ಮತ್ತೆ ತೆರೆ ಮೇಲೆ ಯಶ್ ಅಬ್ಬರ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹೊಸ ವರ್ಷ ಬಂದಾಯ್ತು, ಕೆಜಿಎಫ್ 2 ರಿಲೀಸ್ ಆಗಿ ಹಲವು ತಿಂಗಳುಗಳೇ ಕಳೆದು ಹೋಗಿದೆ. ಆದ್ರೆ ಯಶ್ ಮಾತ್ರ ತಮ್ಮ ಮುಂದಿನ ಸಿನಿಮಾದ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದೀಗ ಯಶ್ ಬರ್ತ್ ಡೇ ಕೂಡ ಬಂದಿದೆ. ಈ ಬಾರಿ ಹುಟ್ಟು ಹಬ್ಬಕ್ಕೆ ಸಿನಿಮಾದ ಕೆಲವು ಸಂಗತಿಗಳು ಸಿಗುವುದು ಗ್ಯಾರಂಟಿ ಎಂದೇ ಹೇಳಲಾಗುತ್ತಿದೆ. ಅಲ್ಲದೇ, ಅದು ಅಭಿಮಾನಿಗಳಿಗೆ ಡಬಲ್ ಧಮಾಕಾ ಅಂತಾನೂ ಹೇಳಲಾಗುತ್ತಿದೆ.
ಮೊನ್ನೆಯಷ್ಟೇ ರಾಧಿಕಾ ಪಂಡಿತ್ ಮತ್ತೆ ಸಿನಿಮಾ ರಂಗಕ್ಕೆ ಬರುವ ವಿಚಾರ ಬಹಿರಂಗಗೊಂಡಿತ್ತು. ಆದರೆ, ಯಾವ ಚಿತ್ರ, ನಿರ್ದೇಶಕರು ಯಾರು? ಬ್ಯಾನರ್ ಯಾವುದು ಎನ್ನುವ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಯಶ್ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಲಿದ್ದಾರಂತೆ. ಆ ಬ್ಯಾನರ್ ಮೂಲಕವೇ ರಾಧಿಕಾ ಪಂಡಿತ್ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಕಿಯ ಮುಂದಿನ ಸಿನಿಮಾ ನಡೆ ಮೇಲೆ ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ಮಂದಿಯೂ ಕಣ್ಣಿಟ್ಟಿದ್ದಾರೆ. ಆದರೆ ರಾಕಿ ಸಿನಿಹೆಜ್ಜೆಯನ್ನ ಎಣಿಸೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಅದರೂ ಈ ಗ್ಯಾಪ್ ನಲ್ಲಿ ರಾಕಿ ಭಾಯ್ ಹೊಸ ವರ್ಷದ ಆರಂಭದಲ್ಲೇ ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡೊದು ಕನ್ಪರ್ಮ್ ಆಗಿದೆ.