ರವಿಕೆ ಅಂದರೆ ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸಬಲ್ಲ ಉಡುಪು ಮುಖ್ಯವಾದುದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಸೀರೆ- ರವಿಕೆ ಒಂದನ್ನು ಬಿಟ್ಟು ಒಂದು ಇಲ್ಲ. ಸೀರೆ ಎಷ್ಟೇ ಚೆನ್ನಾಗಿದ್ದರೂ ರವಿಕೆ ಚೆನ್ನಾಗಿಲ್ಲವೆಂದರೆ ಸೀರೆಯ ಅಂದ ಕೆಡುತ್ತದೆ. ಸೀರೆಯ ಮುಂದೆ ರವಿಕೆ ಒಂದು ಬಟ್ಟೆಯ ತುಣುಕೇ ಆದರೂ, ಅದರ ವೃತ್ತಾಂತ ಏಳು ಮೊಳ ಸೀರೆಯಷ್ಟೇ ದೊಡ್ಡದು. ಹೌದು. ಸೀರೆ, ರವಿಕೆ ಹಳೇ ಕಾಲದ ಉಡುಪು. ಪುರಾಣಕಾಲದಲ್ಲೂ ಇತ್ತು ಎಂಬುದಕ್ಕೆ ಸಾಕ್ಷಿ, ಕೃಷ್ಣನೂ ಗೋಪಿಕೆಯರ ಸೀರೆ, ರವಿಕೆ ಕದ್ದ ವಿಷಯ ಮಹಾಭಾರತದಲ್ಲಿ ಬರುತ್ತದೆ. ದೇವಿ, ದೇವತೆ, ಗಂಧರ್ವ ಕನ್ನಿಕೆಯರೆಲ್ಲ ಸೀರೆ, ರವಿಕೆಯಲ್ಲೇ ಇರುವ ಚಿತ್ರಗಳು ನಮಗೆ ನೋಡಲು ಸಿಗುವುದು. ಸೀರೆ ಉಡಬೇಕಾದರೆ ರವಿಕೆ ಬೇಕೇ ಬೇಕು. ಸೀರೆ- ರವಿಕೆ ಒಂದನ್ನು ಬಿಟ್ಟು ಒಂದು ಇಲ್ಲ. ಸೀರೆ ಎಷ್ಟೇ ಚೆನ್ನಾಗಿದ್ದರೂ, ರವಿಕೆ ಚೆನ್ನಾಗಿಲ್ಲವೆಂದರೆ ಸೀರೆಯ ಅಂದ ಕೆಡುತ್ತದೆ. ಇದರಿಂದ ರವಿಕೆಯ ಮಹತ್ವ ಎಷ್ಟೆಂಬುದು ಅರಿವಾಗುತ್ತದೆ. ಒಟ್ಟಿನಲ್ಲಿ, ರವಿಕೆ ಸೀರೆಯ ಅಂದವನ್ನು ಹೆಚ್ಚಿಸುತ್ತದೆ. ಯಾವ ಸೀರೆಗೆ ಯಾವ ತರಹದ ರವಿಕೆ ಹಾಕಬೇಕು ಎಂದು ತಿಳಿದಿರುವುದೂ ಅತೀ ಮುಖ್ಯ. ಸೀರೆ, ರವಿಕೆ ಪುರಾತನ ಕಾಲದ ಉಡುಪಾದರೂ ಇಂದಿಗೂ ತನ್ನ ತಾಜಾತನ ಕಳೆದುಕೊಂಡಿಲ್ಲ. ಕಾಲಕ್ಕೆ ತಕ್ಕಂತೆ ಹೊಸ ಸ್ಪರ್ಶ ಪಡೆಯುತ್ತ ಹೆಂಗಳೆಯರ ಮೈಯನ್ನು ಹಿಡಿದಿಟ್ಟಿದೆ ಎಂಬುದರಲ್ಲಿ ಸಂಶಯವಿಲ್ಲ. ಹೌದು, ಈ `ರವಿಕೆ ಪುರಾಣ’ ಯಾಕೆ? ಎಂದು ನಿಮ್ಮಲ್ಲೊಂದು ಪ್ರಶ್ನೆ ಮೂಡಬಹುದು. ಅದಕ್ಕೆ ಕಾರಣ ಇತ್ತೀಚಿಗೆ `ರವಿಕೆ ಪ್ರಸಂಗ’ ಸಿನಿಮಾದ ಟೈಟಲ್ ಟ್ರಾಕ್ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ.
