ಫಿಟ್ ಡ್ರೆಸ್ ಹಾಕಿ ರಶ್ಮಿಕಾ ಮಂದಣ್ಣ ಅವರು ಲಿಫ್ಟ್ ಏರುತ್ತಿರುವುದು ವೈರಲ್ ವಿಡಿಯೋದಲ್ಲಿದೆ. ರಶ್ಮಿಕಾ ಮಂದಣ್ಣ ಅವರಿಗೆ ಅನೇಕರು ಡ್ರೆಸ್ ಬಗ್ಗೆ ಪಾಠ ಹೇಳಿದ್ದರು. ಯಾವ ರೀತಿಯ ಡ್ರೆಸ್ ಹಾಕಬೇಕು ಎಂಬುದು ತಿಳಿಯುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು.
ಇದನ್ನೂ ಒದಿ ‘ಅನಾವರಣ’ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ… ಅರ್ಜುನ್ ಯೋಗಿ ಹಾಗೂ ಸಾರಿಕಾ ರಾವ್ ಜೋಡಿಯ ಗಾನಬಜಾನ..
ತಂತ್ರಜ್ಞಾನ ಮುಂದುವರಿದಿದೆ. ಇದರಿಂದ ಜನರಿಗೆ ಸಾಕಷ್ಟು ಲಾಭಗಳು ಆಗಿವೆ. ಅದೇ ರೀತಿ ಕೆಲವು ತೊಂದರೆಗಳು ಕೂಡ ಆಗುತ್ತಿವೆ. ಆರ್ಟಿಫೀಷಿಯಲ್ ಇಂಟಲಿಜೆನ್ಸ್ (ಎಐ) ಬಳಕೆ ಮಾಡಿಕೊಂಡು ಯಾರ ಮುಖವನ್ನು ಯಾರಿಗೆ ಬೇಕಿದ್ದರೂ ಅಂಟಿಸಬಹುದು. ಈಗ ಎಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ತಿರುಚಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ರಶ್ಮಿಕಾ ಮಂದಣ್ಣ ಎಂದು ಅನೇಕರು ತಪ್ಪಾಗಿ ಭಾವಿಸಿದ್ದಾರೆ. ಈ ವಿಡಿಯೋದ ಅಸಲಿತನ ಇಲ್ಲಿದೆ.
ಇದನ್ನೂ ಒದಿ “ದ ಜಡ್ಜ್ ಮೆಂಟ್” ಬಗ್ಗೆ ತಂತ್ರಜ್ಞರ ಮಾತು .
ಫಿಟ್ ಡ್ರೆಸ್ ಹಾಕಿ ರಶ್ಮಿಕಾ ಮಂದಣ್ಣ ಅವರು ಲಿಫ್ಟ್ ಏರುತ್ತಿರುವುದು ವೈರಲ್ ವಿಡಿಯೋದಲ್ಲಿದೆ. ರಶ್ಮಿಕಾ ಮಂದಣ್ಣ ಅವರಿಗೆ ಅನೇಕರು ಡ್ರೆಸ್ ಬಗ್ಗೆ ಪಾಠ ಹೇಳಿದ್ದರು. ಯಾವ ರೀತಿಯ ಡ್ರೆಸ್ ಹಾಕಬೇಕು ಎಂಬುದು ತಿಳಿಯುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಆದರೆ, ಅಸಲಿಗೆ ಇದು ರಶ್ಮಿಕಾ ಮಂದಣ್ಣನೇ ಅಲ್ಲ. ಯಾರೋ ಎಡಿಟ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಇದರ ಫ್ಯಾಕ್ಟ್ ಚೆಕ್ ಮಾಡಲಾಗಿದೆ. ಇದು ಅಸಲಿಗೆ ಜರಾ ಪಟೇಲ್ ಎಂಬುವವರ ವಿಡಿಯೋ. ಆಂಗ್ಲೋ ಇಂಡಿಯನ್ ಹುಡುಗಿ ಆಗಿರುವ ಇವರು ಅಕ್ಟೋಬರ್ 9ರಂದು ಲಿಫ್ಟ್ ಏರುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದರು. ಜರಾ ಅವರ ಮುಖಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಹಾಕಲಾಗಿದೆ. ಇದು ರಶ್ಮಿಕಾ ಮಂದಣ್ಣ ಎಂದೇ ಎಲ್ಲರಿಗೂ ಭಾಸವಾಗಿದೆ.
yes this is a strong case for legal https://t.co/wHJl7PSYPN
— Amitabh Bachchan (@SrBachchan) November 5, 2023
ಈ ಕುರಿತು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ವಿಡಿಯೋಗೆ ಸಂಬಂಧಿಸಿದ ಟ್ವೀಟ್ನ ರೀಟ್ವೀಟ್ ಮಾಡಿರುವ ಅಮಿತಾಭ್ ಬಚ್ಚನ್ ಅವರು, ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸರು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.