ಹೌದು ಶ್ರಾವಣದ ಮೊದಲ ವಾರದಲ್ಲಿ ಬಿಡುಗಡೆಯಾದ ಕೆಕ್ಕರಿಸಿ ಏಕಾಂಗಿಯಾಗಿ ಕುಳಿತಿರುವ ಕಾಗೆಯ ಚಿತ್ರಣವಿರುವ ವಿಶೇಷ ರಾವೆನ್ ಎನ್ನುವ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ . ಈ ಚಿತ್ರದಲ್ಲಿ ಕಾಗೆಯ ನಾಯಕ ನಟ …ಇತ್ತೀಚಿನ ದಿನಗಳಲ್ಲಿ ಕಥಾವಸ್ತು ಪ್ರಧಾನವಾಗಿರುವ ಸಾಕಷ್ಟು ಚಿತ್ರಗಳು ನಮ್ಮಚಿತ್ರರಂಗದಲ್ಲಿ ಸದ್ದು ಮಾಡುತ್ತಿವೆ … ಇತ್ತಿಚೀನ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಯಲ್ಲಿ ನಾಯಿಯೇ ಪ್ರಮುಖ ಪಾತ್ರದಾರಿ ಹಾಗೆ ಬಿಡುಗಡೆಗೆ ತಯಾರಾಗಿರುವ ರಾಜ್ ಶೆಟ್ಟಿ ಅವರ ಟೋಬಿ ಯಲ್ಲಿ ಮೂಗುತಿ ಹಾಕಿರುವ ಟಗರಿನ ಪೋಸ್ಟ್ ರ್ ತುಂಬಾ ವೈರಲ್ ಆಗಿದೆ ಈಗ ಈ ಸಾಲಿಗೆ ರಾವೆನ್ ಸೆರ್ಪಡೆಯಾಗಿದೆ .
ಇದನ್ನೂ ಓದಿ: ‘Kousalya Supraja Rama’ movie review: ಕಲಿಯುಗ ರಾಮನ ಮಾಡರ್ನ್ ವನವಾಸ!
ಪೋಸ್ಟ್ ರ್ ನಿಂದಲೆ ಗಮನ ಸೆಳೆದ ಈ ಚಿತ್ರದ ಪ್ರಮುಖ ಪಾತ್ರದಾರಿ ರಾವೆನ್ ಎನ್ನುವ ಕಾಗೆ , ಪೂರ್ಣ ಕಥೆ ಕಾಗೆಯ ಮೇಲೆ ಹೆಣೆಯಲಾಗಿದೆ ಎನ್ನುವುದು ಚಿತ್ರತಂಡದ ಮಾಹಿತಿ …ಕನ್ನಡ ಚಿತ್ರರಂಗದಲ್ಲಿ ಸಧಾಭಿರುಚಿಯ ಚಿತ್ರಗಳನ್ನು ತಯಾರು ಮಾಡಿರುವ ಪ್ರಬಿಕ್ ಮೊಗವೀರ್ ಈ ಚಿತ್ರದ ನಿರ್ಮಾಪಕ ಹಾಗೂ ಈ ಹಿಂದೆ ಸಂಕಲನಕಾರರಾಗಿ ಹಾಗೂ ಖ್ಯಾತ ನಿರ್ದೇಶಕರುಗಳಾದ ಎ ಪಿ ಅರ್ಜುನ್ ಮತ್ತು ಪಿ ಎನ್ ಸತ್ಯರವರ ಜೊತೆಗೆ ಕೆಲಸ ಮಾಡಿರುವ ಅನುಭವವಿರುವ ವೇದ್ ಈ ಚಿತ್ರದ ನಿರ್ದೇಶಕ , ವೇದ್ ಅವರ ಸ್ಕೂಲ್ ರಾಮಾಯಣ ಎನ್ನುವ ಚಿತ್ರ ಕೂಡ ಇನ್ನೇನು ಬಿಡುಗಡೆಯಾಗಬೇಕಿದೆ ..
ಇದನ್ನೂ ಓದಿ: ಮೋಹಕ ತಾರೆ ರಮ್ಯಾ ಅಭಿನಯದ ಚಿತ್ರದಲ್ಲಿ ದಿಗಂತ್!?