ಇದನ್ನೂ ಓದಿ: *ಹೊಸಬರ ’ಲವ್’ ಸಿನಿಮಾದ ಟ್ರೇಲರ್ ರಿಲೀಸ್..ಸಖತ್ ಪ್ರಾಮಿಸಿಂಗ್ ಆಗಿ ಟ್ರೇಲರ್…ಅಕ್ಟೋಬರ್ 6ಕ್ಕೆ ತೆರೆಯಲ್ಲಿ ಲವ್ ಮ್ಯಾಜಿಕ್
ಹೆಣ್ಣುಮಕ್ಕಳು ನಿತ್ಯ ಧರಿಸುವ ಸೀರೆ, ಓಲೆ, ಬಳೆ, ಗೆಜ್ಜೆ ಮುಂತಾದವುಗಳ ಬಗ್ಗೆ ಹಾಡು ಬಂದಿದೆ. ಆದರೆ ರವಿಕೆ ಬಗ್ಗೆ ಈವರೆಗೂ ಯಾವುದೇ ಹಾಡು ಬಂದಿಲ್ಲ. ರವಿಕೆಯ ಬಗೆಗಿನ ಹಾಡು ರವಿಕೆ ಕುರಿತಾಗಿಯೇ ನಿರ್ಮಾಣವಾಗಿರುವ “ರವಿಕೆ ಪ್ರಸಂಗ” ಚಿತ್ರದಲ್ಲಿದೆ. ಈ ಚಿತ್ರಕ್ಕಾಗಿ ಕಿರಣ್ ಕಾವೇರಪ್ಪ ಅವರು ಬರೆದಿರುವ “ರವಿ, ರವಿ, ರವಿಕೆ ಪ್ರಸಂಗ” ಎಂಬ ಟೈಟಲ್ ಸಾಂಗ್ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಈ ಹಾಡಿಗೆ ವಿನಯ್ ಶರ್ಮ ಸಂಗೀತ ನೀಡಿದ್ದು, ಚೈತ್ರ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಅವರು ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಹಾಡಿನ ಕುರಿತು ಹೆಚ್ಚಿನ ಮಾಹಿತಿ ನೀಡಿದರು.
ಇದನ್ನೂ ಓದಿ: ಟಗರು ಪಲ್ಯ ಸಿನಿಮಾದ ಎರಡನೇ ಹಾಡು ರಿಲೀಸ್…ಸೂರ್ಯಕಾಂತಿ ನಾನು ಎಂದು ಕುಣಿದ ಲವ್ಲಿಸ್ಟಾರ್ ಪುತ್ರಿ
ದೃಷ್ಟಿ ಮೀಡಿಯಾ & ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಈ ಚಿತ್ರದ ಟೈಟಲ್ ಸಾಂಗ್ ಇಂದು ಬಿಡುಗಡೆಯಾಗಿದೆ. ಕಿರಣ್ ಕಾವೇರಪ್ಪ ರವಿಕೆ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಚೈತ್ರ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ವಿನಯ್ ಶರ್ಮ ಸಂಗೀತದಲ್ಲಿ ಎಲ್ಲಾ ಹಾಡುಗಳು ಚೆನ್ನಾಗಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್ ಕೊಡೆಂಕೆರಿ ತಿಳಿಸಿದರು.ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದಿರುವ ಪಾವನ ಸಂತೋಷ್ ಮಾತನಾಡುತ್ತಾ, ಹೆಣ್ಣುಮಕ್ಕಳಿಗೆ ಸೀರೆಗಿಂತ ಹೆಚ್ಚಿನ ಪ್ರೀತಿ ರವಿಕೆ ಮೇಲಿರುತ್ತದೆ. ಆ ರವಿಕೆ ಕುರಿತು ಕಥೆ ಬರೆದಿದ್ದೇನೆ. ಸಹಕಾರ ನೀಡಿದ ನನ್ನ ಪತಿ ಸಂತೋಷ್ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನಾನು ಆಭಾರಿ ಎಂದರು.
ಇದನ್ನೂ ಓದಿ: ಸಿನಿಮಾ ಜಾತ್ರೆ ಶುರು, ಗೆಲ್ಲೋ ಸೂಚನೆ ಕೊಡ್ತಾ `ಸಪ್ತ ಸಾಗರಾಚೆ ಎಲ್ಲೋ – ಸೈಡ್ `ಬಿ’!?
ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಇಂದು ಬಿಡುಗಡೆಯಾಗಿರುವ “ರವಿಕೆ” ಹಾಡು ಹಾಗೂ ಚಿತ್ರ ಎಲ್ಲರ ಮನ ಗೆಲ್ಲಲಿದೆ ಎಂದರು ನಾಯಕಿ ಗೀತಾ ಭಾರತಿ ಭಟ್.ಈ ತಂಡದೊಂದಿಗೆ ಕೆಲಸ ಮಾಡಿದ್ದು ಸಂತೋಷವಾಗಿದೆ. ರವಿಕೆ ಕುರಿತಾಗಿ ಬರುತ್ತಿರುವ ಈ ಚಿತ್ರ ಎಲ್ಲಾ ಹೆಣ್ಣುಮಕ್ಕಳ ಮನಸ್ಸಿಗೆ ಹತ್ತಿರವಾಗಲಿದೆ ಎಂದು ನಟಿ ಪದ್ಮಜಾರಾವ್ ತಿಳಿಸಿದರು. ನಿರ್ಮಾಣಕ್ಕೆ ಸಾಥ್ ನೀಡಿರುವ ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ ಶಿವರುದ್ರಯ್ಯ, ಗಾಯಕಿ ಚೈತ್ರ ಸೇರಿದಂತೆ ಅನೇಕರು ಹಾಡಿನ ಬಗ್ಗೆ ಮಾತನಾಡಿದರು. ಕನ್ನಡ ಚಿತ್ರರಂಗದ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು “ರವಿಕೆ” ಹಾಡಿಗೆ ವಿಡಿಯೋ ಮೂಲಕ ಶುಭ ಕೋರಿದರು. “ಬ್ರಹ್ಮ ಗಂಟು” ಧಾರಾವಾಹಿ ಖ್ಯಾತಿಯ ಗೀತಾಭಾರತಿ ಭಟ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್, ಪದ್ಮಜಾರಾವ್, ರಘು ಪಾಂಡೇಶ್ವರ್ , ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ಮೀನಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿಧರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಅವರ ಸಂಕಲನ “ರವಿಕೆ ಪ್ರಸಂಗ” ಚಿತ್ರಕ್ಕಿದೆ.