ರಶ್ಮಿಕಾ ಮಂದಣ್ಣ ವೃತ್ತಿ ಏರುಗತಿಯಲ್ಲಿಯೇ ಸಾಗುತ್ತಿದೆ. ಕನ್ನಡ ಸಿನಿಮಾದಿಂದ ನಟನೆಗೆ ಪದಾರ್ಪಣೆ ಮಾಡಿ ಈಗ ತೆಲುಗು, ತಮಿಳು ಹಾಗೂ ಬಾಲಿವುಡ್ನಲ್ಲಿಯೂ ಬೇಡಿಕೆಯ ನಟಿಯಾಗಿದ್ದಾರೆ. ಹಿಂದಿಯಲ್ಲಿ ದೊಡ್ಡ ಸ್ಟಾರ್ ನಟರುಗಳೊಟ್ಟಿಗೆ ನಟಿಸುವ ಅವಕಾಶವನ್ನು ರಶ್ಮಿಕಾ ಮಂದಣ್ಣ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಬಾಲಿವುಡ್ ಸ್ಟಾರ್ ನಟ ರಣ್ಬೀರ್ ಕಪೂರ್ ಜೊತೆ ನಟಿಸಿದ್ದ ‘ಅನಿಮಲ್’ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. ಇದೀಗ ಮತ್ತೊಬ್ಬ ಬಾಲಿವುಡ್ ಸೂಪರ್ ಸ್ಟಾರ್ ಜೊತೆ ನಟಿಸುವ ಅವಕಾಶ ರಶ್ಮಿಕಾ ಮಂದಣ್ಣರನ್ನು ಅರಸಿ ಬಂದಿದೆ.
ಇದನ್ನೂ ಓದಿ :ಚಂದನವನದ ಸ್ಟಾರ‍್ಸ್ ಗಳಿಂದ ರಿವೀಲ್ ಆಯ್ತು ಬಹುನಿರೀಕ್ಷಿತ `ಚಿತ್ತಾರ ಸ್ಟಾರ್ ಅವಾರ್ಡ್ಸ್-2024’ರ ನಾಮಿನೇಶನ್ಸ್
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ನ ಬೇಡಿಕೆಯ ನಟಿ. ಸೂಪರ್ ಸ್ಟಾರ್ಗಳ ಜೊತೆ ಸೂಪರ್ ಹಿಟ್ ಆಗುವಂತ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ಗೆ ಜೋಡಿಯಾಗಿದ್ದಾರೆ.
ಇದನ್ನೂ ಓದಿ :Bhagyalakshmi:ಅತ್ತೆ ಕುಸುಮಾ ಪಾಸ್, ಸೊಸೆ ಭಾಗ್ಯಾ ಕಥೆ ಏನಾಗುತ್ತೊ?
ಸಲ್ಮಾನ್ ಖಾನ್ ‘ಸಿಖಂದರ್’ ಹೆಸರಿನ ಆಕ್ಷನ್ ಥ್ರಿಲ್ಲರ್ ಸಿನಿಮಾನಲ್ಲಿ ನಟಿಸಲಿದ್ದಾರೆ ಈ ಸಿನಿಮಾವನ್ನು ಸಲ್ಮಾನ್ ಖಾನ್ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಕ್ಕೆ ತಮಿಳಿನ ಸೂಪರ್ ಹಿಟ್ ನಿರ್ದೇಶಕ ಮುರುಗದಾಸ್ ನಿರ್ದೇಶನ ಮಾಡಲಿದ್ದಾರೆ. ಭಾರಿ ಬಜೆಟ್ನ ಸಿನಿಮಾ ಇದಾಗಿದ್ದು, ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುರುಗದಾಸ್ ಅನುಭವಿ ಹಾಗೂ ಪ್ರತಿಭಾವಂತ ನಿರ್ದೇಶಕ ಆಗಿದ್ದು, ಸೋಲಿನ ಸುಳಿಯಲ್ಲಿರುವ ಸಲ್ಮಾನ್ ಖಾನ್ಗೆ ಹಿಟ್ ಸಿನಿಮಾ ನೀಡುವ ಪಣ ತೊಟ್ಟಿದ್ದಾರೆ.
‘ನೀವೆಲ್ಲರೂ ತುಂಬಾ ದಿನಗಳಿಂದ ಅಪ್ಡೇಟ್ ನೀಡಿ ಎಂದು ಕೇಳುತ್ತಿದ್ದೀರಿ, ಇಲ್ಲಿದೆ ನೋಡಿ….ಸರ್ಪ್ರೈಸ್. ಶಿಕಂದರ್ ಚಿತ್ರತಂಡದ ಜೊತೆ ಕೆಲಸ ಮಾಡಲು ತುಂಬಾನೇ ಖುಷಿಯಾಗುತ್ತಿದೆ’ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ್ದಾರೆ.