ಕಾಂತಾರ ಸಿನಿಮಾ ನೋಡಿದ ಮೇಲೆ ಅದರ ಪ್ರಿಕ್ವೇಲ್ ನೋಡುವುದಕ್ಕೆ ಸಿನಿಮಾ ಮಂದಿ ಕಾತುರದಿಂದ ಕಾಯುತ್ತಿದ್ದಾರೆ. ಅದರ ಅಪ್ಡೇಟ್ಗಾಗಿ ವೈಟ್ ಮಾಡುತ್ತಿದ್ದಾರೆ. ಇದೀಗ ಆ ಬಗ್ಗೆ ರಿಷಬ್ ಶೆಟ್ಟಿಯವರೇ ಅಪ್ಡೇಟ್ ನೀಡಿದ್ದಾರೆ.
ಇದನ್ನೂ ಓದಿ :Night Curfew Movie Review; ಲಾಕ್‌ಡೌನ್‌ನಲ್ಲಿ ಲಾಕಾದ ಬದುಕಿನ ರೋಚಕ ಕಥೆ
2024 ಲೋಕಸಭೆ ಎಲೆಕ್ಷನ್ನಲ್ಲಿ ಮೂರನೇ ಹಂತದ ಚುನಾವಣೆಗೆ ಇಂದು ಮತದಾನ ನಡೆದಿದೆ. ಸ್ಯಾಂಡಲ್ವುಡ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೈಂದೂರು ತಾಲೂಕಿನ ಕೆರಾಡಿ ಸರ್ಕಾರಿ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ನಟ ರಿಷಬ್ ಶೆಟ್ಟಿ ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿದ ನಟ ರಿಷಬ್ ಶೆಟ್ಟಿ ಅವರು ಕಾಂತಾರ ಚಾಪ್ಟರ್ 1 ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ :ಇನ್‌ಸ್ಟಾಗ್ರಾಂನಲ್ಲಿ ಬಯಲಾಯ್ತಾ `ಟಾಕ್ಸಿಕ್’ ಅಪ್‌ಡೇಟ್ಸ್?!
ಕಾಂತಾರ ಸಿನಿಮಾ ಕಥೆ ಬಗ್ಗೆ ಏನನ್ನು ಹೇಳೋದಿಲ್ಲ. ಎಲ್ಲರೂ ಥಿಯೇಟರ್ನಲ್ಲೇ ಸಿನಿಮಾ ನೋಡಬೇಕು. ಅಲ್ಲದೇ ಕಾಂತಾರ ಸಿನಿಮಾ ಬಗ್ಗೆ ಹೊಂಬಾಳೆ ಸಂಸ್ಥೆಯವರೇ ಅಪ್ಡೇಟ್ ನೀಡುವುದು ಸೂಕ್ತ ಎಲ್ಲವನ್ನು ಅವರೇ ಘೋಷಣೆ ಮಾಡ್ತಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಶೂಟಿಂಗ್ ಶುರುವಾಗಿದೆ ಬಹಳ ಚೆನ್ನಾಗಿ ನಡೆಯುತ್ತಿದೆ. ನಾವು ಅಂದುಕೊಂಡಂತೆ ಕೆಲಸ ನಡೆಯುತ್ತಿದೆ. ಮೊದಲಿಗಿಂತ ದೊಡ್ಡ ಜವಾಬ್ದಾರಿ ದೊಡ್ಡ ತಂಡ ಕೆಲಸ ಮಾಡುತ್ತಿದೆ.
ಹೊಂಬಾಳೆ ಪ್ರೊಡಕ್ಷನ್ ಹೌಸ್ ಸಿಕ್ಕಿರುವುದು ಫಿಲಂ ಮೇಕರ್ಗೆ ಒಂದು ಪುಣ್ಯ. ಅದ್ಭುತವಾದ ಟೆಕ್ನಿಷಿಯನ್ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರ ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ. ಜನ ಕಾಂತಾರವನ್ನು ಗೆಲ್ಲಿಸಿದ್ದಾರೆ ಬಾಯಲ್ಲಿ ಏನು ಹೇಳಲ್ಲ. ಕೆಲಸ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ. ಯಾವ ಒತ್ತಡವು ಇಲ್ಲ ಆಗ ನನಗೆ ಬಹಳ ದೊಡ್ಡ ಚಿತ್ರವಾಗಿತ್ತು. ಸಿನಿಮಾ ಒಂದು ಕಲಿಯುವ ಪ್ರೊಸೆಸ್ ಅದನ್ನು ಮಾಡುತ್ತಿದ್ದೇನೆ. ಸಿನಿಮಾಗೋಸ್ಕರ ಒಂದು ವರ್ಷದಿಂದ ಗಡ್ಡ ಕೂದಲು ಬಿಟ್ಟಿದ್ದೇನೆ.
ಚಿತ್ರೀಕರಣ ಪೂರ್ತಿ ಮುಗಿದ ಮೇಲೆ ಸೆಟ್ ವರ್ಕ್ ಚಿತ್ರೀಕರಣ ಸ್ಥಳಕ್ಕೆ ಕರೆಯುತ್ತೇವೆ. ಚಿತ್ರೀಕರಣ ಮುಗಿಯುವವರೆಗೆ ಬಹಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ. ಅಂತೆ ಕಂತೆಗಳ ಸುದ್ದಿ ಬಹಳಷ್ಟು ಹರಿದಾಡುತ್ತಿದೆ. ಚಿತ್ರದ ಬಗ್ಗೆ ಜನಕ್ಕೆ ನಿರೀಕ್ಷೆ ಹೋಗಬಾರದು ಚಿತ್ರ. ಚಿತ್ರ ತೆರೆಗೆ ಬರುವ ತನಕ ಗೌಪ್ಯತೆ ಕಾಪಾಡಬೇಕು ಜನಕ್ಕೆ ಕುತೂಹಲ ಇರಬೇಕು. ಪೂರ್ತಿ ಕರಾವಳಿ ಭಾಗದಲ್ಲಿ ಚಿತ್ರೀಕರಣ ಮಾಡುತ್ತೇವೆ ಅಂತ ಹೇಳಿದ್ದಾರೆ.