ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ಎತ್ತರಕ್ಕೆ ಬೆಳೆಯುತ್ತಲೇ ಇದ್ದಾರೆ. ಅದರಲ್ಲೂ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ರಶ್ಮಿಕಾ ಅದೆಷ್ಟೇ ಎತ್ತರಕ್ಕೆ ಬೆಳೆದರೂ, ಅವರ ಸಿನಿಮಾದ ಜೊತೆ ಜೊತೆಗೆ ಅವರ ಲವ್ ಸ್ಟೋರಿ ಬಗ್ಗೆ ಸುದ್ದಿಗಳು ಬರೋದು ಮಾತ್ರ ನಿಂತಿಲ್ಲ. ಅದರಲ್ಲೂ ರೌಡಿ ವಿಜಯ್ ದೇವರಕೊಂಡ ಜೊತೆ ಸಂಥಿಂಗ್ ಸಂಥಿಂಗ್ ಅಂತ ಅದೆಷ್ಟು ವರದಿಗಳು ಬಂದು ಹೋಗಿದ್ದಾವೋ ಗೊತ್ತಿಲ್ಲ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಗೀತ ಗೋವಿಂದಂ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಇಬ್ಬರ ಕೆಮಿಸ್ಟ್ರಿ ಸಖತ್ ಕೆಲಸ ಮಾಡಿತ್ತು. ಆ ಸಂದರ್ಭದಲ್ಲಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಯಾರೊಬ್ಬರೂ ಈ ವಿಚಾರವನ್ನು ಒಪ್ಪಿಕೊಂಡಿಲ್ಲ. ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡರು.
ಈಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ರಿಲೇಶನ್ಶಿಪ್ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಇಬ್ಬರೂ ಬೇರೆ ಆಗಿ ಎರಡು ವರ್ಷಗಳೇ ಕಳೆದಿವೆ ಎಂದು ಇಟೈಮ್ಸ್ ವರದಿ ಮಾಡಿದೆ. ಇವರ ಸಂಬಂಧ ಮುರಿದು ಬಿದ್ದರೂ ಇಬ್ಬರೂ ಫ್ರೆಂಡ್ಸ್ ಆಗಿ ಮುಂದುವರಿದಿದ್ದಾರೆ. ಒಬ್ಬರ ವೃತ್ತಿಜೀವನಕ್ಕೆ ಮತ್ತೊಬ್ಬರು ಬೆಂಬಲ ನೀಡುತ್ತಾ ಸಾಗುತ್ತಿದ್ದಾರೆ.