Sandalwood Leading OnlineMedia

ಶೇಷಾಚಲಂಗೆ ಹೊರಟ ರಶ್ಮಿಕಾ! ಕಾರಣ ಏನು ಗೊತ್ತಾ?

ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಖುಷಿ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. ರಾತ್ರಿ ಪಾಳಿಯಲ್ಲಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೋಟೊವನ್ನು ಶೇರ್ ಮಾಡುವ ಮೂಲಕ ಥ್ರಿಲ್ಲಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ‘ಪುಷ್ಪ 2’ ಸೆಟ್ಟಿಗೆ ಬಂದ ಶ್ರೀವಲ್ಲಿ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಬದುಕಿನಲ್ಲಿ ಸೂಪರ್ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ಪುಷ್ಪ’ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ವಿಚಾರವನ್ನು ಸ್ವತ: ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರೀಸ್‌ನಲ್ಲಿ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ‘#ನೈಟ್ ಶೂಟ್’ ಅಂತ ಬರೆದುಕೊಂಡಿದ್ದಾರೆ. ಈ ಇನ್‌ಸ್ಟಾ ಸ್ಟೋರೀಸ್ ನೋಡುತ್ತಿದ್ದಂತೆ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

         

ಇದನ್ನೂ ಓದಿ:  `ಒಪ್ಪೋ’ಆ್ಯಡ್‌ನಲ್ಲಿ ಒಪ್ಪವಾಗಿ ನಟಿಸಿದ ರಾಜಮೌಳಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

‘ಪುಷ್ಪ 2’ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಪುಷ್ಪ’ ಚಾಪ್ಟರ್ 1ರಲ್ಲಿ ಶ್ರೀವಲ್ಲಿ ಪಾತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಹೀಗಾಗಿ ಎರಡನೇ ಪಾರ್ಟ್‌ನಲ್ಲಿ ಶ್ರೀವಲ್ಲಿ ಪಾತ್ರ ಹೇಗಿರುತ್ತೆ? ನಿರ್ದೇಶಕ ಸುಕುಮಾರ್ ಏನೆಲ್ಲ ಬದಲಾವಣೆಗಳನ್ನು ಮಾಡಿದ್ದಾರೆ ಅನ್ನೋ ಕುತೂಹಲ ಸಿನಿಪ್ರಿಯರಲ್ಲಿದೆ. ‘ಪುಷ್ಪ 2’ ಸಿನಿಮಾದ ಚಿತ್ರೀಕರಣ ತಿರುಪತಿ ಸಮೀಪದ ಶೇಷಾಚಲಂನಲ್ಲಿ ನಡೆಯುತ್ತಿದೆ. ರಶ್ಮಿಕಾ ಶೇರ್ ಮಾಡಿಕೊಂಡಿರುವ ಫೋಟೊವನ್ನು ಸೂಕ್ಷ್ಮವಾಗಿ ಗಮನಿಸಿ, ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿರಬಹುದು ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ. ಸದ್ಯ ಶ್ರೀವಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು, ಶೂಟಿಂಗ್ ಸೆಟ್ಟಿಗೆ ಅಲ್ಲು ಅರ್ಜುನ್ ಸೇರಿಕೊಳ್ಳಬೇಕಿದೆ.

         

ಇದನ್ನೂ ಓದಿ`ಜವಾನ್’ ಸಿನಿಮಾ ವಿಚಾರವಾಗಿ ಶಾರುಖ್ ಖಾನ್ ಕೊಟ್ಟ ಕರೆ ಏನು ಗೊತ್ತಾ?!

ಬದಲಾಗಿದೆ ಪುಷ್ಪ ರಾಜ್ ಗೆಟಪ್ ‘ಪುಷ್ಪ 2’ನಲ್ಲಿ ಅಲ್ಲು ಅರ್ಜುನ್ ಗೆಟಪ್ ಬದಲಾಗಿದೆ. ತಿರುಪತಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಗಂಗಮ್ಮ ಜಾತ್ರೆಯ ಸನ್ನಿವೇಶವನ್ನು ಈ ಸಿನಿಮಾ ತರಲಾಗುತ್ತಿದೆ. ಆ ಸನ್ನಿವೇಶದಲ್ಲಿ ಅಲ್ಲು ಅರ್ಜುನ್ ಗೆಟಪ್ ಹೇಗಿರುತ್ತೆ? ಅನ್ನೋದ ಝಲಕ್ ತೋರಿಸಿದ್ದಾರೆ. ‘ಪುಷ್ಪ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಿತ್ತು. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುಮಾರು 100 ಕೋಟಿ ರೂ. ಗಳಿಕೆ ಕಂಡಿತ್ತು. ಹೀಗಾಗಿ ‘ಪುಷ್ಪ 2’ ಸಿನಿಮಾವನ್ನು ಮತ್ತಷ್ಟು ಗ್ರ್ಯಾಂಡ್ ಆಗಿ ಶೂಟ್ ಮಾಡಲಾಗುತ್ತಿದೆ. ಹೀಗಾಗಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಈ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

 

       

Share this post:

Related Posts

To Subscribe to our News Letter.

Translate »