Sandalwood Leading OnlineMedia

ಗಮನ ಸೆಳೆದ ಆರ್‌.ಸಿ.ಬಿ ಬ್ರದರ್ಸ್‌ ಟ್ರೈಲರ್‌, ಬಹುನಿರೀಕ್ಷಿತ ಚಿತ್ರ ನಾಳೆ ಭರ್ಜರಿ ರಿಲೀಸ್‌

 

    ಸಹೋದರರಿಬ್ಬರ ನಡುವಿನ ಬಾಂಧವ್ಯದ  ಕಥೆಯನ್ನು  ಹಾಸ್ಯಮಯ ಘಟನೆಗಳನ್ನಿಟ್ಟುಕೊಂಡು ನಿರೂಪಿಸಿರುವ ಚಿತ್ರ ಆರ್‌ಸಿ ಬ್ರದರ್ಸ್. ತಬಲಾನಾಣಿ ಹಾಗೂ ಕುರಿಪ್ರತಾಪ್ ಅಣ್ಣ ತಮ್ಮನಾಗಿ ನಟಿಸಿರುವ ಚಿತ್ರಕ್ಕೆ ಪ್ರಕಾಶ್‌ಕುಮಾರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌ಕಟ್ ಹೇಳಿದ್ದಾರೆ. ಸಂಭ್ರಮಶ್ರೀ,  ನಯನ (ಕಾಮಿಡಿ ಕಿಲಾಡಿಗಳು)ಹಾಗೂ ನೀತುರಾಯ್ ಚಿತ್ರದ  ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚಿಗೆ ನಡೆಯಿತು.  ಮಣಿ ಶಶಾಂಕ್ ಚಿತ್ರದ ನಿರ್ಮಾಪಕರಾಗಿದ್ದು, ಶ್ರೀಮತಿ ಸಹನಾ ಗಿರೀಶ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ಮಾಂಕಾಳಮ್ಮ ಸನ್ನಿಧಿಯಲ್ಲಿ `ಮಂಡ್ಯಹೈದ’ನಿಗೆ ಮುಹೂರ್ತ

    ಸಂದರ್ಭದಲ್ಲಿ  ನಿರ್ದೇಶಕ  ಪ್ರಕಾಶ್‌ಕುಮಾರ್  ಮಾತನಾಡಿ  ಇದೇ 26ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ,   ಟ್ರೈಲರ್ ಗಿಂತ ಹೆಚ್ಚು ಕ್ವಾಲಿಟಿ ಚಿತ್ರದಲ್ಲಿದೆ.  ಇಬ್ಬರು ಸಹೋದರರ ನಡುವೆ ನಡೆಯುವ ಹಾಸ್ಯಮಯ ಕಥೆಯಿದು.  ತಬಲಾನಾಣಿ ಅವರು ಅದ್ಭುತವಾದ ಡೈಲಾಗ್‌ಗಳನ್ನು ಬರೆದಿದ್ದಾರೆ. ಸೋದರರ ನಡುವಿನ  ಬಾಂಧವ್ಯ, ಕೆಲವಿಚಾರಕ್ಕೆ ಆಗುವ ಜಗಳ,  ಮತ್ತೆ ಅದನ್ನು ನಿಭಾಯಿಸಿಕೊಂಡು  ಅವರು ಹೇಗೆ ಜೊತೆಗಿರ‍್ತಾರೆ ಎಂಬುದನ್ನು  ಹೇಳಿದ್ದೇವೆ. ಅಣ್ಣನಿಗೆ ಮದುವೆ ಆಗಿರಲ್ಲ, ತಮ್ಮನಿಗೆ ಮದುವೆ ಮಾಡಿಸುತ್ತಾರೆ. ನಂತರ  ಅಣ್ಣ ಮದುವೆಯಾಗಬೇಕೆಂದು ಹೋದಾಗ ಏನೆಲ್ಲ ಸಫರ್ ಪಡಬೇಕಾಗುತ್ತದೆ, ತನ್ನ ಫೀಲ್ ಹೇಳಿಕೊಳ್ಳಲು ಆತನಿಗೆ ಯಾರೂ ಇರಲ್ಲ. ಬೆಂಗಳೂರು ಸುತ್ತಮುತ್ತ 35 ದಿನ‌ಗಳ‌ ಕಾಲ  ಚಿತ್ರೀಕರಿಸಿದ್ದೇವೆ ಎಂದು ಹೇಳಿದರು.

ಕೊನೆಯ ಹಂತದ ಚಿತ್ರೀಕರಣದಲ್ಲಿ ‘ಧೀರ ಭಗತ್ ರಾಯ್’ – ಫೆಬ್ರವರಿಯಲ್ಲಿ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ.

