ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯಲ್ಲಿರುವ ನಟಿಯಾಗಿರುವ ರೀಷ್ಮಾ ನಾಣಯ್ಯ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಹೌದು. ರೀಷ್ಮಾ ನಾಣಯ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋ ಹಾಗೂ ಸಿನಿಮಾಗೆ ಸಂಬಂಧಿಸಿದ ವಿಚಾರವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಏಕ್ ಲವ್ ಯಾ ಸಿನಿಮಾದ ಮೂಲಕ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ನಟ ರೀಷ್ಮಾ ನಾಣಯ್ಯ ಕೈಯಲ್ಲಿ ಸದ್ಯ ಸಾಕಷ್ಟು ಸಿನಿಮಾಗಳಿವೆ. ಶ್ರೇಯಸ್ ಜೊತೆ ರಾಣ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಬಾನದಾರಿಯಲ್ಲಿ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ರೀಷ್ಮಾ ಇದೀಗ ಧನ್ವೀರ್ ಗೆ ನಾಯಕಿಯಾಗಿದ್ದಾರೆ.
ಏಕ್ ಲವ್ ಯಾ ಸಿನಿಮಾ ಈ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನವನಟಿ ರೀಷ್ಮಾ ನಾಣಯ್ಯ ಅವರು ಸಾಕಷ್ಟು ಸದ್ದು ಮಾಡಿದ್ದಾರೆ. ಏಕ್ ಲವ್ ಯಾ ಮೂಲಕ ಸಿನಿಮಾ ರಂಗ ಪ್ರವೇಶಿಸಿರುವ ರೀಷ್ಮಾ ನಾಣಯ್ಯ ಅವರು ಮಡಿಕೇರಿ ಮೂಲದವರು.
ಧನ್ವೀರ್ ಗೌಡ ನಾಯಕನಾಗಿರುವ ವಾಮನ ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ರೀಷ್ಮಾ ನಾಣಯ್ಯ. ವಾಮನ ಸಿನಿಮಾ ನಂತರ ಚೀ ಕಳ್ಳ ಚಿತ್ರಕ್ಕೂ ಸಹಿ ಮಾಡಿದ್ದಾರೆ ರೀಷ್ಮಾ. ಜೊತೆಗೆ ಶ್ರೇಯಸ್ ಕೆ ಮಂಜು ನಟನೆಯ ರಾಣ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂದ ಬ್ಯುಸಿ ನಾಯಕಿಯಾಗಿರುವ ರೀಷ್ಮಾ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲ್ಲಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.