Sandalwood Leading OnlineMedia

‘ರಿಷಾ ಗೌಡ’ ನಟನೆಗಿಳಿದ ರಾಷ್ಟಮಟ್ಟದ ಓಟಗಾರ್ತಿ

• ಒಂದರ ಹಿಂದೆ ಒಂದರಂತೆ ತೆರೆ ಕಾಣಲಿರುವ ಕೊಡಗಿನ ಹುಡುಗಿಯ ಮೂರು ಚಿತ್ರಗಳು, ಚಂದನವನದಲ್ಲಿ ಅನೇಕ ಕೊಡಗಿನ ಸುಂದರಿಯರು ಮಿಂಚಿದ್ದಾರೆ, ಮಿಂಚುತ್ತಿದ್ದಾರೆ ಮತ್ತು ಮಿಂಚಲಿದ್ದಾರೆ. ಯಾಕೆಂದರೇ ಕೊಡಗಿನ ಸೊಬಗೆ ಅಂತಹದ್ದು. ಕ್ರೀಡೆಗೆ ವೀರತ್ವಕ್ಕೆ, ಸೌಂದರ್ಯಕ್ಕೆ ಮತ್ತು ಪ್ರತಿಭೆಗಳಿಗೆ ¨ರವಿಲ್ಲದ ನಾಡು ಕೊಡಗು. ಸದಾ ನಾಡಿಗೆ ಮತ್ತು ದೇಶದ ವಿವಿಧ ರಂಗಗಳಿಗೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ನಮ್ಮ ಕನ್ನಡ ನಾಡಿನ ಜೀವಜಲವಾದ ಕಾವೇರಿ ತಾಯಿಯ ಹುಟ್ಟೂರು ಕೊಡಗು. ಇದೇ ನಾಡಿನಲ್ಲಿ ಹುಟ್ಟಿ ಬೆಳದ ಮತ್ತೊಂದು ಪ್ರತಿಭೆ ರಿಷಾ ಗೌಡ. ಚಂದನವನಕ್ಕೆ ಎಂಟ್ರಿ ಕೊಟ್ಟು ಸಾಲು ಸಾಲು ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಮೂರು ಚಿತ್ರಗಳೂ ಈ ವರ್ಷವೇ ತೆರೆ ಕಾಣುವ ಹಂತದಲ್ಲಿವೆ. ರಿಷಾ ಗೌಡ ಎಂಬ ಕೊಡಗಿನ ಪ್ರತಿಭೆ ನಟನೆಯಲ್ಲಷ್ಟೆ ಅಲ್ಲಾ ಕ್ರೀಡಾರಂಗದಲ್ಲೂ ಹೆಸರು ಮಾಡಿದೆ. ರಿಷಾಗೌಡ ಎಂಬ ನಟಿ ರಾಷ್ಟçಮಟ್ಟದ ಅಥ್ಲೀಟ್ ಕ್ರೀಡಾಪಟು. ೪೦೦ ಮೀಟರ್ ಓಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇವರ ಹುಟ್ಟೂರು ಕೊಡಗು. ಓದಿದ್ದು ಕೊಡಗು ಮತ್ತು ಮೈಸೂರಿನ ಕ್ರೀಡಾ ಶಾಲೆಯಲ್ಲಿ.

• ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ

ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸಿನಲ್ಲಿರಬೇಕಾದರೆ ನಡೆದ ಒಂದು ಅವಘಡದಿಂದ ಕ್ರೀಡೆಯನ್ನು ಮುಂದುವರೆಸಲು ವೈದ್ಯರು ನಿರಾಕರಿಸಿದ ಕಾರಣ ಕ್ರೀಡೆಯನ್ನು ತನ್ನ ಬದುಕಿನಲ್ಲಿ ಮೊಟಕುಗೊಳಿಸಬೇಕಾಗಿ ಬಂತು. ಯಾವಾಗಲೂ ಚುರುಕುತನದಿಂದ ಇದ್ದ ಈಕೆ ಸುಮ್ಮನೆ ಖಾಲಿ ಕೂರಲಿಲ್ಲ, ಯಾವಾಗಲೂ ಯಾವುದಾದರು ಒಂದು ರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಸದಾ ತುಡಿಯುತ್ತಿದ್ದ ರಿಷಾ ಮುಂದೆ ಏನು ಮಾಡಬೇಕೆಂದು ಯೋಚನೆ ಮಾಡುತ್ತಿದ್ದರು. ಆಗ ಅವರಿಗೆ ಚಿಕ್ಕಂದಿನಿAದ ಆಸಕ್ತಿಯಿದ್ದ ಕ್ಷೇತ್ರವೆಂದರೇ ನಟನೆ. ನಟನೆಯನ್ನು ಕಲಿಯಲು ರಂಗಾಯಣದ ಮೈಮ್ ರಮೇಶ್‌ರವರ ಹತ್ತಿರ ನಟನೆಕಲಿಯಲು ಶುರುಮಾಡಿದರು. ನಟನೆಯ ಕಲಿಕೆ ನಡೆಯುತ್ತಿದ್ದಂತೆ ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು. ಏನಾದರೂ ಒಂದು ಸಾಧನೆ ಮಾಡಬೇಕೆಂದುಕೊAಡಿದ್ದ ರಿಷಾಗೆ ಹರಿಕಥೆಯಲ್ಲಾ ಗಿರಿಕಥೆ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ಶೈನ್ ಶೆಟ್ಟಿ ಜೊತೆ ನಟಿಸುವ ಅವಕಾಶ ಸಿಕ್ಕಿತು. ಸಿಕ್ಕ ಒಂದು ಅವಕಾಶದಲ್ಲಿ ಶ್ರಮವಹಿಸಿ ನಟಿಸಿದರು. ತಮ್ಮ ನಟನೆಯಲ್ಲಿ ಅವರಿಗೆ ಒಂದು ನಂಬಿಕೆ ಬಂದು ಇನ್ನು ನಟನೆಯಲ್ಲಿ ಮುಂದುವರೆಯಬಹುದು ಎಂಬ ವಿಶ್ವಾಸ ಮೂಡಿತು.

