ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವು ಸ್ಟಾರ್‌ಗಳು ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಚರ್ಚೆಯಲ್ಲಿ ಇರುತ್ತಾರೆ. ಸಲ್ಮಾನ್ ಖಾನ್, ಪ್ರಭಾಸ್ ಜೊತೆಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮೊದಲಿಗರು. ಕೆಲವರು ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದರೆ, ಇನ್ನು ಕೆಲವರು ಡೇಟಿಂಗ್ ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಡೇಟಿಂಗ್ ವಿಚಾರಕ್ಕೆ ಸುದ್ದಿಯಲ್ಲಿ ಇದ್ದರು. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ. ಇವರಿಬ್ಬರೂ ಶೀಘ್ರವೇ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ, ಇದೂವರೆಗೂ ಇವರಿಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಬಹಿರಂಗ ಪಡಿಸಿಲ್ಲ. ಆದ್ರೀಗ ಇದೇ ಮೊದಲ ಬಾರಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಇತ್ತೀಚೆಗೆ ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದ ವೇಳೆ ಪುರುಷನ ಯಾವ ಗುಣ ಅವರನ್ನು ಆಕರ್ಷಿಸುತ್ತೆ ಅನ್ನುವ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ತಾನು ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಎನ್ನುವ ವಿಷಯವನ್ನು ಕನ್ಫರ್ಮ್ ಮಾಡಿದ್ದಾರೆ. “ಮನೆಯೇ ನನ್ನ ಹ್ಯಾಪಿ ಪ್ಲೇಸ್” ಎಂದು ಮಾತು ಆರಂಭಿಸಿದ್ದರು. ಯಶಸ್ಸು ಬರುತ್ತೆ ಹೋಗುತ್ತೆ. ಆದರೆ, ನನ್ನ ಮನೆಯಾಗಲೂ ಇರುತ್ತೆ. ಆಗ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ತನ್ನ ರಿಲೇಷನ್‌ಶಿಪ್ ಬಗ್ಗೆನೂ ಸುಳಿವನ್ನು ನೀಡಿದ್ದಾರೆ.
“ನನಗೆ ಅದೆಷ್ಟೇ ಪ್ರೀತಿ, ಖ್ಯಾತಿ ಸಿಕ್ಕದರೂ ನಾನು ಕೇವಲ ಒಬ್ಬಳು ಮಗಳು, ಒಬ್ಬಳು ಸಹೋದರಿ, ಕೇವಲ ಒಬ್ಬ ಸಂಗಾತಿ. ಆ ಖಾಸಗಿ ಜೀವನಕ್ಕೆ ನಾನು ಗೌರವವನ್ನು ನೀಡುತ್ತೇನೆ. ಸದ್ಯ ನಾನು ಈ ಎರಡೂ ಪ್ರಪಂಚವನ್ನು ಎಂಜಾಯ್ ಮಾಡುತ್ತೇನೆ. ಆದರೆ ನಾನು ಹೇಗೆಂದರೆ, ನನ್ನ ಈ ಜೀವನದಿಂದ ವೈಯಕ್ತಿಕ ಜೀವನವನ್ನು ಕಾಪಾಡಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.