ ಅಷ್ಟೇ. ನೀನು ಜಶ್ವಂತ್ಗೆ ಬೆಸ್ಟ್ ಫ್ರೆಂಡ್ಸ್. ಎರಡು ದಿನಗಳಿಂದ ನೀನು ಎಲ್ಲಿದ್ದೀಯೋ ಅಲ್ಲಿ ಹೋಗಿ ನಾನು ಮಾತನಾಡುತ್ತಿದ್ದೇನೆ ನಾನು ಎರಡು ದಿನಗಳಿಂದ ಬೇಸರದಲ್ಲಿ ಇದ್ದೇನೆ. ಅದು ನಿನಗೆ ಅರ್ಥವಾಗಿಯೇ ಇಲ್ಲ’ ಎಂದರು ರೂಪೇಶ್.
ಇದಕ್ಕೆ ಸಾನ್ಯಾ. ‘ಜಶ್ವಂತ್ ನನ್ನ ಕ್ಲೋಸ್ ಫ್ರೆಂಡ್ ಅಷ್ಟೇ. ಬೆಸ್ಟ್ ಫ್ರೆಂಡ್ ಅಲ್ಲವೇ ಅಲ್ಲ. ನಮ್ಮಿಬ್ಬರ ಮಧ್ಯೆ ಒಂದು ಬಾಂಡಿಂಗ್ ಬೆಳೆದಿದೆ. ನಿನ್ನನ್ನು ಕಳೆದುಕೊಳ್ಳೋಕೆ ನನಗೆ ಇಷ್ಟ ಇಲ್ಲ’ ಎಂದ ಸಾನ್ಯಾ.