ಆಗಸದೆತ್ತರೆಕ್ಕೆ ಹಾರಲು ಸಜ್ಜಾದ ಗಾಳಿಪಟ : ಚಿತ್ರಕ್ಕೆ ಸಾಥ್ ನೀಡಿದ ರಿಯಲ್ ಸ್ಟಾರ್ ಉಪೇಂದ್ರ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ “ಗಾಳಿಪಟ 2’ ಚಿತ್ರದ ಹವಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಿಟ್‌ಲಿಸ್ಟ್ ಸೇರಿವೆ.. ಚಿತ್ರ ಬಿಡುಗಡೆಗೆ ಅಭಿಮಾನಿ ಸಮೂಹ ಕಾತುರದಿಂದ ಕಾಯುತ್ತಿದೆ. ಈಗ ಚಿತ್ರತಂಡದಿಂದ ಹೊಸ ಅಪ್‌ಡೇಟ್ ಬಂದಿದೆ. ಗಾಳಿಪಟ 2 ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಗೋಲ್ಡನ್ ಸ್ಟಾರ್ ಗಣೇಶ್ ಕ್ಯಾರೆಕ್ಟರ ಟೀಸರ್ ಲಾಂಚ್ ಮಾಡುವ ಮೂಲಕ್ಕೆ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. .ಇನ್ನು ಪ್ರಖ್ಯಾತ ನಿರ್ಮಾಪಕ, ರಮೇಶ್ ರೆಡ್ಡಿ ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಜಿಕ್ ಇದ್ದು, ಸಂತೋಷ್ ರೈ ಪಾತಾಜೆ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.
ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್‌ನಲ್ಲಿ ತಯಾರಾಗಿರುವ ಬಹುನಿರೀಕ್ಷಿತ ‘ಗಾಳಿಪಟ-2’ ಚಿತ್ರ ಆಗಸ್ಟ್ 12ಕ್ಕೆ ಬಿಡುಗಡೆಯಾಗಲಿದೆ.