Sandalwood Leading OnlineMedia

ಬೆಳ್ಳಿತೆರೆ ಮೇಲೆ ರಂಜಿಸಿದ “ಗೌರಿ”ಗೆ ಅಮೇಜಾನ್ ಪ್ರೈಮ್ ನಲ್ಲೂ ಸಕತ್ ರೆಸ್ಪಾನ್ಸ್

 

ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ವೋಟಿಂಗ್ ಲೈನ್ ಓಪನ್ ಆಗಿದೆ, ಈ ಕೂಡಲೆ ನಿಮ್ಮ ನೆಚ್ಚಿನ ನಟ/ನಟಿ, ತಂತ್ರಜ್ಞರಿಗೆ ವೋಟ್ ಮಾಡಿ.

Send “Chittara” on WhatsApp to 73 5365 5365 or click the link 👉  http://wame.pro/chittara to cast your vote!


 

 

 

  • ಸಮರ್ಜಿತ್ ಲಂಕೇಶ್ ಅಭಿನಯದ “ಗೌರಿ” ಚಿತ್ರ ಅಮೇಜಾನ್ ಪ್ರೈಮ್ ನಲ್ಲೂ ಅಧಿಕ ವೀಕ್ಷಣೆ .
  • ಮೊದಲ ಚಿತ್ರದಲ್ಲೇ ಮೋಡಿ ಮಾಡಿದ ಸುರದ್ರೂಪಿ ನಟನಿಗೆ ಕನ್ನಡ ಸೇರಿದಂತೆ ಬೇರೆ ಭಾಷೆಗಳಿಂದಲೂ ಬರುತ್ತಿದೆ ಅವಕಾಶ .

ಇಂದ್ರಜಿತ್ ಲಂಕೇಶ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ “ಗೌರಿ” ಚಿತ್ರ ಕಳೆದವರ್ಷ ತೆರೆ ಕಂಡು ಜನಪ್ರಿಯವಾಗಿತ್ತು ಹಾಗೂ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಯುವಜನತೆಯಂತೂ ಸಮರ್ಜಿತ್ ಅಭಿನಯಕ್ಕೆ ಫಿದಾ ಆಗಿದ್ದರು.‌ ಆನಂತರ ಈ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಅಲ್ಲೂ ಸಹ ಈ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ.. ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯದಾಗಿನಿಂದ ಹಿಡಿದು ಈವರೆಗೂ ಎರಡುವರೆ ಲಕ್ಷ ಗಂಟೆಗಳ ಕಾಲ‌ ಈ ಚಿತ್ರ ವೀಕ್ಷಣೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ಜನರು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಸಮರ್ಜಿತ್ ಲಂಕೇಶ್ ಅವರಿಗೆ ಕನ್ನಡ ಸೇರಿದಂತೆ ಅನೇಕ ಭಾಷೆಗಳಿಂದ ನಟಿಸಲು ಅವಕಾಶಗಳು ಬರುತ್ತಿದೆ. ನಾಯಕನಾಗಲೂ ಸಮರ್ಜಿತ್ ಪಟ್ಟ ಶ್ರಮಕ್ಕೆ ಪ್ರತಿಫಲ ದೊರಕುತ್ತಿದೆ.

 

Share this post:

Translate »