Sandalwood Leading OnlineMedia

ಪ್ರಶಾಂತ್ ನೀಲ್ ಮನೆಯಲ್ಲಿ ಜ್ಯೂ ಎನ್ ಟಿಆರ್ ಜೊತೆ ರಿಷಬ್ ಶೆಟ್ಟಿ

ಬೆಂಗಳೂರು: ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಮನೆಯಲ್ಲಿ ಜ್ಯೂ.ಎನ್ ಟಿಆರ್ ಜೊತೆ ರಿಷಬ್ ಶೆಟ್ಟಿ ದಂಪತಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಇದನ್ನೂ ಓದಿ ಲೋಕಸಭಾ ಚುನಾವಣೆಗೆ ಗೀತಾ ಸ್ಪರ್ಧೆ : ತಮಗಿರುವ ಆಸೆ ತಿಳಿಸಿದ ಶಿವಣ್ಣ

ಕೆಜಿಎಫ್, ಸಲಾರ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮನೆಯಲ್ಲಿ ನಿನ್ನೆ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. ಈ ಕಾರಣಕ್ಕೆ ಸಿನಿಮಾ ರಂಗದ ತಮ್ಮ ಆಪ್ತರನ್ನು ಪ್ರಶಾಂತ್ ನೀಲ್ ಆಹ್ವಾನಿಸಿದ್ದರು ಎನ್ನಲಾಗಿದೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಜ್ಯೂ.ಎನ್ ಟಿಆರ್ ದಂಪತಿ, ರಿಷಬ್ ಶೆಟ್ಟಿ ದಂಪತಿ, ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಕೂಡಾ ಭಾಗಿಯಾಗಿದ್ದಾರೆ.

ಇದನ್ನೂ ಓದಿ ಧ್ರುವ ಸರ್ಜಾ ಮನೆಯಲ್ಲಿ ಮಗನಿಗೆ ಮಗಳೇ ತಾಯಿ : ಹಯಗ್ರೀವನನ್ನು ಮಲಗಿಸುವ ರುದ್ರಾಕ್ಷಿ

ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾವನ್ನು ಜ್ಯೂ.ಎನ್ ಟಿಆರ್ ಜೊತೆಗೆ ಮಾಡುತ್ತಿದ್ದಾರೆ. ಹೀಗಾಗಿ ಅವರ ನಡುವೆ ಆತ್ಮೀಯತೆಯಿದೆ. ಪ್ರಶಾಂತ್ ಮತ್ತು ರಿಷಬ್ ಶೆಟ್ಟಿ ಹೊಂಬಾಳೆ ಫಿಲಂಸ್ ಜೊತೆ ಕೆಲಸ ಮಾಡಿದವರು. ಪ್ರಶಾಂತ್ ನೀಲ್ ರನ್ನು ರಿಷಬ್ ಗೆ ಮೊದಲಿನಿಂದಲೂ ಪರಿಚಯವಿದೆ. ಇದೇ ಆತ್ಮೀಯತೆಯಿಂದ ರಿಷಬ್ ಶೆಟ್ಟಿ ದಂಪತಿಯನ್ನೂ ಆಹ್ವಾನಿಸಲಾಗಿದೆ. ಆದರೆ ಈ ಮೂವರೂ ಒಟ್ಟಿಗೇ ಇರುವುದನ್ನು ನೋಡಿ ಜ್ಯೂ.ಎನ್ ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಿನಿಮಾದಲ್ಲಿ ರಿಷಬ್ ಕೂಡಾ ಇರಲಿದ್ದಾರಾ ಎಂದು ಅಭಿಮಾನಿಗಳು ಶಂಕಿಸಿದ್ದಾರೆ.

Share this post:

Translate »