Left Ad
ಮುಂದಿನ ತಿಂಗಳು ರಶ್ಮಿಕಾ ಜೊತೆ ನಿಶ್ಚಿತಾರ್ಥ: ವಿಜಯ್ ದೇವರಕೊಂಡ ಟೀಂ ಹೇಳಿಕೆ - Chittara news
# Tags

ಮುಂದಿನ ತಿಂಗಳು ರಶ್ಮಿಕಾ ಜೊತೆ ನಿಶ್ಚಿತಾರ್ಥ: ವಿಜಯ್ ದೇವರಕೊಂಡ ಟೀಂ ಹೇಳಿಕೆ

ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಜೋಡಿ ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು.ಈ ಬಗ್ಗೆ ಇದೀಗ ವಿಜಯ್ ದೇವರಕೊಂಡ ಪಿಆರ್ ಟೀಂ ಸ್ಪಷ್ಟನೆ ನೀಡಿದೆ. ವಿಜಯ್ ಮತ್ತು ರಶ್ಮಿಕಾ ಹಲವು ದಿನಗಳಿಂದ ಡೇಟಿಂಗ್ ನಲ್ಲಿದ್ದಾರೆ, ಇಬ್ಬರೂ ಜೊತೆಯಾಗಿ ಓಡಾಡುತ್ತಿದ್ದಾರೆ ಎಂಬ ಸುದ್ದಿಯಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹಲವು ಬಾರಿ ಫೋಟೋಗಳು ವೈರಲ್ ಆಗಿದ್ದೂ ಇದೆ.

ಆದರೆ ಇದೀಗ ಇದ್ದಕ್ಕಿದ್ದಂತೆ ಇಬ್ಬರೂ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೇ ವಿಜಯ್ ತಂಡ ಸ್ಪಷ್ಟನೆ ನೀಡಿದ್ದು, ಸುದ್ದಿಗಳನ್ನು ಅಲ್ಲಗಳೆದಿದೆ.ಕೆಲವು ಸಮಯದಿಂದ ಇವರಿಬ್ಬರ ಮದುವೆಯ ಸುದ್ದಿ ಆಗಾಗ ವೈರಲ್ ಆಗುತ್ತಲೇ ಇದೆ.  ಈ ಹಿಂದೆ ಕೆಲವೊಮ್ಮೆ ರಶ್ಮಿಕಾ ಅಂತಹ ಸುದ್ದಿಗಳನ್ನು ಅಲ್ಲಗಳೆದಿದ್ದರು. ಆದರೆ ಈ ಬಾರಿ ಅವರು ಮಾತ್ರ ಯಾವುದೇ ಪ್ರತಿಕ್ರಿಯೆ ಕೊಡದೇ ಸುಮ್ಮನಾಗಿದ್ದಾರೆ.

 

Spread the love
Translate »
Right Ad