ಚಲನಚಿತ್ರಗಳು, ಶಾರ್ಟ್ ಫಿಲಂ, ವೆಬ್ ಸಿರೀಸ್ ಮೊದಲಾದವುಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಸುಸಜ್ಜಿತ ಸೌಲಭ್ಯ ಹೊಂದಿರುವ ‘ರೆಡ್ ರಾಕ್ ಸ್ಟುಡಿಯೋ’ ಇತ್ತೀಚೆಗೆ ಲೋಕಾರ್ಪಣೆಯಾಯಿತು. ಬೆಂಗಳೂರಿನ ನಾಗರಬಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಸುಸಜ್ಜಿತ ರೀತಿಯಲ್ಲಿ, ಆಧುನಿಕ ಶೈಲಿಯಲ್ಲಿ ‘ಕಮರ್ ಫಿಲಂ ಫ್ಯಾಕ್ಟರಿ’ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗಿರುವ ‘ರೆಡ್ ರಾಕ್ ಸ್ಟುಡಿಯೋ’ವನ್ನು ನಟಿ ಪ್ರಿಯಾಂಕಾ ಉಪೇಂದ್ರ ಉದ್ಘಾಟಿಸಿದರು. ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
READ MORE; ‘ಆಕಾಶ್’, ‘ಅರಸು’ ನಿರ್ದೇಶಕರಿಂದ ರಕ್ಷಿತ್‌ಗಾಗಿ ಹೊಸ ಸಿನಿಮಾ
READ MORE; ಪಾಂಡ್ಯರ ಮನೆ ತೊರೆದು ನತಾಶಾ ಎಲ್ಲಿಗೆ ಹೋದರು?
ಇದೇ ವೇಳೆ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ, ‘ಇಂದಿನ ದಿನಗಳಲ್ಲಿ ಸಿನಿಮಾಗಳಿಗೆ ಕಂಟೆಂಟ್ ಮತ್ತು ಕ್ವಾಲಿಟಿ ತುಂಬ ಮುಖ್ಯ. ಇತ್ತೀಚೆಗೆ ಬರುತ್ತಿರುವ ಸಾಕಷ್ಟು ಹೊಸ ಸಿನಿಮಾ ಮೇಕರ್ಸ್ ತುಂಬ ಹೊಸದಾಗಿ ಯೋಚಿಸುತ್ತಿದ್ದಾರೆ. ಅಂಥವರಿಗೆ ಕೈಗೆಟಕುವ ದರದಲ್ಲಿ ತಂತ್ರಜ್ಞಾನ ಲಭ್ಯತೆಯಿದ್ದರೆ ಗುಣಮಟ್ಟದಲ್ಲಿ ಸಿನಿಮಾ ಮಾಡಬಹುದು. ‘ರೆಡ್ ರಾಕ್ ಸ್ಟುಡಿಯೋ’ದಲ್ಲಿ ಇಂದಿನ ಸಿನಿಮಾ ಮೇಕರ್ಸ್ ಗೆ ಬೇಕಾದ ಎಲ್ಲ ಸೌಲಭ್ಯಗಳಿದ್ದು, ಇದರಿಂದ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ’ ಎಂದು ಆಶಿಸಿದರು.
ಇನ್ನು ನೂತನವಾಗಿ ಆರಂಭವಾಗಿರುವ ‘ರೆಡ್ ರಾಕ್ ಸ್ಟುಡಿಯೋ’ದಲ್ಲಿ ಸಿನಿಮಾ ಮತ್ತು ದೃಶ್ಯ ಮಾಧ್ಯಮಗಳಿಗೆ ಬೇಕಾದ ಎಡಿಟಿಂಗ್, ಡಬ್ಬಿಂಗ್, ಡಿ.ಐ, ವಿಎಫ್ಎಕ್ಸ್, ಗ್ರೀನ್ ಮ್ಯಾಟ್ ಶೂಟ್, ಪೋಟೋ ಶೂಟ್, 5.1 & 7.1 ಸೌಂಡ್ ಸಿಸ್ಟಂ, ಅಟ್ಮೋಸ್ ಹೀಗೆ ಎಲ್ಲ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳಿದ್ದು, ಕೈಗೆಟಕುವ ದರದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಒಂದೇ ಸೂರಿನಡಿ ಬೆಂಗಳೂರಿನಲ್ಲೇ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಹಾಜರಿದ್ದ ‘ಕಮರ್ ಫಿಲಂ ಫ್ಯಾಕ್ಟರಿ’ಯ ಕಮರ್, ಹಿರಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸು, ಕೃಷ್ಣ ಮೊದಲಾದವರು ‘ರೆಡ್ ರಾಕ್ ಸ್ಟುಡಿಯೋ’ ದ ಹಿಂದಿನ ಉದ್ದೇಶ, ಲಭ್ಯವಿರುವ ಸೌಲಭ್ಯಗಳು, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.