ದಕ್ಷಿಣ ಸಿನಿ ರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ರಶ್ಮಿಕಾ ಒಂದಲ್ಲಾ ಒಂದು ವಿಷಯವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ.
ರಶ್ಮಿಕಾ ಇದ್ದಲ್ಲಿ ಸುದ್ದಿ ಎನ್ನುವ ಹಾಗೆ ರಶ್ಮಿಕಾ ಎಲ್ಲೆಲ್ಲೂ ಕಾಣುತ್ತಿದ್ದಾರೆ.
ದಿನದಿಂದ ದಿನಕ್ಕೆ ರಶ್ಮಿಕಾಜನಪ್ರಿಯತೆ ಹಿಂದಿಗಿಂತಲೂ ಹೆಚ್ಚಾಗುತ್ತಿದೆ.
ದಕ್ಷಿಣದಲ್ಲಿ ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲೂ ಸಹಾ ಸದ್ದು, ಸುದ್ದಿ ಮಾಡುತ್ತಿದ್ದಾರೆ ರಶ್ಮಿಕಾ ಎನ್ನುವುದು ಸಹಾ ಎಲ್ಲರಿಗೂ ತಿಳಿದ ವಿಷಯವಾಗಿದೆ.
ಇನ್ನು ಸೋಷಿಯಲ್ ಮೀಡಿಯಾ ನಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟಿ ರಷ್ಮಿಕಾ ಅಲ್ಲಿ ತಮ್ಮ ಹೊಸ ಹೊಸ ಫೋಟೋ ಶೂಟ್ ಗಳ ಫೋಟೋಗಳನ್ನು, ಸಿನಿಮಾದ ವೀಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ.
ಈಗ ರಶ್ಮಿಕಾ ಅವರ ಹೊಸ ಫೋಟೋ ಶೂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿವೆ.ರಶ್ಮಿಕಾ ಹೊಸ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