ನಿನ್ನೆಯಷ್ಟೇ ಬಾಲಿವುಡ್‌ನಲ್ಲಿ ಬಹುದೊಡ್ಡ ಬರ್ತ್‌ಡೇ ಪಾರ್ಟಿ ನಡೆದಿದೆ. ನಿರ್ದೇಶಕ, ನಟ, ನಿರ್ಮಾಪಕ ಕರಣ್ ಜೋಹಾರ್ ಅವರಿಗೆ 50 ತುಂಬಿದ ಸಂದರ್ಭದಲ್ಲಿ ಇಡೀ ಭಾರತೀಯ ಸಿನಿಮಾ ರಂಗವನ್ನೇ ಪಾರ್ಟಿಯ ನೆಪದಲ್ಲಿ ಒಂದಾಗಿಸಿದ್ದರು ಕರಣ್.
ಈ ಬಾರಿ ಬಾಲಿವುಡ್ ನಟ ನಟಿಯರಿಗೆ ಮಾತ್ರವಲ್ಲ, ದಕ್ಷಿಣದ ಅನೇಕ ತಾರೆಯರಿಗೆ ಕರಣ್ ಆಹ್ವಾನ ನೀಡಿದ್ದರು. ಹಾಗಾಗಿ ಸಮಂತಾ, ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ದಕ್ಷಿಣದ ಕಲಾವಿದರು ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ತಡರಾತ್ರಿವರೆಗೂ ನಡೆದ ಪಾರ್ಟಿಯಲ್ಲಿ ಸಖತ್ ಮಿಂಚಿದ್ದು ಅಂದರೆ, ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ. ಕರಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ರಶ್ಮಿಕಾ ಮಂದಣ್ಣ ಆಧುನಿಕ ದೇವತೆಯಂತೆ ಮಿಂಚಿದ್ದಾರೆ ಎಂದು ಬಾಲಿವುಡ್ ಸಿನಿ ಮಾಧ್ಯಮಗಳು ವರದಿ ಮಾಡಿವೆ.
ಆ ಪಾರ್ಟಿಯಲ್ಲಿ ದಕ್ಷಿಣ ಭಾರತದಿಂದ ಪುರಿ ಜಗನ್ನಾಥ್, ವಿಜಯ್ ದೇವರಕೊಂಡ, ಚಾರ್ಮಿ, ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ, ರಕುಲ್ ಪ್ರೀತ್‌ಸಿಂಗ್, ಪೂಜಾ ಹೆಗ್ಡೆ ಭಾವಹಿಸಿದ್ದು ವಿಶೇಷವಾಗಿತ್ತು. ಸೈಫ್ ಅಲಿ ಖಾನ್, ಕರೀನಾ ಕಪೂರ್, ನಟ ಸಲ್ಮಾನ್ ಖಾನ್, ಏಕ್ತಾ ಕಪೂರ್, ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಆಮಿರ್ ಖಾನ್, ಕಿರಣ್ ರಾವ್, ಜೆನಿಲಿಯಾ ಡಿಸೋಜ, ರಿತೇಶ್ ದೇಶಮುಖ್, ಹೃತಿಕ್ ರೋಶನ್ – ಸಬಾ ಆಜಾದ್, ಕಾಜಲ್, ರಾಣಿ ಮುಖರ್ಜಿ, ಮಲೈಕಾ ಅರೋರ, ಗೌರಿ ಖಾನ್, ಆರ್ಯನ್ ಖಾನ್, ರಣಬೀರ್ ಕಪೂರ್, ಭಾಗವಹಿಸಿದ್ದರು.