ಹಾಡುಗಳೇ ಚಿತ್ರಕ್ಕೆ ಮೊದಲು ಆಮಂತ್ರಣವಿದ್ದಂತೆ. ಇಂಥದ್ದೊಂದು ಆಮಂತ್ರಣವನ್ನು ತಯಾರಿಸಿ ಜನರ ಮುಂದೆ ಹೋಗಿದ್ದಾರೆ ನಿರ್ದೇಶಕ, ನಟ, ನಿರ್ಮಾಪಕ ರಿಚ್ಚಿ. ರಿಚ್ಚಿ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ “ರಿಚ್ಚಿ” ಚಿತ್ರದ “ಸನಿಹ ನೀ ಇರುವಾಗ” ಎಂಬ ಹಾಡನ್ನು ಖ್ಯಾತ ಗಾಯಕ ಸೋನು ನಿಗಮ್ ಹಾಡಿದ್ದಾರೆ. ಅಗಸ್ತ್ಯ ಅವರು ಸಂಗೀತ ಸಂಯೋಜಿಸಿರುವ ಈ ಹಾಡು ಸದ್ಯದಲ್ಲೇ A2 ಮ್ಯೂಸಿಕ್ ನಲ್ಲಿ ಬಿಡುಗಡೆ ಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಸರ್ಚ್ ಟಾಪ್ 10ನಲ್ಲಿ ಕನ್ನಡ ಸಿನಿಮಾಗಳ ಹೆಸರೇ ಇಲ್ಲ!
ಈ ಚಿತ್ರದ ಮೋಹಕ ಹಾಡೊಂದು ಈಗಾಗಲೇ ಬಿಡುಗಡೆಯಾಗಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿದ್ದು , ಕುನಾಲ್ ಗಾಂಜಾವಾಲಾ ಸಂಗೀತದೊಂದಿಗೆ ಹಾಡು ಮೂಡಿ ಬಂದಿದೆ. ಈ ಚೆಂದದ ಹಾಡು ಕೇಳುಗರನ್ನೆಲ್ಲ ಒಂದೇ ಸಲಕ್ಕೆ ಪ್ರೇಮ ಲೋಕದಲ್ಲಿ ತೇಲಾಡಿಸುತ್ತಿದೆ. ‘ಕಳೆದು ಹೋಗಿರುವೆ ನಿನ್ನ ನೋಡಿ, ಜೀವ ಹಿಂಡುತಿದೆ ಒಲವು ಮೂಡಿ’ ಅಂತ ಶುರುವಾಗುವ ಈ ಹಾಡು ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲದರಲ್ಲಿಯೂ ಮೋಡಿ ಮಾಡುವಂತಿದೆ. ಅದರಲ್ಲಿಯೂ ರಿಚ್ಚಿ ಮತ್ತು ರಮೋಲಾ ಜೋಡಿ ಎಲ್ಲರನ್ನೂ ಆವರಿಸಿಕೊಳ್ಳುವಂತೆ ಕಾಣಿಸಿಕೊಂಡಿದೆ. ಈ ಮೂಲಕ ಇದೊಂದು ಅದ್ಭುತ ಪ್ರೇಮ ಕಥಾನಕವಾಗಿ ದಾಖಲಾಗುವ ಭರವಸೆಯಂತೂ ದಟ್ಟವಾಗಿದೆ. ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಗೀತರಚನೆಕಾರ ಗೌಸ್ ಪೀರ್ ಖಾತೆಗೆ ಮತ್ತೊಂದು ಮಧುರವಾದಗೀತೆ ಜಮೆಯಾಗಿದೆ. ಅಗಸ್ತ್ಯ ಸಂತೋಷ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಗೀತೆಯನ್ನು, ಕುನಾಲ್ ಗಾಂಜಾವಾಲಾ ಹಾಡಿದ್ದಾರೆ.
ಮಾರುತಿ ಮೂವೀ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ವೆಂಕಟಾಚಲಯ್ಯ ಹಾಗೂ ರಾಕೇಶ್ ರಾವ್ ಅವರ ಸಹ ನಿರ್ಮಾಣವಿರುವ “ರಿಚ್ಚಿ” ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ಅಜಿತ್ ಕುಮಾರ್ ಅವರ ಛಾಯಾಗ್ರಹಣ “ರಿಚ್ಚಿ” ಚಿತ್ರದಲ್ಲಿ “ಟಗರು” ಖ್ಯಾತಿಯ ಮಾನ್ವಿತ ಕಾಮತ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.