ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನ ಅನ್ನೋ ಹಾಗಾಗಿದೆ. ಸಾಲು, ಸಾಲು ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಾಲಿವುಡ್ ಬಹುಬೇಡಿಕೆ ನಟ ವಿಕ್ಕಿ ಕೌಶಲ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪೀರಿಯಾಡಿಕಲ್ ಡ್ರಾಮಾ ‘ಛಾವಾ’ದ ಬಿಡುಗಡೆ ದಿನಾಂಕ ಸಮೀಪಿಸುತ್ತಿದೆ. ನಿನ್ನೆಯಷ್ಟೇ, ಚಿತ್ರದಿಂದ ವಿಕ್ಕಿ ಕೌಶಲ್ ಅವರ ಮೋಷನ್ ಪೋಸ್ಟರ್ ಅನಾವರಣಗೊಳಿಸಲಾಗಿತ್ತು. ವಿವಿಧ ನೋಟಗಳಲ್ಲಿ ನಾಯಕ ನಟನ ದರ್ಶನವಾಗಿತ್ತು. ಇದೀಗ ಚಿತ್ರದಿಂದ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆಗೊಳಿಸಲಾಗಿದೆ.
ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿಗೆ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಯಶುಬಾಯ್ ಮಹಾರಾಣಿಯಾಗಿ ರಶ್ಮಿಕಾ ಮಿಂಚಿದ್ದು, ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ರಶ್ಮಿಕಾ ಮಂದಣ್ಣ ಅವರ ಮಹಾರಾಣಿ ಗೆಟಪ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಫೋಟೋ ಫುಲ್ ವೈರಲ್ ಆಗಿದೆ. ಪೋಸ್ಟರ್ ಹಂಚಿಕೊಂಡ ನಿರ್ಮಾಪಕರು, “ಪ್ರತೀ ಮಹಾನ್ ರಾಜನ ಹಿಂದೆ, ಅಪ್ರತಿಮ ಶಕ್ತಿಯುಳ್ಳ ರಾಣಿ ನಿಂತಿರುತ್ತಾಳೆ. ರಶ್ಮಿಕಾ ಮಂದಣ್ಣ ಅವರನ್ನು ಸ್ವರಾಜ್ಯದ ಹೆಮ್ಮೆ, ಮಹಾರಾಣಿ ಯೇಸುಬಾಯಿಯಾಗಿ ಪರಿಚಯಿಸಲಾಗುತ್ತಿದೆ. ರಶ್ಮಿಕಾ ಮಂದಣ್ಣ ಯೇಸುಬಾಯಿ ನೋಟದಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಅವರ ರಾಜಮನೆತನದ ಮತ್ತು ಆಕರ್ಷಕ ನೋಟವು ನಿಜವಾಗಿಯೂ ಐತಿಹಾಸಿಕ ಪಾತ್ರದ ಸಾರವನ್ನು ಸೆರೆಹಿಡಿಯುತ್ತಿದೆ. ಅವರು ಪ್ರಬಲ ಪಾತ್ರವನ್ನು ನಿರ್ವಹಿಸುವುದನ್ನು ನೋಡುವುದು ಅದ್ಭುತ” ಎಂದು ತಿಳಿಸಿದ್ದಾರೆ. ಎಂದು ಬರೆದುಕೊಂಡಿದ್ದಾರೆ. ನ್ಯಾಷನಲ್ ಕ್ರಶ್ ಸೀರೆ ಧರಿಸಿ, ಅಲೌಕಿಕ ಸೌಂದರ್ಯ ಬೀರಿದ್ದಾರೆ.
ಪುಷ್ಪ 2 ಬಳಿಕ ರಶ್ಮಿಕಾ ಮಂದಣ್ಣ ಅವರು ಛಾವ ಸಿನಿಮಾದ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಛಾವ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜರ ಉತ್ತರಾಧಿಕಾರಿ ಛತ್ರಪತಿ ಸಾಂಭಾಜಿ ಮಹಾರಾಜ್ ಜೀವನನಾಧಾರಿತ ಚಿತ್ರ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಾಂಭಾಜಿ ಮಹಾರಾಜ್ ಪತ್ನಿ ಯಶುಬಾಯ್ ಮಹಾರಾಣಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ಇದೇ ಫೆಬ್ರವರಿ 14ರಂದು ಛಾವ ಬಿಡುಗಡೆ ಆಗುತ್ತಿದೆ.