ರಶ್ಮಿಕಾ ಮಂದಣ್ಣ ಅವರ ಹೊಸ ಸಿನಿಮಾ ‘ದಿ ಗರ್ಲ್ ಫ್ರೆಂಡ್’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆ ಹುಸಿ ಮಾಡಿದೆ. ಭಾರೀ ಹೂಡಿಕೆ ಮಾಡಿದ್ದ ನಿರ್ಮಾಪಕರಿಗೆ ಈ ಸಿನಿಮಾ ಈಗ ತಲೆನೋವಾಗಿ ಪರಿಣಮಿಸಿದೆ.

ಸುಮಾರು ₹40 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಕೇವಲ ₹7 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಗಳು ಹೇಳುತ್ತಿವೆ. ಮೊದಲ ಬಾರಿಗೆ ದೊಡ್ಡ ಹೀರೋ ಇಲ್ಲದೇ ಮುಖ್ಯ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರಿಗೆ ಇದು ದೊಡ್ಡ ಸವಾಲಾಗಿತ್ತು. ಆದರೆ ಪ್ರೇಕ್ಷಕರಿಂದ ಬಂದ ಪ್ರತಿಕ್ರಿಯೆ ಮಿಶ್ರವಾಗಿದೆ.
ದೀಕ್ಷಿತ್ ಶೆಟ್ಟಿ ಅವರೊಂದಿಗೆ ರಶ್ಮಿಕಾ ಅಭಿನಯಿಸಿದ ‘ದಿ ಗರ್ಲ್ ಫ್ರೆಂಡ್’ ನವೆಂಬರ್ 7ರಂದು ತೆರೆಗೆ ಬಂತು. ಮೊದಲ ದಿನ ₹1.30 ಕೋಟಿ, ಎರಡನೇ ದಿನ ₹2.5 ಕೋಟಿ ಮತ್ತು ಮೂರನೇ ದಿನ ₹3.1 ಕೋಟಿ ಗಳಿಸಿದೆ. ಈ ಮೂಲಕ ಒಟ್ಟು ಕಲೆಕ್ಷನ್ ₹7 ಕೋಟಿ ಸಮೀಪಿಸಿದೆ.
ಈ ಚಿತ್ರದಿಂದ ನಿರ್ಮಾಪಕರು ಲಾಭ ಕಾಣಬೇಕೆಂದರೆ ಕನಿಷ್ಠ ₹80 ಕೋಟಿ ರೂ. ಕಲೆಕ್ಷನ್ ಅಗತ್ಯವಿತ್ತು — ತೆರಿಗೆ ಮತ್ತು ಚಿತ್ರಮಂದಿರದ ಷೇರುಗಳ ನಂತರ ಬಂಡವಾಳ ಹಿಂದಿರುಗಿಸಲು ಅಷ್ಟೇ ಬೇಕಾಗಿತ್ತು. ಆದರೆ ಪ್ರಸ್ತುತ ಚಿತ್ರವು ಆ ಮಟ್ಟ ತಲುಪುವ ಸಾಧ್ಯತೆ ಅತಿ ಕಡಿಮೆ ಎಂದು ಟ್ರೇಡ್ ವಿಶ್ಲೇಷಕರು ಹೇಳುತ್ತಿದ್ದಾರೆ.
ಫ್ಯಾನ್ಸ್‌ಗಳು ಭಾರಿ ನಿರೀಕ್ಷೆ ಇಟ್ಟಿದ್ದರೂ, ಚಿತ್ರವು ರಶ್ಮಿಕಾ ಅವರ ಹಿಂದಿನ ಹಿಟ್ ಚಿತ್ರಗಳ ಮಟ್ಟಕ್ಕೆ ತಲುಪಿಲ್ಲ. ವಾರದ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ಕುಸಿಯುವ ಭೀತಿ ಇದೆ. ಹೀಗಾಗಿ ಈ ಬಾರಿ ರಶ್ಮಿಕಾ ಅವರ ಸ್ಟಾರ್ ಇಮೇಜ್ ನಿರ್ಮಾಪಕರಿಗೆ ಲಾಭ ತಂದುಕೊಡದೆ, ಕೋಟಿ ಕೋಟಿ ರೂಪಾಯಿಗಳ ನಷ್ಟಕ್ಕೆ ಕಾರಣವಾದಂತಾಗಿದೆ.
