Sandalwood Leading OnlineMedia

ಫೆಬ್ರವರಿಯಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್

ಹೈದರಾಬಾದ್: ಬಹಳ ಸಮಯದಿಂದ ಡೇಟಿಂಗ್ ನಲ್ಲಿರುವ ಟಾಲಿವುಡ್ ಜೋಡಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಸದ್ಯದಲ್ಲೇ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಫೆಬ್ರವರಿಯಲ್ಲಿ ಈ ಜೋಡಿ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದೆ ಎಂಬ ಈಗ ಜೋರಾಗಿ ಹರಿದಾಡುತ್ತಿದೆ. ಈ ಬಗ್ಗೆ ಇಬ್ಬರೂ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ.ಆದರೆ ಕಳೆದ ಹಲವು ಸಮಯದಿಂದ ರಶ್ಮಿಕಾ-ವಿಜಯ್ ಜೊತೆಯಲ್ಲೇ ಓಡಾಡುತ್ತಿದ್ದಾರೆ. ವಿಜಯ್ ಮನೆಯಲ್ಲಿಯೇ ರಶ್ಮಿಕಾ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ ಎನ್ನುವುದಕ್ಕೆ ಹಲವು ಪುರಾವೆಗಳು ಸಿಕ್ಕಿದ್ದವು. ಮೊನ್ನೆಯಷ್ಟೇ ಹೊಸ ವರ್ಷದ ಸಂದರ್ಭದಲ್ಲಿ ರಶ್ಮಿಕಾ ಟೂರ್ ಹೋಗಿದ್ದರು. ಈ ವೇಳೆ ಅವರ ಜೊತೆ ವಿಜಯ್ ಕೂಡಾ ಇದ್ದರು ಎಂಬ ಮಾತುಗಳಿವೆ.
ಇದೀಗ ಕೊನೆಗೂ ಈ ಜೋಡಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲಿದ್ದು, ಇದೇ ಫೆಬ್ರವರಿಯಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಆದರೆ ಇದು ಎಷ್ಟು ನಿಜ, ಎಷ್ಟು ಸುಳ್ಳು ಗೊತ್ತಿಲ್ಲ.

Share this post:

Related Posts

To Subscribe to our News Letter.

Translate »