Left Ad
ಈ ವಾರ ತೆರೆಯಲ್ಲಿ ಶಶಾಂಕ್ `BRAT'ISM ಅನಾವರಣ! - Chittara news
# Tags

ಈ ವಾರ ತೆರೆಯಲ್ಲಿ ಶಶಾಂಕ್ `BRAT’ISM ಅನಾವರಣ!

ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

ಡಾಲ್ಫಿನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಂಜುನಾಥ್ ಕಂದಕೂರ್ ನಿರ್ಮಿಸಿರುವ, ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ” ಬ್ರ್ಯಾಟ್” ಚಿತ್ರ ಈ ವಾರ ಅಕ್ಟೋಬರ್ 31 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ಯಶಸ್ವಿ”ಕೌಸಲ್ಯ ಸುಪ್ರಜಾ ರಾಮ” ಚಿತ್ರದ ನಂತರ ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದಿರುವ “ಬ್ರ್ಯಾಟ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಜನರ ಮನ ಗೆದ್ದಿದೆ. ಟೀಸರ್ ಹಾಗೂ ಟ್ರೇಲರ್ ಗೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಕೃಷ್ಣ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತುರದಲ್ಲಿದ್ದಾರೆ.

“ಫಸ್ಟ್ Rank ರಾಜು” ಚಿತ್ರದ ನಂತರ ಮಂಜುನಾಥ್ ವಿ ಕಂದಕೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಮನಿಶಾ ಕಂದಕೂರ್ ನಟಿಸಿದ್ದಾರೆ. ಅಚ್ಯುತಕುಮಾರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅಭಿಲಾಶ್ ಕಲ್ಲತ್ತಿ ಛಾಯಾಗ್ರಹಣ, ಗಿರಿ ಮಹೇಶ್ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ “ಬ್ರ್ಯಾಟ್” ಚಿತ್ರಕ್ಕಿದೆ.

Spread the love
Translate »
Right Ad