Left Ad
ಕಾಂತಾರ ಚಾಪ್ಟರ್ 1: ಕೇವಲ 17 ನಿಮಿಷದಲ್ಲಿ 1100 ಟಿಕೆಟ್ ಸೇಲ್ – ಮೂರು ದಿನಕ್ಕೂ ಬುಕ್ಕಿಂಗ್ ಫುಲ್! - Chittara news
# Tags

ಕಾಂತಾರ ಚಾಪ್ಟರ್ 1: ಕೇವಲ 17 ನಿಮಿಷದಲ್ಲಿ 1100 ಟಿಕೆಟ್ ಸೇಲ್ – ಮೂರು ದಿನಕ್ಕೂ ಬುಕ್ಕಿಂಗ್ ಫುಲ್!

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಸೃಷ್ಟಿಸಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ, ಪ್ರೇಕ್ಷಕರ ಅಪಾರ ಬೆಂಬಲದೊಂದಿಗೆ ವರ್ಲ್ಡ್‌ವೈಡ್ ಬಂಪರ್ ಓಪನಿಂಗ್ ಪಡೆದಿದೆ. ಬಿಡುಗಡೆ ದಿನವೇ ಚಿತ್ರವು 89 ಕೋಟಿ ರೂಪಾಯಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಘೋಷಿಸಿದೆ.

ಚಿತ್ರಕ್ಕೆ ಸಿಕ್ಕ ಅಪಾರ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ, ಇನ್ನೂ ಹೆಚ್ಚು ಸ್ಕ್ರೀನ್‌ಗಳನ್ನು ಸೇರಿಸಲಾಗುತ್ತಿದೆ. ಮೊದಲು ಪ್ರದರ್ಶನ ನೀಡದಿದ್ದ ಕೆಲವು ಚಿತ್ರಮಂದಿರಗಳಲ್ಲಿಯೂ ಈಗ ಪ್ರದರ್ಶನ ಆರಂಭವಾಗಿದೆ. ಬೆಂಗಳೂರಿನ ಊರ್ವಶಿ ಮತ್ತು ಮುಕುಂದ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಜನರಿಂದ ಭಾರಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ, ಎರಡನೇ ದಿನದಿಂದಲೇ ಚಿತ್ರವನ್ನು ಅಲ್ಲಿ ರಿಲೀಸ್ ಮಾಡಲಾಗಿದೆ.

ಆ ನಿರ್ಧಾರವು ಹೊಂಬಾಳೆಗೆ ದೊಡ್ಡ ಹಿಟ್ ಆಗಿದೆ! ವಿಶೇಷವಾಗಿ ಊರ್ವಶಿ ಚಿತ್ರಮಂದಿರದಲ್ಲಿ ಟಿಕೆಟ್‌ಗಳ ಮಾರಾಟ ದಾಖಲೆ ಮುರಿದಿದೆ. ಆನ್‌ಲೈನ್‌ ಬುಕ್ಕಿಂಗ್‌ ಆರಂಭವಾದ ಕೆಲವೇ ಕ್ಷಣಗಳಲ್ಲಿ ಟಿಕೆಟ್‌ಗಳು ಫುಲ್ ಆಗಿವೆ. ಊರ್ವಶಿ ಮೂಲಗಳ ಪ್ರಕಾರ, ಕೇವಲ 17 ನಿಮಿಷಗಳಲ್ಲಿ 1100 ಟಿಕೆಟ್‌ಗಳು ಸೇಲ್ ಆಗಿದ್ದು, ಈಗಾಗಲೇ ಮಂಗಳವಾರದವರೆಗೂ ಶೋಗಳು ಬುಕ್ ಆಗಿವೆ.

ಲಾಲ್‌ಬಾಗ್ ಪ್ರದೇಶ ಸೇರಿದಂತೆ ಬೆಂಗಳೂರಿನ ಹಲವು ಭಾಗಗಳಿಂದ ಅಭಿಮಾನಿಗಳು ಊರ್ವಶಿಗೆ ಹರಿದು ಬರುತ್ತಿದ್ದಾರೆ. ಬುಕ್ಕಿಂಗ್‌ ಪ್ರಾರಂಭವಾದ ಅಕ್ಟೋಬರ್ 3ರ ಸಂಜೆ ವೇಳೆಗೆ, ಸುಮಾರು 3500ಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್ ಆಗಿವೆ ಎನ್ನಲಾಗಿದೆ.

ಚಿತ್ರದ ಸದ್ದು ನೋಡಿದರೆ, ‘ಕಾಂತಾರ ಚಾಪ್ಟರ್ 1’ ಮುಂದಿನ ಕೆಲವು ದಿನಗಳಲ್ಲಿ ಹೊಸ ಬಾಕ್ಸ್ ಆಫೀಸ್ ದಾಖಲೆ ಬರೆಯುವುದು ಖಚಿತ!

Spread the love
Translate »
Right Ad