Sandalwood Leading OnlineMedia

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಜನ್ಮದಿನಕ್ಕೆ ವಾರ ಬಾಕಿಯಿದ್ದು, ಅಭಿಮಾನಿಗಳು ಬರ್ತ್ ಡೇ ಆಚರಣೆಗೆ ಈಗಾಗಲೇ ತಯಾರಿ ಶುರು ಮಾಡಿಕೊಂಡಿದ್ದಾರೆ.
ಜನವರಿ 8 ರಂದು ಯಶ್ ಹುಟ್ಟುಹಬ್ಬವಿದೆ. ಪ್ರತೀ ಬಾರಿಯೂ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ತಮ್ಮ ಮನೆಯ ಹಬ್ಬದಂತೆ ಆಚರಿಸುತ್ತಾರೆ. ಆದರೆ ಕೊರೋನಾದಿಂದಾಗಿ ಎರಡು ವರ್ಷಗಳಿಂದ ಹುಟ್ಟುಹಬ್ಬದಂದು ಯಶ್ ಅಭಿಮಾನಿಗಳನ್ನು ಭೇಟಿಯಾಗಲು ಸಾಧ‍್ಯವಾಗುತ್ತಿರಲಿಲ್ಲ.
ಆದರೆ ಈ ಬಾರಿ ಯಶ್ ಇತ್ತೀಚೆಗಷ್ಟೇ ಟಾಕ್ಸಿಕ್ ಸಿನಿಮಾ ಘೋಷಣೆ ಮಾಡಿದ್ದಾರೆ. ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ಹೀಗಾಗಿ ಯಶ್ ಬರ್ತ್ ಡೇ ವಿಶೇಷವಾಗಿಯೇ ಇರಲಿದೆ. ಹೀಗಾಗಿ ಈ ಬಾರಿ ಯಶ್ ಅಭಿಮಾನಿಗಳನ್ನು ಭೇಟಿ ಮಾಡಲು ಅಭಿಮಾನಿಗಳೇ ವೇದಿಕೆ ಸಿದ್ಧ ಮಾಡುತ್ತಿದ್ದಾರೆ. ಸ್ಥಳ, ಸಮಯ ನಿಗದಿಯಾಗುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ಈ ಬಾರಿ ಯಶ್ ಹುಟ್ಟುಹಬ್ಬ ವಿಶೇಷವಾಗಿರಲಿದೆ.

Share this post:

Related Posts

To Subscribe to our News Letter.

Translate »