ರಶ್ಮಿಕಾ ಮಂದಣ್ಣಗೆ ಈಗ ಚಿನ್ನದಂತಹ ಬೇಡಿಕೆ ಇದೆ. ಆದರೆ, ಈ ಸಮಯದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಕಾಲು ಮುರಿದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಕಷ್ಟವನ್ನು ಅರ್ಥ ಮಾಡಿಕೊಂಡು ಸಾಕ್ಷಾತ್ ಸಲ್ಮಾನ್ ಖಾನ್ ಅವರೇ ತಮ್ಮ ಸಿಖಂದರ್ ಚಿತ್ರದ ಚಿತ್ರೀಕರಣ ರದ್ದುಗೊಳಿಸಿದ್ದಾರೆ. ಆದರೆ ಸಿನಿಮಾ ಮೇಲೆ ಬದ್ಧತೆ ಇಟ್ಟುಕೊಂಡಿರುವ ರಶ್ಮಿಕಾ, ಕಾಲು ಗಾದೆ ಇದ್ದರು, ಪ್ರಚಾರ ಕಾರ್ಯಕ್ಕೆ ಬಂದಿದ್ದಾರೆ.
ಅಸಲಿಗೆ ಹಾಡಲು, ಕುಣಿಯಲು ರಶ್ಮಿಕಾ ಅವರಿಗೆ ಈಗ ಸಾಧ್ಯ ಇಲ್ಲ. ಹಾಗಂಥ ಮನೆಯಲ್ಲಿ ಸುಮ್ಮನೆ ಕೂರಲು ಆಗುವುದಿಲ್ಲ. ಯಾಕೆಂದರೆ, ರಶ್ಮಿಕಾ ಮಂದಣ್ಣ ಅಭಿನಯದ ಛಾವ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮೊದಲ ಬಾರಿ ಐತಿಹಾಸಿಕ ಪಾತ್ರವನ್ನು ನಿರ್ವಹಿಸಿದ್ದಾರೆ. ಛತ್ರಪತಿ ಶಿವಾಜಿ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ರಶ್ಮಿಕಾ ವೀಲ್ ಚ್ಹೇರ್‌ನಲ್ಲಿಯೇ ಛಾವಾ ಚಿತ್ರದ ಪ್ರಚಾರ ಮಾಡಲು ಹೈದರಾಬಾದ್‌ದಿಂದ ಸೀದಾ ಮುಂಬೈ ವಿಮಾನವನ್ನೇರಿದ್ದಾರೆ. ಛಾವಾ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂದ್ಹಾಗೇ ರಶ್ಮಿಕಾ ಮಂದಣ್ಣ ಅವರಿಗೆ ಆದ ಈ ಗಾಯದಿಂದ ಕೇವಲ ಸಿಕಂದರ್ ಚಿತ್ರದ ಚಿತ್ರೀಕರಣ ಮಾತ್ರ ಮುಂದಕ್ಕೆ ಹೋಗಿಲ್ಲ. ಧನುಷ್ ಅಭಿನಯದ ಕುಬೇರ ಮತ್ತು ಆಯುಶ್ಮಾನ್ ಕುರಾನ ಅಭಿನಯದ ಥಾಮಾ ಚಿತ್ರದ ಚಿತ್ರೀಕರಣಕ್ಕೆ ಕೂಡ ಬ್ರೇಕ್ ಬಿದ್ದಿದೆ. ಸದ್ಯ ರಶ್ಮಿಕಾ ಮಂದಣ್ಣ ಹೈದರಾಬಾದ್‌ದಿಂದ ಮುಂಬೈಗೆ ತೆರಳಿದ್ದು ಇಂದು ಸಂಜೆ ನಡೆಯಲಿರುವ ಛಾವಾ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.