Sandalwood Leading OnlineMedia

ರಶ್ಮಿಕಾ ಮಂದಣ್ಣಗೆ ಐಎಫ್ಎಫ್ಐ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಟಾಂಗ್ ಕೊಟ್ಟಿದ್ದು ನಿಜಾನಾ?

ಕಿರಿಕ್ ಪಾರ್ಟಿ ಎಂಬ ತಮ್ಮದೇ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಬಳಿಕ ತೆಲುಗು, ಬಾಲಿವುಡ್ ಗೆ ಹಾರಿ ಭಾರೀ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ರಿಷಬ್ ಶೆಟ್ಟಿ ಐಎಫ್ಎಫ್ಐ ವೇದಿಕೆಯಲ್ಲಿ ವ್ಯಂಗ್ಯ ಮಾಡಿದ್ದಾರಾ?
ಹೀಗೊಂದು ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಈಗ ಸ್ವತಃ ರಿಷಬ್ ಸ್ಪಷ್ಟನೆ ಕೊಟ್ಟಿದ್ದಾರೆ. ರಿಷಬ್ ಶೆಟ್ಟಿ ಐಎಫ್ಎಫ್ಐ ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂಬ ವರದಿಗಳ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಮಾ‍ಧ್ಯಮ ಸಂವಾದದಲ್ಲಿ ರಿಷಬ್, ನಾನು ಕಾಂತಾರದಂತಹ ಒಂದು ಹಿಟ್ ಸಿನಿಮಾ ಬಂದ ತಕ್ಷಣ ಹಿಂದಿ ಅಥವಾ ಪರಭಾಷೆಗೆ ಹೋಗಲು ಇಷ್ಟಪಡಲ್ಲ. ಕನ್ನಡದಲ್ಲೇ ಇರುತ್ತೇನೆ, ಕನ್ನಡವೇ ನನ್ನ ಮೊದಲ ಆದ್ಯತೆ ಎಂದಿದ್ದರು. ಈ ಮಾತು ರಶ್ಮಿಕಾಗೆ ಕೊಟ್ಟ ಟಾಂಗ್ ಎಂದು ಕೆಲವರು ಬಣ್ಣಿಸಿದ್ದರು.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು ರಿಷಬ್ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದಿದ್ದರು. ಆ ಅಭಿಮಾನಿಯ ಕಾಮೆಂಟ್ ಗೆ ಪ್ರತಿಕ್ರಿಯಿಸಿರುವ ರಿಷಬ್, ಕನಿಷ್ಠ ಒಬ್ಬರಾದರೂ ನನ್ನ ಮಾತನ್ನು ಅರ್ಥ ಮಾಡಿಕೊಂಡರು ಎಂದಿದ್ದಾರೆ.

Share this post:

Translate »