Sandalwood Leading OnlineMedia

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಜೀವನಕ್ಕೆ 14 ವರ್ಷ: ಗುಡ್ ನ್ಯೂಸ್ ಗಾಗಿ ಕಾಯ್ತಿದ್ದಾರೆ ಫ್ಯಾನ್ಸ್

Yash: ‘ರಾಕಿಂಗ್​ ಸ್ಟಾರ್​’ ಪಾಲಿಗೆ ಜುಲೈ 18 ಸ್ಪೆಷಲ್​ ದಿನ

ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ರಾಧಿಕಾ ಪಂಡಿತ್ ಜೊತೆ ನಾಯಕರಾಗಿ ಸ್ಯಾಂಡಲ್  ವುಡ್ ಗೆ ಎಂಟ್ರಿ ಕೊಟ್ಟ ಯಶ್ ಇದೀಗ ಸಿನಿಮಾ ರಂಗದಲ್ಲಿ 14 ವರ್ಷ ಪೂರೈಸಿದ್ದಾರೆ.ಇಂದು ನ್ಯಾಷನಲ್ ಸ್ಟಾರ್ ಆಗಿ ಬೆಳೆದಿರುವ ಯಶ್ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. . ಕನ್ನಡ ಚಿತ್ರರಂಗದಲ್ಲಿ ಹಂತಹಂತವಾಗಿ ಬೆಳೆದು ಬಂದವರು ಯಶ್​. ಅನೇಕ ಕಲಾವಿದರಿಗೆ ಅವರೇ ಮಾದರಿ. ಮೊದಲು ಸೀರಿಯಲ್​ಗಳಲ್ಲಿ ನಟಿಸಿ, ನಂತರ ಚಿತ್ರರಂಗಕ್ಕೆ ಕಾಲಿಟ್ಟು, ಬಳಿಕ ಪ್ಯಾನ್​ ಇಂಡಿಯಾ ಹೀರೋ ಆಗಿ ಬೆಳೆದು ನಿಲ್ಲುವುದು ಎಂದರೆ ಸಣ್ಣ ಮಾತಲ್ಲ. ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಅವರು ಈ ಸಾಧನೆ ಮಾಡಿದ್ದಾರೆ.

ಯಶ್​ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಮೊಗ್ಗಿನ ಮನಸ್ಸು’ ತೆರೆಕಂಡು ಇಂದಿಗೆ  ಬರೋಬ್ಬರಿ 14 ವರ್ಷ ಕಳೆದಿದೆ. ಯಶ್​ ಪಾಲಿಗೆ ಈ ದಿನ ತುಂಬ ವಿಶೇಷ ಈ ದಿನವನ್ನು ‘ರಾಕಿಂಗ್​ ಸ್ಟಾರ್​’ ಅಭಿಮಾನಿಗಳು ಸೆಲೆಬ್ರೇಟ್​ ಮಾಡುತ್ತಿದ್ದಾರೆ.

2008ರ ಜುಲೈ 18ರಂದು ತೆರೆಕಂಡ ‘ಮೊಗ್ಗಿನ ಮನಸ್ಸು’ ಚಿತ್ರದಿಂದ ಯಶ್​ ಅವರು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೀರೋ ಆಗಿ ಪರಿಚಯಗೊಂಡರು. ಮೊದಲ ಸಿನಿಮಾದಲ್ಲೇ ಅವರು ಪ್ರೇಕ್ಷಕರನ್ನು ಇಂಪ್ರೆಸ್​ ಮಾಡಿದರು. ಆ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ನಟಿಸಿದ್ದು ರಾಧಿಕಾ ಪಂಡಿತ್​. ಅವರಿಗೂ ಅದು ಮೊದಲ ಸಿನಿಮಾ ಎಂಬುದು ವಿಶೇಷ. ಬಳಿಕ ರಿಯಲ್​ ಲೈಫ್​ನಲ್ಲಿಯೂ ಅವರಿಬ್ಬರು ಜೋಡಿಯಾದರು. ಗಲ್ಲಾಪೆಟ್ಟಿಗೆಯಲ್ಲಿ ‘ಮೊಗ್ಗಿನ ಮನಸ್ಸು’ ಗೆಲುವು ಕಂಡಿತು. ‘ಕೆಜಿಎಫ್​: ಚಾಪ್ಟರ್​ 1 & 2’ ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ಆದ ಬಳಿಕ ಯಶ್​ ಅವರ ಡಿಮ್ಯಾಂಡ್​ ಹೆಚ್ಚಿದೆ.

ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅವರ ಹವಾ ಜೋರಾಗಿದೆ. ಆದರೆ 14 ವರ್ಷಗಳ ಹಿಂದೆ ಕಹಾನಿ ಹೀಗೆ ಇರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಅವರು ಆಗತಾನೇ ಕಾಲಿಟ್ಟಿದ್ದರು. ‘ಮೊಗ್ಗಿನ ಮನಸ್ಸು’ ಚಿತ್ರಕ್ಕೆ ಶಂಶಾಕ್​ ನಿರ್ದೇಶನ ಮಾಡಿದ್ದರು. ಯಶ್​, ರಾಧಿಕಾ ಪಂಡಿತ್​ ಮಾತ್ರವಲ್ಲದೇ ಶುಭಾ ಪೂಂಜಾ, ಮಾನಸಿ, ರಾಜೇಶ್​ ನಟರಂಗ ಮುಂತಾದವರು ಅಭಿನಯಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಇಂಡಸ್ಟ್ರಿಗೆ ಬಂದು 13 ವರ್ಷ ಕಳೆದಿದ್ದು 14ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದನ್ನ ರಾಕಿ ಅಭಿಮಾನಿಗಳು ‘Yashism’ ಎನ್ನುವ ಹೆಸರಿನಲ್ಲಿ ಸಂಭ್ರಮಿಸುತ್ತಿದ್ದಾರೆ.

Share this post:

Related Posts

To Subscribe to our News Letter.

Translate »