Left Ad
ಕನ್ನಡದ ಹೆಮ್ಮೆ: ಕಾಂತಾರ ಅಧ್ಯಾಯ 1 ವಿಶ್ವದಾದ್ಯಂತ 509 ಕೋಟಿ ಗಡಿ ದಾಟಿದೆ! - Chittara news
# Tags

ಕನ್ನಡದ ಹೆಮ್ಮೆ: ಕಾಂತಾರ ಅಧ್ಯಾಯ 1 ವಿಶ್ವದಾದ್ಯಂತ 509 ಕೋಟಿ ಗಡಿ ದಾಟಿದೆ!

ಹೊಂಬಾಳೆ ಫಿಲ್ಮ್ಸ್‌ನ “ಕಾಂತಾರ ಅಧ್ಯಾಯ 1” ಚಿತ್ರವು ಬಿಡುಗಡೆಯಾದ ಅಕ್ಟೋಬರ್ 2, 2025ರಿಂದ ಇಲ್ಲಿಯವರೆಗೆ ವಿಶ್ವಾದ್ಯಂತ 509 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಭರ್ಜರಿ ಯಶಸ್ಸನ್ನು ಸಾಧಿಸಿದೆ.
ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಅದರ ಅದ್ಭುತ ಕಥಾಹಂದರ, ನಮ್ಮ ನೆಲದ ಸಂಸ್ಕೃತಿಯ ವಾಸ್ತವಿಕ ಚಿತ್ರಣ ಮತ್ತು ತಾಂತ್ರಿಕ ಉತ್ಕೃಷ್ಟತೆಗಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸರಿಸಾಟಿಯಿಲ್ಲದ ಪ್ರಶಂಸೆ ಗಳಿಸಿದೆ. ಈ ಚಿತ್ರವು ದೇಶಾದ್ಯಂತ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದ್ದು, ಕನ್ನಡ ಚಿತ್ರರಂಗದ ಜಾಗತಿಕ ವಿಸ್ತಾರವನ್ನು ಇನ್ನಷ್ಟು ದೃಢಪಡಿಸಿದೆ.


2022 ರ ‘ಕಾಂತಾರ’ದ ಯಶಸ್ಸಿನ ನಂತರ, ಈ ಪೂರ್ವಕಥೆಯು (Prequel) ಫ್ರಾಂಚೈಸಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜಕುಮಾರ, ಕೆಜಿಎಫ್ ಅಧ್ಯಾಯ 1 & 2, ಕಾಂತಾರ ಮತ್ತು ಸಲಾರ್ ನಂತಹ ಬೃಹತ್ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್‌, ಇಂದು ಭಾರತೀಯ ಸಿನಿಮಾದಲ್ಲಿ ಅತ್ಯಂತ ಯಶಸ್ವಿ ಮತ್ತು ಗೌರವಾನ್ವಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗರಿ.

Spread the love
Translate »
Right Ad