ಟಾಕ್ಸಿಕ್ ಚಿತ್ರದ ಮೂರು ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆ. ನಾಲ್ಕನೆ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಈಗಾಗಲೇ ಮುಂಬೈಯಲ್ಲಿ ಅತಿ ದೊಡ್ಡ ಹಂತದ ಶೂಟಿಂಗ್ ಮುಗಿದಿದೆ. ಅಲ್ಲಿಂದ ಗೋವಾಕ್ಕೆ ಬಂದ ಸಿನಿಮಾ ತಂಡ ಇಲ್ಲೂ ಮಹತ್ವದ ದೃಶ್ಯಗಳನ್ನ ಸೆರೆಹಿಡಿದುಕೊಂಡಿದೆ. ಇದೀಗ ನಾಲ್ಕೆಯ ಹಂತದ ಶೂಟಿಂಗ್ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಈ ಒಂದು ಹಂತದಲ್ಲಿ ಚಿತ್ರದ ಮಹತ್ವದ ಭಾಗದ ಶೂಟಿಂಗ್ ನಡೆಯುತ್ತದೆ. ಆ ಹಿನ್ನೆಲೆಯಲ್ಲಿ ಸಿನಿಮಾದ ನಾಲ್ವರು ನಟಿಮಣಿಯರು ಬೆಂಗಳೂರಿಗೆ ಬಂದಿದ್ದಾರೆ.
ಚಿತ್ರದ ಇತರ ವಿಚಾರಕ್ಕೆ ಬಂದ್ರೆ, ಸಿನಿಮಾದಲ್ಲಿರೋ ನಾಲ್ವರು ನಟಿಮಣಿಯರು ಈ ಒಂದು ಹಂತದ ಶೂಟಿಂಗ್ ಅಲ್ಲಿ ಭಾಗಿ ಆಗುತ್ತಿದ್ದಾರೆ. ಚಿತ್ರದ ಮಹತ್ವದ ದೃಶ್ಯಗಳನ್ನ ಇಲ್ಲಿಯೇ ತೆಗೆಯಲಾಗುತ್ತಿದೆ. ಅದಕ್ಕೇನೆ ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ ಹಾಗೂ ಕಿಯಾರಾ ಅಡ್ವಾಣಿ ಬೆಂಗಳೂರಿಗೆ ಬಂದಿದ್ದಾರೆ ಅನ್ನುವ ಸುದ್ದಿ.
ಟಾಕ್ಸಿಕ್ ಚಿತ್ರದ ಈ ನಟಿಮಣಿಯರ ಭಾಗದ ಚಿತ್ರೀಕರಣ ಇನ್ನು ಪೂರ್ಣ ಆಗಿಲ್ಲ. ಈ ಹಿಂದಿನ ಮೂರು ಹಂತದ ಶೂಟಿಂಗ್ ಅಲ್ಲಿ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ. ಆದರೆ, ಇದೀಗ ನಾಲ್ಕನೆ ಹಂತದಲ್ಲಿ ಈ ನಾಲ್ವರ ಮಹತ್ವದ ದೃಶ್ಯಗಳ ಶೂಟಿಂಗ್ ಪ್ಲಾನ್ ಮಾಡಲಾಗಿದೆ. ಹಾಗಾಗಿಯೇ ಈ ಕಲಾವಿದೆಯರು ಬೆಂಗಳೂರಿಗೆ ಆಗಮಿಸಿದ್ದಾರೆ ಅನ್ನುವ ಮಾಹಿತಿ ಇದೆ.