Sandalwood Leading OnlineMedia

*ನ್ಯಾಷನಲ್ ಕ್ರಶ್ ರಶ್ಮಿಕಾ ಹುಟ್ಟುಹಬ್ಬಕ್ಕೆ #VNRTrio ಸಿನಿಮಾದ ಹೊಸ ಪೋಸ್ಟರ್ ರಿಲೀಸ್..ಸ್ಟೈಲೀಶ್ ಲುಕ್ ನಲ್ಲಿ ಮಿಂಚಿದ ಭೀಷ್ಮ ಬ್ಯೂಟಿ*

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅಡಿ ಇಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆಗಿ ಬೆಳೆದಿದ್ದಾರೆ. ಸ್ಯಾಂಡಲ್ ವುಡ್ ನಿಂದ ಸಿನಿ ಬದುಕು ಶುರು ಮಾಡಿ ಟಾಲಿವುಡ್, ಕಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಭೀಷ್ಮ ಬ್ಯೂಟಿಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ.. ರಶ್ಮಿಕಾ ಬರ್ತ್ ಡೇ ಪ್ರಯುಕ್ತ ಅಭಿಮಾನಿಗಳು ಸ್ಪೆಷಲ್ ಸಿಡಿಪಿ ರಿಲೀಸ್ ಮಾಡಿ ಪ್ರೀತಿಯಿಂದ ಶುಭಾಷಯ ಕೋರಿದ್ದಾರೆ. ಸೆಲೆಬ್ರಿಟಿಗಳು ಸಾನ್ವಿಗೆ ಬರ್ತ್ ಡೇ ವಿಷ್ ಮಾಡಿದ್ದಾರೆ. ರಶ್ಮಿಕಾ ಜನುಮದಿನದ ಸ್ಪೆಷಲ್ ಆಗಿ #VNRTrio ಸಿನಿಮಾ ತಂಡ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದೆ.
ಭೀಷ್ಮ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಯಂಗ್ ಟಾಲಿವುಡ್ ಹೀರೋ ನಿತಿನ್ ಹಾಗೂ ರಶ್ಮಿಕಾ ಮಂದಣ್ಣ #VNRTrio ಸಿನಿಮಾ ಮೂಲಕ ಮತ್ತೆ ಒಂದಾಗ್ತಿದೆ.

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಪುಷ್ಪ-2 ಟೀಸರ್ ರಿಲೀಸ್… ಹೇಗಿದೆ ಪುಷ್ಪ-2 ಗ್ಲಿಂಪ್ಸ್.?

ಭೀಷ್ಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ವೆಂಕಿ ಕುದುಮುಲ ಮತ್ತೊಮ್ಮೆ ಈ ಜೋಡಿಗೆ ಮಗದೊಮ್ಮೆ ನಿರ್ದೇಶನ ಮಾಡ್ತಿದ್ದು, ಸೌತ್ ಇಂಡಸ್ಟ್ರೀತ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ #VNRTrioಗೆ ಬಂಡವಾಳ ಹೂಡಿದೆ. ಈ ಚಿತ್ರತಂಡ ರಶ್ಮಿಕಾ ಹುಟ್ಟಹಬ್ಬಕ್ಕೆ ಸ್ಪೆಷಲ್ ಉಡುಗೊರೆ ನೀಡಿದೆ. ಈ ಹಿಂದಿ ನಿತಿನ್ ಬರ್ತ್ ಡೇ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿದ್ದ #VNRTrio ಟೀಂ ಈಗ ರಶ್ಮಿಕಾ ಜನ್ಮದಿನಕ್ಕೆ ಪೋಸ್ಟರ್ ಅನಾವರಣ ಮಾಡಿದೆ. ಸ್ಟೈಲೀಶ್ ಔಟ್ ಫಿಟ್ ನಲ್ಲಿ ರಶ್ಮಿಕಾ ಗ್ಲಾಮರ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ.

ಸರ್ಕಾರಿ ಶಾಲೆಗಳನ್ನು ಉಳಿಸುವ ಯತ್ನದಲ್ಲಿ ಪ್ರವೀಣಾ
ಮೈತ್ರಿ ಮೂವೀ ಮೇಕರ್ಸ್ ಸಾರಥಿಗಳಾದ ನವೀನ್ ಯೆರ್ನೇನಿ ಹಾಗೂ ವೈ ರವಿ ಶಂಕರ್ ದೊಡ್ಡ ಕ್ಯಾನ್ವನ್ ನಲ್ಲಿ ಚಿತ್ರ ನಿರ್ಮಾಣ ಮಾಡ್ತಿದ್ದು, ನಟ ಕಿರೀಟಿ ರಾಜೇಂದ್ರ ಪ್ರಸಾದ್ ಹಾಗೂ ವಿನ್ನೆಲ ಕಿಶೋರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ. ಸಾಯಿ ಶ್ರೀರಾಮ್ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ, ರಾಮ್ ಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ. #VNRTrio ಸಿನಿಮಾದ ಮತ್ತಷ್ಟು ಶೀಘ್ರದಲ್ಲಿ ರಿವೀಲ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಹೈದ್ರಾಬಾದ್ ನಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದ್ದು, ಮೆಗಾಸ್ಟಾರ್ ಚಿರಂಜೀವಿ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು.

Share this post:

Related Posts

To Subscribe to our News Letter.

Translate »