ಈಗ ಸಿನಿಮಾದಿಂದ ರಶ್ಮಿಕಾ ಹೊರ ನಡೆದಿದ್ದಾರೆ. ಈ ವಿಚಾರವನ್ನು ಯಾರೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅನ್ನೋದು ಗಾಸಿಪ್ ಮಂದಿಯ ನಂಬಿಕೆ.ನಟಿ ರಶ್ಮಿಕಾ ಮಂದಣ್ಣ ಖ್ಯಾತಿ ಹೆಚ್ಚುತ್ತಿದೆ. ಹೊಸ ಹೊಸ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ.ಅವರು ಒಪ್ಪಿಕೊಂಡ ಸಿನಿಮಾದಿಂದ ಹೊರ ನಡೆದಿದ್ದು ಬಹಳವೇ ಕಡಿಮೆ. ಈಗ ಆ ರೀತಿಯ ಪರಿಸ್ಥಿತಿ ಬಂದೊದಗಿದೆ. ವೆಂಕಿ ಕುಡುಮುಲ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಅವರು ನಿತಿನ್ಗೆ ಜೊತೆಯಾಗಿ ನಟಿಸಬೇಕಿತ್ತು. ಆದರೆ, ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಈ ಜಾಗಕ್ಕೆ ದಕ್ಷಿಣದ ಖ್ಯಾತ ನಟಿಯ ಎಂಟ್ರಿ ಆಗಿದೆ ಅನ್ನೋದು ವಿಶೇಷ.
ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ಗೆ ಎಂಟ್ರಿಕೊಟ್ಟಿದ್ದು ‘ಚಲೋ’ ಸಿನಿಮಾ ಮೂಲಕ. ಈ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಯಶಸ್ಸು ಕಂಡಿತು. ಅದೇ ರೀತಿ ‘ಭೀಷ್ಮ’ ಸಿನಿಮಾ ಕೂಡ ಗೆದ್ದಿತ್ತು. ವೆಂಕಿ ನಿರ್ದೇಶನದ, ರಶ್ಮಿಕಾ-ನಿತಿನ್ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ನಿತಿನ್, ವೆಂಕಿ ಹಾಗೂ ರಶ್ಮಿಕಾ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ಬರುವುದರಲ್ಲಿತ್ತು. #VNRTrio ಎಂದು ಈ ಚಿತ್ರಕ್ಕೆ ತಾತ್ಕಾಲಿಕ ಶೀರ್ಷಿಕೆ ಇಡಲಾಗಿತ್ತು. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬಂದಿತ್ತು.
ಈಗ ಸಿನಿಮಾದಿಂದ ರಶ್ಮಿಕಾ ಹೊರ ನಡೆದಿದ್ದಾರೆ. ಈ ವಿಚಾರವನ್ನು ಯಾರೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅನ್ನೋದು ಗಾಸಿಪ್ ಮಂದಿಯ ನಂಬಿಕೆ. ಅಚ್ಚರಿ ಎಂದರೆ, ಈಗ ಹೊಸ ನಾಯಕಿಯ ಆಯ್ಕೆಯೂ ಶುರುವಾಗಿದೆ.
ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಈ ಆಫರ್ ನೀಡಲಾಗಿದೆ ಎನ್ನುವ ಸುದ್ದಿ ಹರಿದಾಡಿದೆ. ವೆಂಕಿ ಅವರು ಕೃತಿ ಅವರನ್ನು ಭೇಟಿ ಮಾಡಿದ್ದು, ಶೀಘ್ರವೇ ಎಲ್ಲವೂ ಫೈನಲ್ ಆಗಲಿದೆ ಎನ್ನಲಾಗುತ್ತಿದೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ. ಈ ಮೊದಲು ನಿತಿನ್ ಹಾಗೂ ಕೃತಿ ಒಟ್ಟಾಗಿ ನಟಿಸಿದ್ದರು ಅನ್ನೋದು ವಿಶೇಷ.ಒಂದೇ ಬಾರಿಗೆ ಇಷ್ಟು ಚಿತ್ರಗಳಿಗೆ ಡೇಟ್ಸ್ ಅಡ್ಜೆಸ್ಟ್ ಮಾಡಲು ಸಾಧ್ಯವಾಗದ ಕಾರಣ ರಶ್ಮಿಕಾ ನಿರ್ಮಾಪಕರ ಬಳಿ ಮಾತನಾಡಿ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ರಶ್ಮಿಕಾ ಹೊರನಡೆದಿರುವುದು ನಿತಿನ್ ಚಿತ್ರಕ್ಕೆ ನಿಜಕ್ಕೂ ದೊಡ್ಡ ನಷ್ಟ. ಏಕೆಂದರೆ ರಶ್ಮಿಕಾ ಇರುವ ಕಾರಣಕ್ಕೆ ಸಿನಿಮಾಗೆ ಪ್ಯಾನ್ ಇಂಡಿಯಾ ಕ್ರೇಜ್ ಸೃಷ್ಟಿ ಆಗಿತ್ತು. ಈ ಕಾರಣದಿಂದಲೇ ರಶ್ಮಿಕಾ ಬದಲಿಗೆ ಕೃತಿ ಶೆಟ್ಟಿ ಆಯ್ಕೆ ಮಾಡಿರುವ ಸಾಧ್ಯತೆ ಇದೆ.