ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇದೀಗ ಲಂಡನ್ ನಲ್ಲಿ ಕ್ರಿಸ್ ಮಸ್ ಸಂಭ್ರಮದಲ್ಲಿದ್ದಾರೆ.ಇತ್ತೀಚೆಗಷ್ಟೇ ಯಶ್ ಮುಂದಿನ ಸಿನಿಮಾ ಘೋಷಣೆ ಮಾಡಿದ್ದರು. ಅವರ ಮುಂದಿನ ಸಿನಿಮಾ ‘ಟಾಕ್ಸಿಕ್’ ಟೈಟಲ್ ಟೀಸರ್ ಬಿಡುಗಡೆಯಾಗುತ್ತಿದ್ದಂತೇ ಯಶ್ ಲಂಡನ್ ವಿಮಾನವೇರಿದ್ದರು.
ಬಹುಶಃ ಲಂಡನ್ ನಲ್ಲಿ ಚಿತ್ರೀಕರಣದ ಯೋಜನೆಯೂ ಯಶ್ ಗಿದೆ ಎನ್ನಲಾಗಿದೆ. ಇದರ ನಡುವೆ ಈಗ ರಾಧಿಕಾ ತಮ್ಮ ಇನ್ ಸ್ಟಾ ಪುಟದಲ್ಲಿ ಲಂಡನ್ ನಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಲಂಡನ್ ನಲ್ಲಿ ಕ್ರಿಸ್ ಮಸ್ ವೀಕ್ ಎಂದರೆ ಇಡೀ ಬೀದಿಯೇ ಲೈಟಿಂಗ್ ನಿಂದ ಝಗಮಗಿಸುತ್ತದೆ. ಇದೀಗ ರಾಧಿಕಾ ಮತ್ತು ಯಶ್ ದಂಪತಿ ಪಶ್ಚಿಮ ಲಂಡನ್ ನ ಶಾಪಿಂಗ್ ಸ್ಟ್ರೀಟ್ ನಲ್ಲಿ ಅಡ್ಡಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.