Sandalwood Leading OnlineMedia

*ಪ್ರತಿಷ್ಠಿತ ಗೋವಾ ‘ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್’ ನಲ್ಲಿ ‘ರೆಮೋ’ ಕಮಾಲ್ 

ಪವನ್ ಒಡೆಯರ್ ನಿರ್ದೇಶನದ ಇಶಾನ್, ಆಶಿಕಾ ರಂಗನಾಥ್ ಜೋಡಿಯ ‘ರೆಮೋ’ ಸಿನಿಮಾ ಸ್ಯಾಂಡಲ್ ವುಡ್ ಅಂಗಳದಲ್ಲಿ ಕ್ರೇಜ್ ಸೃಷ್ಟಿಸಿದೆ. ಕ್ರೇಜಿ ಟ್ರೇಲರ್ ಮೂಲಕ ಸಿನಿ ಪ್ರೇಮಿಗಳ ಕುತೂಹಲ ಹೆಚ್ಚಿಸಿರುವ ಈ ಚಿತ್ರ ನಾಳೆ ರಾಜ್ಯಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಸಿನಿಮಾದ ಭರ್ಜರಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಾಯಕ ನಟ ಇಶಾನ್, ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಗೋವಾಗೆ ತೆರಳಿದ್ದಾರೆ. ಇದಕ್ಕೆ ಕಾರಣ ವಲ್ಡ್ ಫೇಮಸ್ ಆಗಿರುವ ‘ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್ ಆಫ್ ಇಂಡಿಯಾ’.  ಪ್ರತಿಷ್ಠಿತ 53ನೇ ‘ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್ ಆಫ್ ಇಂಡಿಯಾ’ ಗೋವಾದಲ್ಲಿ ನಡೆಯುತ್ತಿದೆ. ಬೇರೆ ಬೇರೆ ದೇಶದ ವಿವಿಧ ಕೆಟಗರಿಯ ಆಯ್ದ ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಪ್ರಪಂಚದ ಬೇರೆ ಬೇರೆ ಭಾಷೆಯ ಹೆಸರಾಂತ ನಿರ್ದೇಶಕರು, ತಂತ್ರಜ್ಞರು, ಬರಹಗಾರರು ಈ ಫಿಲ್ಮಂ ಫೆಸ್ಟ್ ನಲ್ಲಿ ಭಾಗಿಯಾಗಿರುತ್ತಾರೆ. ಇಂತಹ ದೊಡ್ಡ ವೇದಿಕೆಗೆ ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ರೆಮೋ’ ಸಿನಿಮಾ ಸೆಲೆಕ್ಟ್ ಆಗಿದ್ದು ಇಂದು ಸಂಜೆ ಸ್ಕ್ರೀನಿಂಗ್ ಆಗುತ್ತಿದೆ.

 

 

31 ಗೋವು ದತ್ತು ಪಡೆದ ಚಿತ್ರನಟ ಸುದೀಪ್

 

 

ಇಂದು ಸಂಜೆ ನಡೆಯುತ್ತಿರುವ ಪ್ರೀಮಿಯರ್ ಶೋ ನಲ್ಲಿ ‘ರೆಮೋ’ ಸಿನಿಮಾ ಸ್ಕ್ರೀನಿಂಗ್ ಆಗುತ್ತಿದ್ದು, ಈ ಪ್ರಯುಕ್ತ ನಿರ್ದೇಶಕ ಪವನ್ ಒಡೆಯರ್, ನಾಯಕ ಇಶಾನ್, ಆಶಿಕಾ ರಂಗನಾಥ್ ಒಳಗೊಂಡ ಚಿತ್ರತಂಡ ಗೋವಾಗೆ ತೆರಳಿದೆ. ‘ರೆಮೋ’ ಸಿನಿಮಾವನ್ನು ಎಲ್ಲರೊಂದಿಗೆ ಕುಳಿತು ವೀಕ್ಷಣೆ ಮಾಡಲಿದೆ ಚಿತ್ರತಂಡ. ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಭಾಗಿಯಾಗಿರುವ ವೀಡಿಯೋ ಹಾಗೂ ಫೋಟೋ ಹಂಚಿಕೊಂಡು ನಿರ್ದೇಶಕ ಪವನ್ ಒಡೆಯರ್ ಸಂತಸ ಹಂಚಿಕೊಂಡಿದ್ದಾರೆ. ‘ರೆಮೋ’ ಮ್ಯೂಸಿಕಲ್ ಮತ್ತು ಔಟ್ ಅಂಡ್ ಔಟ್ ರೋಮ್ಯಾಂಟಿಕ್ ಸಬ್ಜೆಕ್ಟ್ ಸಿನಿಮಾ. ಜಯಾದಿತ್ಯ ಬ್ಯಾನರ್ ನಡಿ ಸಿ. ಆರ್. ಮನೋಹರ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಿ. ಆರ್. ಗೋಪಿ ಸಹ ನಿರ್ಮಾಣ ಚಿತ್ರಕ್ಕಿದೆ. ವೈದಿ ಕ್ಯಾಮೆರಾ ವರ್ಕ್, ಕೆ.ಎಂ. ಪ್ರಕಾಶ್ ಸಂಕಲನ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ.

 

 

 

 

Share this post:

Related Posts

To Subscribe to our News Letter.

Translate »