Sandalwood Leading OnlineMedia

ದೀಪಾವಳಿಗೆ ಬರಲಿದೆ ʻರಾವುತʼ ಸಿನಿಮಾದ ಬಹಮುಖ್ಯ ಸಾಂಗ್..! ‌

ಗಂಡುಗಲಿ ಕುಮಾರರಾಮ ಕಾಲಘಟ್ಟದ ಕಥೆಯನ್ನ ಒಳಗೊಂಡ ಚಿತ್ರ ಇನ್ನೇನು ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಈಗಾಗಲೇ ತಮ್ಮ ಪೋಸ್ಟರ್‌ ಹಾಗೂ ಹಾಡಿನಿಂದಾನೇ ಒಂದಷ್ಟು ಕುತೂಹಲ ಹುಟ್ಟು ಹಾಕಿರುವ ಸಿನಿಮಾ ರಾವುತ, ಮುಖ್ಯವಾದ ಹಾಡೊಂದನ್ನು ರಿಲೀಸ್‌ ಮಾಡಲು ಸಿದ್ಧತೆ ನಡೆಸಿದೆ. ದೀಪಾವಳಿ ಹಬ್ಬದಂದು ಹಾಡು ಬಿಡುಗಡೆ ಮಾಡಲಿದ್ದಾರೆ.

ಈ ಸಿನಿಮಾ ಉತ್ತರ ಕರ್ನಾಟಕದ ಭಾಷ ಶೈಲಿಯಲ್ಲಿರುವ ಚಿತ್ರ, ಗಂಡುಗಲಿ ಕುಮಾರರಾಮ ಕಾಲಘಟ್ಟದ ಕಥೆಯನ್ನ ಒಳಗೊಂಡ ಚಿತ್ರವಾಗಿದೆ.  ಇನ್ನೇನು ಚಿತ್ರದ ಪ್ರಮುಖ ವಿಡಿಯೋ ಸಾಂಗ್ ನ್ನು ದೀಪಾವಳಿ ದಿನವೇ ಬಿಡುಗಡೆ ಮಾಡುತ್ತಾರೆ. ಗುರು ಅಭಿನವ, ಶ್ರೀ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ಅವರ ಆರ್ಶಿವಾದದೊಂದಿಗೆ ಸಿನಿಮ ಬಿಡುಗಡೆ ಮಾಡುತ್ತೇವೆ ಎಂದು ನಿದೇಶಕರು ಹೇಳಿದ್ದಾರೆ. ಅಷ್ಟೇ ಅಲ್ಲ ಕೊಪ್ಪಳದಲ್ಲಿ ಪ್ರೀಮಿಯರ್ ಶೋ ಮಾಡುತ್ತೇವೆ ಎಂದೂ ನಿರ್ದೇಶಕ ಸಿದ್ದುವಜ್ರಪ್ಪ ತಿಳಿಸಿದ್ದಾರೆ.

ಈರಣ್ಣ ಸುಭಾಷ್ ಬಡಿಗೇರ್ ಅವರು ನಿರ್ಮಿಸಿರುವ ಈ  ಚಿತ್ರವು ಹಲವಾರು ತಂತ್ರಜ್ಞರಿಂದ, ಸಿನಿಮಾ ವಿತರಣೆಕಾರರಿಂದ ಉತ್ತಮ ಅಭಿಪ್ರಾಯ ಪಡೆದುಕೊಂಡಿದೆ, ಹಲವಾರು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ರಾವುತ, ಮುಂದೆ ರಾಜ್ಯ ಪ್ರಶಸ್ತಿ ಗೆ ಲಗ್ಗೆ ಇಡುವ ವಿಶ್ವಾಸವನ್ನು ನಿರ್ದೇಶಕ ಸಿದ್ದುವಜ್ರಪ್ಪ ವ್ಯಕ್ತಪಡಿಸಿದ್ದಾರೆ. ಆಗಾಗಿ ಚಿತ್ರದ ತಂಡ ಉತ್ತರ ಕರ್ನಾಟಕದ ಕಡೆ ಪಯಣ ಬೆಳಸಲು ಸಿದ್ಧವಾಗಿದೆ. ಚಿತ್ರದ ನಾಯಕ ನಟ ರಾಜ್ ಪ್ರವೀಣ್ ನಟಿಸಿದ್ದು ನಾಯಕಿಯಾಗಿ ಭವಾನಿ ಪುರೋಹಿತ್ ನಟಿಸಿದ್ದಾರೆ. ಸಹನಟರಾಗಿ ನರಸಿಂಹ ಮೂರ್ತಿ, ರಾಘವ್ ಗೌಡಪ್ಪ, ಮಾರೇಶ,ಹರ್ಷ, ಶ್ರೀಶೈಲ, ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತ ಸುಚಿನ್ ಶರ್ಮ ನೀಡಿದ್ದು, ಸಂಕಲನ ಅರವಿಂದ್ ರಾಜ್ ಮಾಡಿದ್ದಾರೆ, ಕಥನ ವಚನ ನಿರ್ದೇಶನ ಸಿದ್ದು ವಜ್ರಪ್ಪ ನಿಭಾಯಿಸಿದ್ದಾರೆ.

Share this post:

Related Posts

To Subscribe to our News Letter.

Translate »