Sandalwood Leading OnlineMedia

ರತನ್ ಟಾಟಾ ಮನಸ್ಸು ಕದ್ದಿದ್ದ ಆ ಬಾಲಿವುಡ್ ನಟಿ ಯಾರು ಗೊತ್ತಾ..?

ರತನ್ ಟಾಟಾ ದೇಶ ಕಂಡ ಯಶಸ್ವಿ ಉದ್ಯಮಿ. ಇವರು ಉದ್ಯಮದಲ್ಲಿ ಯಶಸ್ಸು ಕಂಡಷ್ಟೇ ಜನರ ಮನಸ್ಸನ್ನು ಗೆಲ್ಲುವಲ್ಲಿಯೂ ಯಶಸ್ಸು ಕಂಡಿದ್ದಾರೆ. 86 ವರ್ಷಗಳ ಕಾಲ ಸಾರ್ಥಕ ಬದುಕನ್ನು ಕಂಡಿದ್ದವರು. ವಯೋಸಹಜ ಕಾಯಿಲೆಯಿಂದ ಜಗತ್ತನ್ನೇ ತೊರೆದಿದ್ದಾರೆ. ಆದರೆ ಇವರ ಯೌವ್ವನದ ಜಗತ್ತಿನಲ್ಲಿ ಪ್ರೀತಿ-ಪ್ರೇಮದ ಕುರುಹು ಇತ್ತು. ಬಾಲಿವುಡ್ ಆ ನಟಿ ಇವರ ಮನಸ್ಸನ್ನು ಕದ್ದಿದ್ದರು. ಇಂದು ಅವರ ನಿಧನಕ್ಕೆ ಮಾಜಿ ಪ್ರೇಯಸಿಯೂ ಕಂಬನಿ ಮಿಡಿದಿದ್ದಾರೆ. ಅಷ್ಟಕ್ಕೂ ಆ ಮಾಜಿ ಪ್ರೇಯಸಿ ಯಾರು ಗೊತ್ತಾ..?


ರತನ್ ಟಾಟಾ ಅವರು ಉದ್ಯಮದಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ, ಯಶಸ್ಸು ಪಡೆದವರು. ಆದರೆ ಪ್ರೀತಿಯಲ್ಲಿ ಅದೇಕೋ ಅವರು ಯಶಸ್ಸು ಕಾಣಲೇ ಇಲ್ಲ. ಎರಡೆರಡು ಬಾರಿ ಪ್ರೀತಿಯಲ್ಲಿ ಬಿದ್ದಿದ್ದರು. ಆದರೂ ಒಮ್ಮೆಯೂ ಸಕ್ಸಸ್ ಆಗಲಿಲ್ಲ. ಲಾಸ್ ಏಂಜಲೀಸ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಗಲೇ ರತನ್ ಟಾಟಾಗೆ ಲವ್ ಆಗಿತ್ತು. ಆಕೆಯನ್ನು ಮದುವೆಯಾಗಬೇಕೆಂದು ನಿರ್ಧರಿಸಿದ್ದರು. ಆದರೆ ಅಮೆರಿಕಾದ ಹುಡುಗಿಯಾಗಿದ್ದ ಕಾರಣ, ಭಾರತದಲ್ಲಿ ನೆಲೆಸಲು ಒಪ್ಪಿರಲಿಲ್ಲ. ಅಂದು ಆ ಪ್ರೀತಿ ಮುರಿದು ಬಿತ್ತು. ನಂತರ ರತನ್ ಟಾಟಾ ಅವರ ಮನಸ್ಸು ಕದ್ದಿದ್ದೇ ಬಾಲಿವುಡ್ ನ ಬೆಡಗಿ.


70-80 ದಶಕದಲ್ಲಿ ಬಾಲಿವುಡ್ ನಲ್ಲಿ ಸಿಮಿ ಗರೆವಾಲ್ ಫೇಮಸ್ ಆಗಿದ್ದರು. ಇವರ ಮೇಲೆ ರತನ್ ಟಾಟಾಗೆ ಲವ್ ಆಗಿತ್ತಂತೆ. ಒಂದಷ್ಟು ವರ್ಷಗಳ ಕಾಲ ಇಬ್ಬರು ಒಟ್ಟೊಟ್ಟಿಗೆ ಓಡಾಡಿಕೊಂಡು ಇದ್ದರು ಎಂಬ ಮಾತಿದೆ. ಇನ್ನೇನು ಮದುವೆಯಾಗಬೇಕು ಎನ್ನುವಾಗಲೇ ಇಬ್ಬರ ಮದುವೆ ಮುರಿದು ಬಿದ್ದಿತ್ತಂತೆ. ಗೆಳೆಯನ ಅಗಲಿಕೆಯ ದುಃಖ ಸಿಮಿ ಅವರಿಗೆ ಕಾಡುತ್ತಿದೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ವಿದಾಯ ತಿಳಿಸಿದ್ದಾರೆ.

Share this post:

Related Posts

To Subscribe to our News Letter.

Translate »