Sandalwood Leading OnlineMedia

ರಹಮಾನ್ ವಿಚ್ಛೇದನಕ್ಕೆ ಅಸಲಿ ಕಾರಣವೇನು? ವೀಡಿಯೋ ವೈರಲ್

ಸಂಗೀತ ಮಾಂತ್ರಿಕ ಎ. ಆರ್ ರಹಮಾನ್ ತಮ್ಮ ಪತ್ನಿ ಸೈರಾ ಬಾನು ಅವರಿಂದ ದೂರಾಗುತ್ತಿದ್ದಾರೆ. ಇಬ್ಬರೂ ಒಪ್ಪಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. 2000 ಕೋಟಿ ರೂ. ಆಸ್ತಿ ಹೊಂದಿರುವ ರಹಮಾನ್ ಪತ್ನಿಗೆ ಎಷ್ಟು ಜೀವನಾಂಶ ಕೊಡುತ್ತಾರೆ ಎನ್ನುವ ಬಗ್ಗೆಯೂ ಚರ್ಚೆ ಆಗುತ್ತಿದೆ.ಮದುವೆ ಆಗಿ 29 ವರ್ಷಗಳ ಬಳಿಕ ಎ. ಆರ್ ರಹಮಾನ್ ಹಾಗೂ ಸೈರಾ ಬಾನು ದಾಂಪತ್ಯದಲ್ಲಿ ಬಿರುಗಾಳಿ ಬೀಸಿದೆ. ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸೈರಾ ತಮ್ಮ ವಕೀಲರ ಮೂಲಕ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದಾರೆ. ರಹಮಾನ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಪೋಷಕರ ಡಿವೋರ್ಸ್ ನಿರ್ಧಾರದ ಬಗ್ಗೆ ಮಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇನ್ನು ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಇದೆಲ್ಲದರ ನಡುವೆ ಎ. ಆರ್ ರಹಮಾನ್ ಹಳೇ ವೀಡಿಯೋವೊಂದು ವೈರಲ್ ಆಗುತ್ತಿದೆ. ಅಂದಹಾಗೆ ರಹಮಾನ್ ಬಹಳ ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು ಗೊತ್ತೇಯಿದೆ. ತಂದೆಯ ಅಗಲಿಕೆ ಬಳಿಕ ತಾಯಿ ಜೊತೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದರು.

ಇನ್ನು ರಹಮಾನ್ ಹಾಗೂ ಸೈರಾ ಬಾನು ಡಿವೋರ್ಸ್ ಬೆನ್ನಲ್ಲೇ ಅವರ ಆಪ್ತಬಳಗದಲ್ಲಿ ಗುರ್ತಿಸಿಕೊಂಡಿದ್ದ ಮೋಹಿನಿ ಡೇ ಕೂಡ ಪತಿಯಿಂದ ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದಾರೆ. ಇದನ್ನು ನೋಡಿ ಎರಡಕ್ಕೂ ಕೆಲವರು ಲಿಂಕ್ ಮಾಡುತ್ತಿದ್ದಾರೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ವಕೀಲರಿಂದ ಸ್ಪಷ್ಟನೆ ಸಿಕ್ಕಿದೆ. ಎ. ಆರ್ ರಹಮಾನ್‌ಗೆ ಮತ್ತೆ ಹಿಂದೂ ಧರ್ಮದತ್ತ ಒಲವು ಮೂಡಿದೆ. ಅದಕ್ಕೆ ಡಿವೋರ್ಸ್ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಕೆಲವರು ಊಹಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಒಂದು ವೀಡಿಯೋವನ್ನು ಲಿಂಕ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಆದರೆ ಇದು ಕೇವಲ ಊಹಾಪೋಹ ಅಷ್ಟೆ. ಇದರಲ್ಲಿ ಯಾವುದೇ ಸತ್ಯ ಇಲ್ಲ ಎನ್ನುವ ವಾದವೂ ಇದೆ. ವೀಡಿಯೋದಲ್ಲಿ ಶ್ರೀಕೃಷ್ಣನ ಭಜನೆ ಮಾಡುತ್ತಿರುವುದನ್ನು ನೋಡಬಹುದು. ರಹಮಾನ್ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಅದನ್ನು ಸೆರೆ ಹಿಡಿಯುತ್ತಿದ್ದಾರೆ.

ಕೆಲ ವರದಿಗಳ ಪ್ರಕಾರ, ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ದುಬೈನಲ್ಲಿರುವ ತಮ್ಮ ನಿವಾಸದಲ್ಲಿ ‘ಹರೇ ಕೃಷ್ಣ ಕೀರ್ತನ’ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎನ್ನಲಾಗಿತ್ತು. ಕೆಲ ಕೃಷ್ಣನ ಭಕ್ತರು ಸಂಗೀತ ವಾದ್ಯಗಳನ್ನು ನುಡಿಸುತ್ತಾ “ಹರೇ ಕೃಷ್ಣ ಹರೇ ರಾಮ” ಭಜನೆ ಮಾಡುತ್ತಿರುವುದನ್ನು ನೋಡಬಹುದು. ಅದನ್ನು ರಹಮಾನ್ ಆಸ್ವಾದಿಸುತ್ತಾ ಕೂತಿದ್ದಾರೆ. ಅಂದಹಾಗೆ 1967, ಜನವರಿ 6 ರಂದು ಎ. ಆರ್ ರಹಮಾನ್ ಮದ್ರಾಸ್‌ನಲ್ಲಿ ಜನಿಸಿದರು. ತಂದೆ ಆರ್‌. ಕೆ ಶೇಖರ್. ತಾಯಿ ಕಸ್ತೂರಿ. ತಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪತ್ನಿ ಕಸ್ತೂರಿ ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಪ್ರಾರ್ಥಿಸಿದ್ದರು. ತಂದೆಯ ಕೊನೆ ದಿನಗಳಲ್ಲಿ ಸೂಫಿ ವೈದ್ಯರೊಬ್ಬರು ಚಿಕಿತ್ಸೆ ನೀಡಿದ್ದರು. ತಂದೆ ನಿಧನವಾಗಿ ಕೆಲ ವರ್ಷಗಳ ಬಳಿಕ ಮತ್ತೆ ಆ ಸೂಫಿ ಸಂತನನ್ನು ಭೇಟಿ ಮಾಡಿದ್ದರು. ಅವರ ಮಾರ್ಗದರ್ಶನದಂತೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಗಿ ಎಂದು ರಹಮಾನ್ ಹೇಳಿಕೊಂಡಿದ್ದರು. ಮುಂದೆ ಅವರು ಹೆಸರು ಬದಲಿಸಿಕೊಳ್ಳಬೇಕು ಎಂದುಕೊಂಡರು. ಆಗ ಒಬ್ಬ ಹಿಂದೂ ಜ್ಯೋತಿಷಿ ಅಬ್ದುಲ್ ರಹಮಾನ್ ಹಾಗೂ ಅಬ್ದುಲ್ ರಹೀಮ್ ಹೆಸರುಗಳನ್ನು ಸೂಚಿಸಿದ್ದರು. ರಹಮಾನ್ ಎನ್ನುವ ಹೆಸರಿಗೆ ತಾಯಿ ‘ಅಲ್ಲಾ ರಖಾ’ (AR) ಎಂದು ಸೇರಿಸಿದರು. ಮುಂದೆ ಎ. ಆರ್ ರಹಮಾನ್ ಆಗಿ ಅವರು ಸಂಗೀತ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದರು.

 

 

 

Share this post:

Related Posts

To Subscribe to our News Letter.

Translate »