 

ಒಂದರಿಂದೆ ಒಂದು ಸಿನೆಮಾ ಅವಕಾಶ ಬಂತು

 

ರಿಷಾ ಗೌಡರಿಗೆ ಈಗ ಅವಕಾಶಗಳ ಮೇಲೆ ಅವಕಾಶಗಳು. ಈ ಬಾರಿ ಅವರಿಗೆ ಬಂದ ಅವಕಾಶಗಳು ಸಣ್ಣಪುಟ್ಟದ್ದಾಗಿರಲಿಲ್ಲಾ ಒಂದು ದೊಡ್ಡ ಬ್ಯಾನರ್‌ನಲ್ಲಿ ಒಂದು ಒಳ್ಳೆಯ ಸಿನಿಮಾ ತಂಡದ ಜೊತೆ ನಟಿಸುವ ಅವಕಾಶ ಸಿಕ್ಕಿತು. ಓಂ ಪ್ರಕಾಶ್ ರಾವ್ ನಿರ್ದೇಶನದ ‘ಕ್ರೇಜಿ ಕೀರ್ತಿ’ಯಲ್ಲಿ ಲವ್ ಮಾಕ್ಟೆಲ್ ಖ್ಯಾತಿಯ ಅಭಿಯ ಜೊತೆ ನಾಯಕಿಯಾಗಿ ಅಭಿನಯಿಸುವ ಅವಕಾಶ ಸಿಕ್ಕಿತು. ಹಾಗೆ ಆ ಸಿನಿಮಾದಲ್ಲಿ ನಟಿಸುತ್ತಿದ್ದಂತೆಯೆ ಇನ್ನೆರಡು ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಸಿಕ್ಕಿತು. ಕಾರ್ತಿಕ್ ನಿರ್ದೇಶನದ ಧರ್ಮ ಕೀರ್ತಿರಾಜ್ ನಾಯಕ ನಟನಾಗಿ ನಟಿಸಿರುವ ‘ಬೆಂಗಳೂರು ಓನ್’ಚಿತ್ರದಲ್ಲಿ ಮತ್ತು ವಿನಯ್ ನಟಸಿ, ಮತು ನಿರ್ದೇಶಿಸುತ್ತಿರುವ ‘ಆಸ್ಟಿನ್‌ನ್ನಾ ಮಹಾನ್ಮೌನ ಎಂಬ ಮೂರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಒದಗಿಬಂತು. ರಿಷಾರವರಿಗೆ ಕ್ರೀಡಾರಂಗದಲ್ಲಿ ಆಗಿದ್ದ ಬದುಕಿನ ನಿರಾಶೆ ಚಿತ್ರರಂಗದಲ್ಲಿ ಹೊಸ ಬದುಕಿನ ಭರವಸೆಯಾಗಿ ಮೂಡುತ್ತಾ ಹೊಯಿತು. ಅವರಿಗೆ ಈಗಲೂ ನಿರ್ದೇಶಕರಿಂದ ಹೊಸ ಹೊಸ ಕಥೆ ಕೇಳುತ್ತಿದ್ದಾರೆ. ಬಹಳ ಮಂದಿ ನಿರ್ದೇಶಕರು ಕಥೆ ಹೇಳಲು ಬರುತ್ತಿದ್ದಾರಂತೆ ಈ ಮೂರು ಸಿನಿಮಾ ಒಟ್ಟಿಗೆ ತೆರೆ ಕಾಣಲು ಸಿದ್ದವಾಗಿರುವುದರಿಂದ ಈಗ ಆ ಸಿನಿಮಾಗಳ ಪ್ರಮೊಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರಂತೆ. ಕೊಡಗಿನ ಹುಡುಗಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಬದ್ರ ಬುನಾದಿ ಹಾಕಿಕೊಳ್ಳುತ್ತಿದ್ದಾರೆ. ತಮ್ಮ ಶಿಸ್ತಿನಿಂದ ತಮ್ಮ ಕೆಲಸದ ತನ್ಮಯತೆಯಿಂದ ಚಿತ್ರರಂಗದವರ ಮನ ಗೆದ್ದಿದ್ದಾರೆ. ಇನ್ನೂ ಪ್ರೇಕ್ಷಕರ ಮನ ಗೆಲ್ಲಲು ರೆಡಿಯಾಗಿ ಬರುತ್ತಿದ್ದಾರೆ ಸ್ವಾಗತಿಸೋಣ. ಒಳ್ಳೆಯ ಕಥೆ ಒಳ್ಳೆಯ ತಾರಾಬಳಗ ಒಳ್ಳೆಯ ಚಿತ್ರತಂಡ ಮೊದಲ ಮೂರು ಸಿನಿಮಾದಲ್ಲಿಯೇ ಇವರಿಗೆ ಸಿಕ್ಕಿದೆಯೆಂದರೆ ಅದು ರಿಷಾರ ಆತ್ಮ ವಿಶ್ವಾಸವೆ ಸರಿ

 

Share this post:

Related Posts

To Subscribe to our News Letter.

Translate »