  ನಿರ್ಮಾಪಕ ಮಣಿ ಶಶಾಂಕ್ ಮಾತನಾಡಿ ನಾನೊಬ್ಬ ಅಡ್ವೋಕೇಟ್. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಇಡೀ ಸಿನಿಮಾ ನಗಿಸುತ್ತಲೇ ಮೆಸೇಜ್ ಹೇಳುತ್ತದೆ. 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು. ಮತ್ತೊಬ್ಬ ನಿರ್ಮಾಪಕ ಗಿರೀಶ್ ಮಾತನಾಡಿ ನನ್ನದು ಕ್ರೀಡಾಕ್ಷೇತ್ರ. ನಾನು ಒಲಿಂಪಿಕ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದೇನೆ.  ಮಣಿ ಶಶಾಂಕ್ ನನ್ನ ಗೆಳೆಯ.  ಹಾಗಾಗಿ ಅವರೂ ನಾವು ಸೇರಿ ಚಿತ್ರವನ್ನು ನನ್ನ ಪತ್ನಿ ಸಹನಾ ಹೆಸರಿನಲ್ಲಿ ನಿರ್ಮಿಸಿದ್ದೇನೆ. ಇದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಚಿತ್ರ. ತಬಲಾನಾಣಿ, ಕುರಿಪ್ರತಾಪ್ ಕಾಂಬಿನೇಶನ್ ಅದ್ಭುತವಾಗಿ ಬಂದಿದೆ ಎಂದು ಹೇಳಿದರು.

 

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಉದ್ಘಾಟನೆ: ಪದ್ಮಶ್ರೀ ಡಾ. ಗಿರೀಶ್​ ಕಾಸರವಳ್ಳಿ, ಡಾ. ವಿಜಯಮ್ಮ ಉಪಸ್ಥಿತಿ

  ನಾಯಕ ತಬಲಾನಾಣಿ ಮಾತನಾಡಿ ಅಣ್ಣ ತಮ್ಮಂದಿರ ಕಥೆ. ನನ್ನ ತಮ್ಮ ಪೋಲೀಸ್ ಆಗಿದ್ದರೆ, ನಾನು ಕೆಲಸವಿಲ್ಲದವನು, ಹೆಣ್ಣುಕೊಡೋಕೆ ಬಂದವರು ಮಗಳ ಸೇಫ್ಟಿ ನೋಡುತ್ತಾರೆ. ನನಗೆ ಹೆಣ್ಣು ಕೊಡಲು ಬಂದವರು ತಮ್ಮನನ್ನು ಕೇಳುತ್ತಾರೆ. ಆತನಿಗೆ ಮದುವೆಯಾದರೂ ಅಣ್ಣನ ಮದುವೆಯಾಗೋವರೆಗೆ ಪ್ರಸ್ತ ಮಾಡಿಕೊಳ್ಳಲ್ಲ ಎಂದಾಗ ಆತನ ಹೆಂಡತಿ ನನ್ನಮೇಲೆ ಕೋಪಿಸಿಕೊಳ್ಳುವುದು, ಜಗಳ ವಿರಸಗಳು ನಡೆಯುತ್ತದೆ.

 

‘ಡಾಲರ್ಸ್ ಪೇಟೆ’ಯಲ್ಲಿ ಲೂಸಿಯ ಪವನ್ ಪತ್ನಿ  –  ಸೌಮ್ಯ ಜಗನ್ ಮೂರ್ತಿ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್

   ಕೊನೆಯಲ್ಲಿ ಒಬ್ಬ ಮಹಿಳಾ ಪೋಲೀಸ್  ನನ್ನನ್ನು ಮದುವೆಯಾಗಲು  ಒಪ್ಪಿ ಜೀವನ ಕೊಡುತ್ತಾಳೆ.  ಡಿಓಪಿ, ಸಂಗೀತ ನಿರ್ದೇಶಕರು ಸೇರಿ  ಇಡೀ ಟೀಮ್ ಸ್ನೇಹದಿಂದ ಕೆಲಸ ಮಾಡಿದೆ. ಇದು ನನ್ನ 125ನೇ ಚಿತ್ರ ಎಂದು ಹೇಳಿದರು. ನಾಯಕಿ ಸಂಭ್ರಮಶ್ರೀ ಮಾತನಾಡಿ ಮೊದಲಬಾರಿಗೆ ಪೋಲೀಸ್ ಪಾತ್ರ ಮಾಡಿದ್ದೇನೆ.  ಕಂಪ್ಲೀಟ್ ಕಾಮಿಡಿ ಜೊತೆಗೆ ಎಮೋಷನ್ ಇರುವ ಚಿತ್ರವಿದು ಎಂದು ಹೇಳಿದರು.

 

*ರ್ಯಾಪ್ ಸಿಂಗರ್ ಬ್ರೋಧ. ವಿ ಹೊಸ ಸಾಂಗ್ ‘ಬಸ್ತಿ ಬೌನ್ಸ್’ ರಿಲೀಸ್*

   ಚಿತ್ರದ ಸಂಗೀತ ನಿರ್ದೇಶಕ ಪ್ರದೀಪ್‌ವರ್ಮ ಮಾತನಾಡಿ ಸಿನಿಮಾದಲ್ಲಿ ಎಲ್ಲಾ ಥರದ ಎಲಿಮೆಂಟ್ ಇದೆ. ಚಿತ್ರದಲ್ಲಿ ಒಂದು ಮೆಲೋಡಿ ಸಾಂಗ್ ಹಾಗೂ ಪ್ರೊಮೋಷನಲ್ ಸಾಂಗ್ ಇದೆ ಎಂದರು. ಸಾಮಾಜಿಕ ಹೋರಾಟಗಾರ್ತಿ ರೇವತಿ ರಾಜ್ ಅವರು ಸಂದರ್ಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.  ಕಿರಣ್‌ಕುಮಾರ್ ಚಿತ್ರದ ಛಾಯಾಗ್ರಾಹಕರು.

https://youtu.be/r6vsW4gEaV4

 

Share this post:

Related Posts

To Subscribe to our News Letter.

Translate »