ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ವಿನ್ನರ್ ರೂಪೇಶ್ ಶೆಟ್ಟಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಬಾರಿಯ ಕನ್ನಡ ಬಿಗ್‌ಬಾಸ್ 9 ರಿಯಾಲಿಟಿ ಶೋದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಕ್ರಿಯಾಶೀಲ ರೀತಿಯಲ್ಲಿ ತೊಡಗಿಸಿಕೊಂಡಿದ್ದ ರೂಪೇಶ್ ಶೆಟ್ಟಿ ಉತ್ತಮವಾಗಿಯೇ ಮನೋರಂಜನೆ ನೀಡಿದ್ದು, ಬಿಗ್ ಬಾಸ್ ಮನೆಯ ಆಟ ಸಾಕಷ್ಟು ಟ್ವಿಸ್ಟ್ ಗಳನ್ನ ಪಡೆದು ಅಂತಿಮ ಹಂತದ ತನಕವೂ ಕೂಡ ರೂಪೇಶ್ ಶೆಟ್ಟಿ ನಿರೀಕ್ಷೆಯನ್ನು ಉಳಿಸಿಕೊಂಡಿದ್ದರು.’ಬಿಗ್ ಬಾಸ್ ಕನ್ನಡ-೯’ ಕಾರ್ಯಕ್ರಮದಲ್ಲಿ ಯಾವುದೇ ವಿವಾದಗಳಿಗೆ ಸಿಲುಕದೆ, ಗದ್ದಲ-ಗಲಾಟೆಗೆ ಆಸ್ಪದ ನೀಡದೆ, ಸ್ನೇಹಕ್ಕೆ ಹೆಚ್ಚು ಮಹತ್ವ ಕೊಟ್ಟವರು ರೂಪೇಶ್ ಶೆಟ್ಟಿ.ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೯ ವಿನ್ನರ್ ರೂಪೇಶ್ ಶೆಟ್ಟಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಚಿತ್ತಾರ ಮಾಧ್ಯಮದ ಸಂದರ್ಶನದಲ್ಲಿ ರೂಪೇಶ್ ಶೆಟ್ಟಿ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನ ಕ್ರಶ್ ಯಾರಗಿದ್ದರು ಎನ್ನೋದನ್ನ ರಿವೀಲ್ ಮಾಡಿದ್ದಾರೆ, ರಮ್ಯಾ ಹಾಗೂ ರಚಿತಾ ರಾಮ್ ನನ್ನ ಫೇವರೆಟ್ ನಟಿ ಮತ್ತು ಅವರ ಮೇಲೆ ಕ್ರಶ್ ಆಗಿದ್ದು ಬಾಲಿವುಡ್ ನಲ್ಲಿ ಅನುಷ್ಕಾ ಶರ್ಮ ಮೇಲೆ ಕ್ರಶ್ ಆಗಿದ್ಯಂತೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟಿ ರಮ್ಯಾ, ರಚಿತಾ ಹಾಗೂ ಅನುಷ್ಕಾ ಶರ್ಮಾ ಎಂದರೆ ರೂಪೇಶ್ ಶೆಟ್ಟಿ ಅವರಿಗೆ ಇಷ್ಟವಂತೆ.